ಗಂಗಾವತಿಯಲ್ಲಿ ಏನೂ ಆಗಿಲ್ಲ ಪಕ್ಷದ ಅಭ್ಯರ್ಥಿ ಪರ ಸಿಎಂ ಪ್ರಚಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 8- ಲೋಕಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಸಿಎಂ ಸಿದ್ದರಾಮಯ್ಯ 27ರಂದು ಸಿಂಧನೂರು, 30ರಂದು ಗಂಗಾವತಿ ಹಾಗೂ ಮೇ 1ರಂದು ಕುಷ್ಟಗಿಗೆ ಆಗಮಿಸಲಿದ್ದಾರೆ. ಮತ್ತು ಏ.16ಕ್ಕೆ ನಾಮಪತ್ರ ಸಲ್ಲಿಕೆಯಾಗಲಿದ್ದು, ಸಚಿವರಾದ ಎಚ್.ಕೆ.ಪಾಟೀಲ್, ಸತೀಶ ಜಾರಕಿಹೊಳಿ, ಜಮೀರ್ ಖಾನ್ ಮತ್ತು ಶಾಸಕ ಲಕ್ಷ್ಮಣ ಸವದಿ ಬರುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗಾವತಿಯಲ್ಲಿ ಏನೂ ಆಗಿಲ್ಲ ಮೊನ್ನೆ ಅನ್ಸಾರಿ ಸಭೆ ಮಾಡಿದ್ದಾರೆ ಇಂದು ಕೂಡ ಸಭೆ ನಡೆದಿದೆ ಆದರೆ ಅನ್ಸಾರಿ ಹಾಗೆ ಮಾತನಾಡಬಾರದಿತ್ತು ಆಡಿಯೋಗೆ ಕುರಿತು ಪ್ರತಿಕ್ರಿಯಿಸಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿ ಕೆಲಸ ಮಾಡುತ್ತಿದೆವೆ ನನಗೆ ಎಲ್ಲರೂ ಅಷ್ಟೇ. ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ. ನನ್ನ ಸಚಿವ ಸ್ಥಾನ ತೆಗಿಬೇಕು ಎನ್ನುವ ಶ್ರೀನಾಥ ಅವರ ನುಡಿಗೆ ಬೆಸ್ಟ್ ಆಫ್ ಲಕ್ ಎಂದರು.
ಜಿಲ್ಲೆಯ ಗಂಗಾವತಿಯಲ್ಲಿ ಎಷ್ಟೇ ಬಣಗಳಿದ್ದರೂ ಅದರಿಂದ ಪಕ್ಷದ ಮೇಲೆ ಪರಿಣಾಮ ಬೀರಲ್ಲ ಗ್ಯಾರಂಟಿ ಯೋಜನೆಗಳೆ ನಮಗೆ ಶ್ರೀರಕ್ಷೆ ಎಲ್ಲರೂ ಕಾಂಗ್ರೆಸ್ ಗೆ ಮತ ಹಾಕುತ್ತಾರೆ.
ಗಂಗಾವತಿಯಲ್ಲಿ ಅತಿ ಹೆಚ್ಚು ಮತಗಳ ಲೀಡ್ ಬರಲಿದೆ. ಅನ್ಸಾರಿ ಮತ್ತು ಎಚ್.ಆರ್ ಶ್ರೀನಾಥ್ ನಡುವೆ ಬಹಳ ವರ್ಷಗಳಿಂದ ಆಳವಾದ ಮನಸ್ತಾಪವಿದೆ. ಆದರೆ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸಿ, ದೆಹಲಿಗೆ ಕಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಕ್ತಿ ; ಪಕ್ಷದ ಹೈಕಮಾಂಡ್ ನಿಂದ ಐದು ಗ್ಯಾರಂಟಿ ಬಿಡುಗಡೆ ಮಾಡಲಾಗಿದ್ದು, ಒಂದು ಲಕ್ಷ ವೇತನ, ರೈತರ ಸಾಲ ಮನ್ನಾ, ನರೇಗಾ ಕೂಲಿ 400ರೂ. ಏರಿಕೆ, ರಾಷ್ಟ್ರ ವ್ಯಾಪ್ತಿಯಲ್ಲಿ ಜಾತಿ ಜನಗಣತಿ ಮಾಡಲಾಗುವುದು. ಈ ಸಂಬಂಧ ಸಭೆ ನಡೆಸಿ ಮುಖಂಡರಿಗೆ, ಕಾರ್ಯಕರ್ತರಿಗೆ ವಿಷಯ ತಿಳಿಸಲಾಗಿದೆ. ಅವರ ಮೂಲಕ ಜನರಿಗೆ ನಮ್ಮ ಪ್ರಣಾಳಿಕೆ ತಲುಪಿಸಲಾಗುವುದು ಪಕ್ಷದ ಗ್ಯಾರಂಟಿಗಳೆ ನಮ್ಮ ಗೆಲುವಿಗೆ ಶಕ್ತಿ ಎಂದರು.
