IMG-20240302-WA0054

ಕನಕಗಿರಿ ಉತ್ಸವ: ತೋಟಗಾರಿಕೆ ಇಲಾಖೆಯಿಂದ ಆಕರ್ಷಕ ಮಾದರಿ ಫಲ-ಪುಷ್ಪ ಪ್ರದರ್ಶನ

ಕರುನಾಡ ಬೆಳಗು ಸುದ್ದಿ

ಕನಕಗಿರಿ: ಕನಕಗಿರಿ ಉತ್ಸವದ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಮಾರ್ಚ 2 ರಿಂದ 3 ರವರೆಗೆ ೨ ದಿನಗಳ ಕಾಲ ಪಟ್ಟಣದ ಎ.ಪಿ.ಎಮ್.ಸಿ ಸಮುದಾಯ ಭವನ ಹಿಂಭಾಗದ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನ-2024 ಕ್ಕೆ ಸಚಿವರಾದ ಶಿವರಾಜ ತಂಗಡಗಿ ಅವರು ಶುಕ್ರವಾರ ಚಾಲನೆ ನೀಡಿ, ಅವರು ವಿವಿಧ ರೀತಿಯ ಸ್ಥಬ್ದ ಚಿತ್ರಗಳ ಉದ್ಘಾಟನೆ ನೆರವೇರಿಸಿ ಹಾಗೂ ಮಾದರಿ ಫಲ-ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.

ಪಟ್ಟಣದ ಉಡಚಪ್ಪ ನಾಯಕನ ಮುಖ್ಯವೇದಿಕೆಯ ಎಡಭಾಗದಲ್ಲಿ ಶನಿವಾರ ತೋಟಗಾರಿಕಾ ಇಲಾಖೆ ಮತ್ತು ಕೃಷಿ ಇಲಾಕೆಯ ಆಶ್ರಯದಲ್ಲಿ ಕನಕಗಿರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಮತ್ತು ಕೃಷಿ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ದೊರೆಯಿತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಇವರ ಭಾವಚಿತ್ರದೊಂದಿಗೆ ತತ್ವಾದರ್ಶನಗಳನ್ನು ಸಾರುವ ಕೆಲಸವಾಯಿತು. ಬುದ್ಧನ ಮೂರ್ತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಟೌಟ್ಗಳನ್ನು ಅಳವಡಿಸಿ, ಇವರ ಸಂದೇಶಗಳ ಫಲಕಗಳನ್ನು ಹಾಕಲಾಗಿತ್ತು. ಕಲ್ಲಂಗಡಿ ಹಣ್ಣಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳನ್ನು ಬಿಡಿಸಲಾಗಿತ್ತು.

