IMG-20240303-WA0063

ಅಭಿಮಾನಿಗಳ ಪ್ರೀತಿಗಳಿಂದ ನನ್ನ ಜೀವನ ಸಾರ್ಥಕ

ಕರುನಾಡ ಬೆಳಗು ಸುದ್ದಿ

ಕನಕಗಿರಿ, ೦೩- ಕನ್ನಡ ನಾಡಿನ ಜನರ ಹಾಗೂ‌ ಪ್ರೀತಿ ಪ್ರೇಮ ಲೋಕದಿಂದ ಇಲ್ಲಿಯವರೆಗೂ ಹಾಗೆ ಇದೆ ನಿಮ್ಮ ಪ್ರೀತಿಗೆ ನಾನು ಜೀವನವನ್ನೆ ಮುಡಿಪಾಗಿ‌ ಇಟ್ಟಿದ್ದೆನೆ ಎಂದು ಖ್ಯಾತ ಕಲಾವಿದ ರವಿಚಂದ್ರನ್ ಹೇಳಿದರು .
ಎರಡು ದಿನಗಳ ಕಾಲ ಜರುಗಿದ ಕನಕಗಿರಿ ಉತ್ಸವಕ್ಕೆ ರವಿವಾರ ರಾತ್ರಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಲ್ಲಿಯ ಜನರ ಪ್ರೀತಿ ಸದಾ ಇರಲಿ ಉತ್ಸವ ಹಾಗೂ ನಮ್ಮ ಚಿತ್ರರಂಗದಮೇಲೆ ಇರಲಿ ಎಂದ ಅವರು. ಸಚಿವ ಶಿವರಾಜ ತಂಗಡಗಿ ಶ್ರಮ ಸಾರ್ಥವಾಗಲಿ ಎಂದರು.
ಸಮಾರೋಪ ಸಮಾ ರಂಭದ ಸಾನಿಧ್ಯ ವಹಿಸಿ ಮಾತ ನಾಡಿದ ಕನಕಗಿರಿಯ ಶ್ರೀ ಚನ್ನ ಮಲ್ಲ ಸ್ವಾಮಿಗಳು ಉತ್ಸವ ಗಳಿಂದ ಇತಿಹಾಸವನ್ನು ನಾಡಿಗೆ ಪರಿಚಯಿಸುವ ಕೆಲಸ ನಡೆ ಯುತ್ತಿದೆ. ಜೀವನದಲ್ಲಿ ಸಾರ್ಥ ಕತೆ ಎಂದರೆ ಜನರ ಪ್ರೀತಿ, ವಿಶ್ವಾಸಗಳನ್ನು ಗಳಿಸುವಂತಹ ಕೆಲಸವನ್ನು ಮಾಡಬೇಕು. ಕನ್ನಡದ ಹೆಸರಾಂತ ನಟ ರವಿಚಂದ್ರನ್ ಅನೇಕ ಜನರ ಹೃದಯಗಳಲ್ಲಿ ಪ್ರೀತಿಯನ್ನು ಮೂಡಿಸುವ ಕೆಲಸ ಮಾಡಿ ದ್ದಾರೆ. ಕಣ್ಣ ಚೆನ್ನಾಗಿದ್ದರೆ ಸಾಲದು ಜಗತ್ತು ಚೆನ್ನಾಗಿರು ವಂತೆ ನೋಡಿಕೊಳ್ಳಬೇಕು. ಸಚಿವರು ಕನಕಗಿರಿ ಉತ್ಸವವನ್ನು ಮಾಡುವ ಮೂಲಕ ಕೀರ್ತಿ ತಂದಿದ್ದಾರೆ ಎಂದರು.


ಸಚಿವ ಶಿವರಾಜ ತಂಗಡಗಿ ಮಾತನಾಡಿ ಈ ಎರಡು ದಿನಗಳ ಕಾಲ ನಡೆದ ಉತ್ಸವ ಅತ್ಯಂತ ಅದ್ದೂರಿಯಾಗಿ ನಡೆದಿದೆ. ಉತ್ಸವದ ಜೊತೆ ಜೊತೆಗೆ ಅಭಿವೃದ್ಧಿಗೆ ಮುನ್ನುಡಿ ಯಾಗಿದೆ. ಕನಕಗಿರಿಯಲ್ಲಿ ಐತಿಹಾಸಿಕ ಬಾವಿಗಳು ಮತ್ತು ದೇವಸ್ಥಾನದ ಅಭಿವೃದ್ಧಿಗೆ ಚಿಂತನೆ ಮಾಡಲಾಗವುದು. ಹಂಪಿ ಉತ್ಸವದ ಮಾದರಿ ಯಲ್ಲಿ ಕನಕಗಿರಿ ಇತಿಹಾಸವನ್ನು ಉತ್ಸವದ ಮೂಲಕ ಪರಿಚಯಿಸಿ ರಾಷ್ಟç ಮಟ್ಟದಲ್ಲಿ ಹೆಸರು ವಾಸಿಯಾಗುವಂತೆ ಮಾಡ ಬೇಕಿದೆ.
ಜನರ ಬೇಡಿಕೆಯಂತೆ ಉತ್ಸವ ಮಾಡಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿ ದ್ದೇನೆ. ಜನರ ಋಣ ತೀರಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದರು.
ಉತ್ಸವದ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಧನ್ಯ ವಾದಗಳನ್ನು ಸಲ್ಲಿಸಿದರು. ಕಳೆದ ಎರಡು ದಿನ ಗಳಿಂದ ವಿವಿಧ ಕಲಾ ತಂಡ ಕಲಾವಿದರು ಕಾರ್ಯಕ್ರಮ ನೋಡಿದ ಜನತೆ ಸಂಭ್ರಮಿಸಿದರು.
ವೇದಿಕೆ ಮೇಲೆ ಖ್ಯಾತ ನಟ ರವಿಚಂದ್ರನ್, ಜಿಲ್ಲಾಧಿಕಾರಿ ನಲಿನ್ ಅತುಲ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!