ಈಗಾಗಲೇ ಕುಷ್ಟಗಿಯಲ್ಲಿ ಪ್ರಚಾರ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಒಂದುವರೆ ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ. ಸಿಎಂ ನುಡಿದಂತೆ ನಡೆದಿದ್ದಾರೆ. ಬಿಜೆಪಿ ಹತ್ತು ವರ್ಷದಲ್ಲಿ ಹೇಳಿದ ಒಂದೂ ಭರವಸೆ ಈಡೇರಿಸಿಲ್ಲ ಎಂದು ಕುಟುಕಿದರು.
ಜನರಿಗೆ ಉತ್ತರ ಕೊಡಲಿ : ಪುಲ್ವಾಮಾ ದಾಳಿ ಆದಾಗ ಕಾರಣರಾದವರನ್ನು ಹಿಡಿದು ಶಿಕ್ಷಿಸುವುದಾಗಿ ಹೇಳಿ ಐದು ವರ್ಷ ಆಯ್ತು ಏನಾಗಿದೆ ಎಂದು ದೇಶದ ಜನರಿಗೆ ಉತ್ತರ ಕೊಡಬೇಕಲ್ಲವೆ ಯಾರು ದಾಳಿ ಮಾಡಿದರು, ಯಾರಿಗೆ ಶಿಕ್ಷೆ ಆಗಿದೆ.
ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. 168 ಲಕ್ಷ ಕೋಟಿ ರೂ. ಸಾಲ ಆಗಿದೆ. ಶೇ.83ರಷ್ಟು ನಿರುದ್ಯೋಗ ಇದೆ. ಈ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ನೋವಾಗುತ್ತದೆ. ಯಾವೊಂದು ಅಭಿವೃದ್ಧಿ ಕೆಲಸ ಮಾಡದೆ ಮತ ಕೇಳಲು ರಾಜ್ಯಕ್ಕೆ ಬರಲು ನಾಚಿಕೆ ಆಗಲ್ವಾ ಎಂದು ದುರಿದರು.
ಬರ ಪರಿಹಾರ ನೀಡಿಲ್ಲಾ : ಅಮಿತ್ ಷಾ ಅವರು ಬರ ಪರಿಹಾರ ನೀಡಲು ಮನವಿ ಸಲ್ಲಿಕೆ ತಡವಾಗಿದೆ ಎಂದು ಸುಳ್ಳು ಹೇಳಿದರು. ಸಿಎಂ ಸವಾಲು ಹಾಕಿದ್ದಾರೆ.
ಈ ಬಗ್ಗೆ ಬಿಜೆಪಿಯವರು ಮಾತನಾಡಲಿ. ಅವರಿಗೆ ಧರ್ಮ, ಜಾತಿ, ಮಂದಿರ ಬಗ್ಗೆ ಮಾತನಾಡುತ್ತಾರೆ ಕೊನೆಗೆ ಅಂಜನಾದ್ರಿ ಬೆಟ್ಟಕ್ಕೆ ಬರುತ್ತಾರೆ. ಮೋದಿ ನೋಡಿ ಮತ ಹಾಕಿ ಎನ್ನುತ್ತಾರೆ ಅವರು ಏನು ಮಾಡಿದ್ದಾರೆ ಹತ್ತು ವರ್ಷದಲ್ಲಿ ಅವರು ಮಾಡಿದ ಸಾಧನೆ ಪಟ್ಟಿ ಹಿಡಿದು ಚರ್ಚೆಗೆ ಬರಲಿ ನಾವು ಕಾಂಗ್ರೆಸ್ ಮಾಡಿದ ಕೆಲಸಗಳ ಬಗ್ಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ.
ಮೋದಿ ಬರುವ ಮುನ್ನ ದೇಶದಲ್ಲಿ ಭದ್ರತೆ ಇರಲಿಲ್ಲವಾ ? ಕೈಗಾರಿಕೆ, ನೀರಾವರಿ ಯೋಜನೆಗಳಿರಲಿಲ್ಲವಾ ? ಒಂದೆರೆಡು ಬಾರಿ ಸುಳ್ಳು ಹೇಳಿದರೆ ಕೇಳುತ್ತಾರೆ ಇನ್ನು ಜನರ ಮುಂದೆ ಆಟ ನಡೆಯಲ್ಲ. ದೇಶದಲ್ಲಿ ಇಂಡಿಯಾ ಒಕ್ಕೂಟ, ಜಿಲ್ಲೆಯಲ್ಲಿ ರಾಜಶೇಖರ ಹಿಟ್ನಾಳ ಗೆದ್ದೆ ಗೆಲ್ಲಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ರಾಹುಲ್ ಗಾಂಧಿ, ಖರ್ಗೆ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಸಿದ್ಧ ಮಾಡಿದ್ದಾರೆ ರಾಜ್ಯದಲ್ಲಿ ಐದು ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನ ಆಗಿವೆ ಹೀಗಾಗಿ ದೇಶದ ಜನರಿಗೆ ಅವನ್ನು ನೀಡಲು ಘೋಷಿಸಲಾಗಿದೆ ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆಯ ನ್ಯಾಯ ಇದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣ ಇಟ್ಟಂಗಿ, ಕೃಷ್ಣರಡ್ಡಿ ಗಲಬಿ, ರೆಡ್ಡಿ ಶ್ರೀನಿವಾಸ್, ರವಿ ಕುರುಗೋಡ ಸೇರಿದಂತೆ ಇನ್ನಿತರರಿದ್ದರು.
