IMG-20260827-WA0039

ಕೊಪ್ಪಳ : ಸೆ , 4 ಮತ್ತು 5 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೨೭- ನಗರದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಸೆ.೪ ಮತ್ತು ೫ರಂದು ೨ ದಿನಗಳ ಕಾಲ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು ಕೃಷ್ಣಾಷ್ಠಮಿ ಅಂಗವಾಗಿ ಸೆ. ೧ರಿಂದ ೫ ರವರೆಗೆ ಪ್ರತಿದಿನ ಸಂಜೆ ೬ರಿಂದ ೭ ಗಂಟೆಗೆ ಪಂ.ರಘುಪ್ರೇಮಾಚಾರ್ಯ ಮುಳಗುಂದ ಇವರಿಂದ ಶ್ರೀ ಭಾಗವತ ಪ್ರವಚನ ಜರುಗಲಿದೆ.
ಸೆ.೪ರಂದು ಶುಕ್ರವಾರ ಕೃಷ್ಣಾಷ್ಠಮಿಯಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ವಿಠ್ಠಲ ಕೃಷ್ಣ ಹಾಗೂ ಶ್ರೀ ಮುಖ್ಯ ಪ್ರಾಣ ದೇವರಿಗೆ ಸುಪ್ರಭಾತ, ನಿರ್ಮಲಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ಸಂಜೆ ೬:೩೦ ಕ್ಕೆ ಶ್ರೀ ಕೃಷ್ಣನಿಗೆ ಬೆಣ್ಣೆ ಅಲಂಕಾರ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಕ್ಕಳಿಂದ ವೇಷಭೂಷಣ ಸ್ಪರ್ಧೆ ರಾತ್ರಿ ೧೨ಗಂಟೆ ೦೩ ನಿಮಿಷಕ್ಕೆ ಅರ್ಘ್ಯ ಪ್ರಧಾನ ಜರುಗಲಿದೆ.
ಸೆ.೫ರಂದು ಶನಿವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ವಿಠ್ಠಲ ಕೃಷ್ಣ ಹಾಗೂ ಶ್ರೀ ಮುಖ್ಯ ಪ್ರಾಣ ದೇವರಿಗೆ ಸುಪ್ರಭಾತ, ನಿರ್ಮಲಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ತೊಟ್ಟಿಲು ಸೇವೆ ಮಧ್ಯಾಹ್ನ ೪ಗಂಟೆಗೆ ಪ್ರವಚನ ೫:೩೦ಕ್ಕೆ ದೇವರ ಗ್ರಾಮ ಪ್ರದಕ್ಷಿಣೆ, ಗೋಪಾಲಕಾವಲಿ ಇತರ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

Leave a Reply

Your email address will not be published. Required fields are marked *

error: Content is protected !!