ಕರ್ನಾಟಕ ಪರಿಶಿಷ್ಟ ಪಂಗಡ ರಾಜ್ಯ ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,12- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪರಿಶಿಷ್ಠ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ಸಭೆ ಜರುಗಿತು ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ ಮಾತನಾಡಿದರು.
ವಾಲ್ಮೀಕಿ ನಾಯಕ ಸಮುದಾಯಕ್ಕೆ ನಿರಂತರ ಅನ್ಯಾಯ ವಾಗುತಿದ್ದು ದೌರ್ಜನ್ಯ ತಡೆಗಟ್ಟಲು ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕ ಮಟ್ಟದಲ್ಲಿ ನಮ್ಮ ಸಂಘಟನೆಯನ್ನು ಹುಟ್ಟು ಹಾಕಲಾಗುವದು. ಶೋಷಣೆಗೊಳಗಾದ ಸಮುದಾಯವನ್ನುರಕ್ಷಿಸಲು ನಮ್ಮ ಸಂಘಟನೆ ನಿರಂತರ ಹೋರಾಟ ಮಾಡುತ್ತಿದೆ. ಕೊಪ್ಪಳ ಜಿಲ್ಲಾಧ್ಯಕ್ಷ ಶಂಕರಗೌಡ ಹನಮಗೌಡ ಸಾಲಭಾವಿ ಪ್ರತಿ ತಾಲೂಕಿನಲ್ಲಿ ಸಂಚಾರ ಮಾಡಿ ಸಮಾಜ ಸಂಘಟನೆ ಮಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಆದೇಶ ಪ್ರತಿಗಳನ್ನ ನೀಡಲಾಯಿತು
ಜಿಲ್ಲಾಧ್ಯಕ್ಷರಾಗಿ ಶಂಕರಗೌಡ ಹನಮಗೌಡ ಮಾಲಿ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಹೆಚ್ ಮದ್ಲೂರು, ಖಜಾಂಚಿ ಪಿಡ್ಡನಗೌಡ ಮಾಲಿಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ನಾಯಕ, ಯಲಬುರ್ಗಾ ತಾಲೂಕ ಅಧ್ಯಕ್ಷ ನಾಗರಾಜ ಪೂಜಾರ, ಕುಷ್ಠಗಿ ತಾಲೂಕ ಅಧ್ಯಕ್ಷ ಶರಣಗೌಡ ಮಾಲಿಪಾಟೀಲ್, ಕನಕಗಿರಿ ತಾಲೂಕ ಅಧ್ಯಕ್ಷ ಹನಮಂತಪ್ಪ ನಾಯಕ, ಗಂಗಾವತಿ ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ, ಕಾರಟಗಿ ತಾಲೂಕ ಅಧ್ಯಕ್ಷ ಬಸವರಾಜ ನಾಯಕ ಉಪಾಧ್ಯಕ್ಷರುಗಳಾದ ತಿಮ್ಮನಗೌಡ್ರ, ಕನಕರಾಯ ಹೊಸೂರು, ಯಮನೂರಪ್ಪ ತಳವಾರ, ಹನಮಗೌಡ ಮಾಲಿಪಾಟೀಲ್, ಶರಣು ಮಲ್ಲಿಗವಾಡ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು
