WhatsApp Image 2024-02-13 at 7.54.11 PM

ಗೃಹ ಪ್ರವೇಶದಲ್ಲಿ ಗಮನ ಸೆಳೆಯುತ್ತಿರುವ ಮತಚಲಾಯಿಸಿ ಮೋದಿ ಮಗದೊಮ್ಮ ಬ್ಯಾನರ್‌

ಕರುನಾಡ ಬೆಳಗು ಸುದ್ದಿ

ಗಂಗಾವತಿ,14- ಸಾಮಾನ್ಯವಾಗಿ ಮದುವೆ, ಉಪನಯನ, ಜವಳ, ಗೃಹ ಪ್ರವೇಶದಂತ ಕಾರ್ಯಕ್ರಮದಲ್ಲಿ ಜನ ತಮ್ಮ ಕುಟುಂಬದ ವೈಯಕ್ತಿಕ ಮಾಹಿತಿಯನ್ನು ಹಾಕಿಸುವುದು ರೂಢಿ. ಆದರೆ ಅಲ್ಲಲ್ಲಿ ಕೆಲವರು, ಜನ, ಜಾಗೃತಿ ಮೂಡಿಸುವಂತಹ ಸಾಮಾಜಿಕ ಹೊಣೆಗಾರಿಕೆ ವಹಿಸುತ್ತಾರೆ.

ನಗರದಲ್ಲಿರುವ ಅಶೋಕ ಜ್ಯುವಲರಿ ಎಂಬ ಅಂಗಡಿ ಮಾಲಿಕ ಅಶೋಕ ರಾಯ್ಕರ್, ಫೆ. 14ರಂದು ಇರುವ ತಮ್ಮ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಜನರನ್ನು ಸ್ವಾಗತಿಸಿ ಹಾಕಿರುವ ಬ್ಯಾನರ್ ಇದೀಗ ಸಾರ್ವಜ ನಿಕರ ಗಮನ ಸೆಳೆಯುವಂತೆ ಮಾಡಿದೆ.

ಬ್ಯಾನರ್‌ ಬಹುತೇಕ ಭಾಗದಲ್ಲಿ ತಮ್ಮ ಗೃಹ ಪ್ರವೇಶದ ವೈಯಕ್ತಿಕ ಮಾಹಿತಿ ಹಾಕಿರುವ ಅಶೋಕ ರಾಯ್ಕರ್, ಕೊನೆಯಲ್ಲಿ ಮತಚಲಾಯಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಬಾರಿ ಮೋದಿ ಮಗದೊಮ್ಮೆ ಎಂದು ಬ್ಯಾನರ್‌ನಲ್ಲಿ ಹಾಕಿದ್ದಾರೆ.

ಈ ಮೂಲಕ ನರೇಂದ್ರ ಮೋದಿ ಮತ್ತೊಮ್ಮ ದೇಶದ ಪ್ರಧಾನಿಯಾಗಬೇಕು ಎಂದು ಸಂದೇಶ ರವಾನಿಸಿದ್ದಾರೆ. ಇಲ್ಲಿನ ಜಯನಗರದಿಂದ ಕೊಪ್ಪಳದ ಬೈಪಾಸ್ ರಸ್ತೆಯಲ್ಲಿರುವ ಮಹಾನ್ ಕಿಡ್ ಶಾಲೆಯ ಮುಂದೆ ಈ ಫಲಕ ಅಳವಡಿಸಲಾಗಿದೆ.

ಮತ್ತೊಂದು ವಿಶೇಷ ಎಂದರೆ ಹಿಂದುತ್ವದ ಖಟ್ಟರ್ ವಿರೋಧಿ ಧೋರಣೆ ಹೊಂದಿರುವ, ಬಿಜೆಪಿಯ ವಿರೋಧಿ ಎಂದು ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಮುಕುಂದರಾವ್ ಭವಾನಿಮಠ ಅವರ ಮನೆ ಮುಂದೆಯೇ ಈ ಬ್ಯಾನರ್ ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!