6472f04c-581c-4677-bbbc-968aa048f300

ವಿಶೇಷ ಚೇತನರಿಗೆ ಕಲ್ಯಾಣದ ಸಂಭ್ರಮ

 ಜಗತ್ತಿಗೆ ಮಾದರಿಯಾಗುವಂತೆ ಬದುಕಿ – ಗವಿ ಶ್ರೀ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,21- ಭಗವಂತ ಕರುಣಿಸಿದ ದೇಹದ ಯಾವುದೋ ಒಂದು ಅಂಗವೈಕಲ್ಯಯಾಗಿದೆಯಂದು ಪರಿತಪಿಸಬಾರದು, ಜಗತ್ತಿಗೆ ಮಾದರಿಯಾಗುವಂತೆ ಅಂಗವಿಕಲರ ಬದುಕಿ ತೋರಿಸಿ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಹೇಳದರು.

ರವಿವಾರ ಗವಿಮಠದಲ್ಲಿ ಇದೇ ಮೊದಲ ಭಾರಿಗೆ ‘ ಜೀವನ ಸಂಗಾತಿ ಜೊತೆಗೆ ಜೀವನೋಪಾಯ’ ಎನ್ನುವ ಘೋಷವಾಕ್ಯದಡಿ ವಿಶೇಷ ಚೆತನರ ಸಾಮೂಹಿಕ ವಿವಾಹ ಕಾರ್ಯಕ್ರಮದ ಸನಿಧ್ಯವಹಿಸಿ ಮಾತನಾಡುತ್ತಿದ್ದರು.

ಮನುಷ್ಯ   ಕಷ್ಟದ ಸಂದರ್ಭದಲ್ಲಿ ಆತ್ಮಹತ್ಯೆಯ ದಾರಿ ಹಾಗೂ ಆತ್ಮ ಪರಿವರ್ತನೆಯ ದಾರಿ ಎರಡೂ ತೋಚುತ್ತವೆ. ಕಷ್ಟಕ್ಕೆ ಹೆದರಿ ಸಾಯಲೂಬಹುದು ಅಥವಾ ಸಹನೆ, ಸಹಾನುಭೂತಿ, ಸಾಹಸದಿಂದ ಇತಿಹಾಸವನ್ನೇ ಸೃಷ್ಟಿಸಲೂಬಹುದು.

ಅದು ಅಂಗವಿಕಲತೆಯೇ ಹೊರತು ಬದುಕಿನ ವಿಕಲತೆಯಲ್ಲ. ಅಂಗವಿಕಲತೆಯು ಮನೋವಿಕಲತೆಗೆ ದಾರಿ ಮಾಡಿಕೊಡಬಾರದು. ನಾನು ಸೃಷ್ಟಿಸಿ ಸೃಜಿಸಿದ ಬದುಕನ್ನು ಕಂಡು ಭಗವಂತನೇ ಮೆಚ್ಚಿ, ನೀನು ಸೃಷ್ಠಿಸಿಕೊಂಡ ಬದುಕಿನ ಮುಂದೆ ನನ್ನದೇನು ಇಲ್ಲ ಅನ್ನುವ ಹಾಗೇ ಬದುಕಿ ಎನ್ನುವ ಆಶಯದಿಂದ ಅಂಗವಿಕಲರಿಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದೇವೆ  ಎಂದು ತಿಳಿಸಿದರು.

ನಾಡಿನ ಪ್ರಸಿದ್ದ ಶ್ರೀ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ 21 ಜೋಡಿ ಅಂಗವಿಕಲರ ದಾಂಪತ್ಯ ಜೀವನ ಆರಂಬಿಸಿದರು.  ಪ್ರತಿ ವರ್ಷ ಮುತ್ತೈದೆಯರಿಗೆ ಉಡಿ ತುಂಬಿ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ಈ ಬಾರಿ ಅಂಗವಿಕಲ‌ ಹೆಣ್ಣುಮಕ್ಕಳಿಗೆ ಮುತ್ತೈದೆ ಭಾಗ್ಯ ನೀಡಿ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಯಿತು,  ನವಬದುಕಿಗೆ ಕಾಲಿಟ್ಟ ದಂಪತಿಗೆ ಬೆಂಗಳೂರಿನ ಸೆಲ್ಕೊ ಫೌಂಡೇಷನ್‌ ಸಹಯೋಗದಲ್ಲಿ ಮಠವು ಜೀವನೋಪಾಯಕ್ಕೆ ಒಂದು ಝರಾಕ್ಸ್ ಯಂತ್ರ, ಪೆಟ್ಟಿ ಶಾಪ್ (ಸಣ್ಣ ಅಂಗಡಿ) ಸೌಲಭ್ಯ ಕಲ್ಪಿಸಿದೆ.

ಸಾಮೂಹಿಕ ವಿವಾಹದಲ್ಲಿ  ಬಿಜಕಲ್‌ನ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಘನಶ್ಯಾಮ ಬಾಂಡಗೆ, ಸೆಲ್ಕೊ ಕಂಪನಿ ವಲಯ ವ್ಯವಸ್ಥಾಪಕ ಮಂಜುನಾಥ ಭಾಗವತ್, ಜಿಲ್ಲಾ ವಿಶೇಷಚೇತನ ಹಾಗೂ ಕಲ್ಯಾಣ ಯೋಜನಾ ಅಧಿಕಾರಿ ಶ್ರೀದೇವಿ ನಿಡಗುಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶೃಂಗೇರಿ ಸೇರಿದಂತೆ  ಅನೇಕರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!