ಸಾಹಿತಿ ಅಕ್ಬರ್ ಕಾಲಿ ಮಿರ್ಚಿ ಕೃತಿಗೆ ಪ್ರಶಸ್ತಿ , ನಗದು ಭಹುಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,18- ಕಲಬುರ್ಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತದಲ್ಲಿ ಸ್ಥಾಪಿತ 2022 ರ ಶ್ರೀಮತಿ ಶಾಂತಾಬಾಯಿ ಉಪಳಾಂವಕರ ಪ್ರಶಸ್ತಿ ಭಾಗ್ಯನಗರದ ಸಾಹಿತಿ ಅಕ್ಬರ್ ಕಾಲಿಮಿರ್ಚಿಯವರ ‘ಲೋಕದ ಸಂತೆಯಲ್ಲಿ ನಿಂತ ಸಂತ’ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಪ್ರಮಾಣ ಪತ್ರ ಮತ್ತು ಐದು ಸಾವಿರ ರೂ. ಬಹುಮಾನ ಒಳಗೊಂಡಿದೆ.
ಕಲಬುರ್ಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ರವಿವಾರ ಜರುಗಿದ 9 ಕೃತಿಗಳ ಬಿಡುಗಡೆ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೆಕೆಆರ್ ಡಿಬಿ ಅಧ್ಯಕ್ಷರಾದ ಡಾ. ಅಜಯಸಿಂಗ್ ಉದ್ಘಾಟಿಸಿದರು.
ವೇದಿಕೆ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣ ಕಮಕನೂರ, ಕಾಲೇಜು ಪ್ರಿನ್ಸಿಪಾಲ್ ಡಾ. ರಾಜೇಂದ್ರ ಕೊಂಡಾ, ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣಿ, ಉಪಾಧ್ಯಕ್ಷರಾದ ಡಾ. ಸ್ವಾಮಿರಾವ್ ಕುಲಕರ್ಣಿ ಇತರರು ಉಪಸ್ಥಿತರಿದ್ದರು.
ಮಾಹಿತಿಗಾಗಿ ಅಕ್ಬರ್ ಕಾಲಿಮಿರ್ಚಿ
9731327829