ವಿವಿಧ ಬಗೆಯ ಹೂ, ಹಣ್ಣಿನ ಮಾದರಿಗಳುಕನಕಗಿರಿ ಉತ್ಸವ ರ ವಿಶೇಷವಾಗಿ ಕನಕಗಿರಿಯಲ್ಲಿ ಈ ಬಾರಿ ತೋಟಗಾರಿಕೆ ಇಲಾಖೆಯು ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನವು ತುಂಬಾ ಆಕರ್ಷಣೀಯವಾಗಿದ್ದು, ಜನರನ್ನು ತನ್ನತ್ತ ಕೈಬೀಸಿ ಕರೆಯುವಂತಿದೆ. ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂವಿನ ಮತ್ತು ಹಣ್ಣಿನ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಹೂವಿನ ಜೋಡಣೆ ಮುಖಾಂತರ ವಿವಿಧ ರೀತಿಯ ಮಾದರಿಯ ಸ್ತಭ್ಧ ಚಿತ್ರಗಳ ಮೂಲಕ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಸ್ಥಬ್ದ ಚಿತ್ರಗಳ ಆಕರ್ಷಣೀಯ ಮಾದರಿಗಳು: ಫಲಪುಷ್ಟ ಪ್ರದರ್ಶನದಲ್ಲಿ ವಿಶೇಷವಾಗಿ ನಾಡದೇವತೆಯಾದ ಭುವನೇಶ್ವರಿ ದೇವಿ, ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರು, ಶ್ರೀ ಭಗವಾನ್ ಬುದ್ಧ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್, ಸಂವಿಧಾನ ಪುಸ್ತಕದ ಮುಖಪುಟದ ಸ್ತಭ್ಧ ಚಿತ್ರಗಳು ಹಾಗೂ ಕನಕಗಿರಿಯ ತೋಟಗಾರಿಕೆ ಹೈಟೆಕ್ ಟೆಕ್ನಾಲಜಿ ಪಾರ್ಕನ್ ಮಾದರಿ ಮುನ್ನೋಟ, ಕನಕಚಲಪತಿ ದೇವಸ್ಥಾನದ ಗೋಪುರಗಳ ಸ್ತಭ್ಧ ಚಿತ್ರ ವಿವಿಧ ಮಾದರಿಯ ಅಲಂಕಾರಿಕ ಗಿಡಗಳ ಜೋಡಣೆ, ಕ್ಯಾಕ್ಟಸ್ ಮಾದರಿ, ವರ್ಟಿಕಲ್ ಮಾದರಿ, ತ್ರೀಕೋನಾಕಾರ ಅಲಂಕಾರಿಕ ಗಿಡಗಳ ಮಾದರಿ,

ಸಿರಿಧಾನ್ಯಗಳಾದ ಸಜ್ಜೆ, ನವಣೆ, ರಾಗಿ, ಜೋಳಗಳನ್ನು ಬಳಕೆ ಮಾಡಿ ಭುವನೇಶ್ವರಿ ದೇವಿಯ ಮೂರ್ತಿಯನ್ನು ನಿರ್ಮಿಸಿದ್ದು, ಕೃಷಿ ಇಲಾಖೆಯ ಶ್ರಮವನ್ನು ತೋರಿಸುವಂತಿತ್ತು. ಅಲ್ಲದೇ ಮೈಸೂರಿನ ದಸರಾ ಉತ್ಸವವನ್ನು ನೆನಪಿಸುವಂತೆ ಆನೆಯ ಮೇಲೆ ಅಂಬಾರಿಯು ಅದ್ಧೂರಿಯಾಗಿ ಕಂಡುಬAದಿತು. ಅಲ್ಲದೇ ಅಯೋಧ್ಯೆಯ ಶ್ರೀರಾಮಚಂದ್ರನ ತತ್ವಗಳ ಫಲಕವೂ ಎಲ್ಲರಿಗೂ ತಿಳುವಳಿಕೆ ನೀಡಿತು. ವಿವಿಧ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

==

ಸೇವಂತಿ, ಪೆಟೋನಿಯಾ, ತುಜಾ ಸೇರಿದಂತೆ 30ರಿಂದ 40 ತರಹದ ವಿವಿಧ ಹೂವಿನ ಕುಂಡಲಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ತರಹೇವಾರಿ ಹೂವುಗಳು ನೋಡುಗರ ಕಣ್ಣುಗಳಿಗೆ ಮುದ ನೀಡಿತು. ರಂಗೋಲಿಯಲಿ ನಟ ಡಾ.ರಾಜಕುಮಾರ್ ಮತ್ತು ಪುನೀತ್ರಾಜಕುಮಾರ್ ಭಾವಚಿತ್ರವು ಅಭಿಮಾನಿಗಳಿಗೆ ಸಂತಸ ತರಿಸಿತು. ಅಲ್ಲದೇ ಸಂವಿಧಾನದ ಮುಖಪುಟವು ಅರಳಿದ್ದು, ಇಲ್ಲಿಯೂ ಸಂವಿಧಾನ ಜಾಗೃತಿ ಮೂಡಿಸಲಾಗಿದೆ :

ಉಪನಿರ್ಧೇಶಕ ಕೃಷ್ಣ ಉಕ್ಕಂದ

Leave a Reply

Your email address will not be published. Required fields are marked *

error: Content is protected !!