
ಜೆಡಿಎಸ್ ಕೋರ್ ಕಮಿಟಿಯಿಂದ ಬರ ಅಧ್ಯಯನ
ಕರುನಾಡ ಬೆಳಗು ಸುದ್ದಿ
ಕುಕನೂರು15- ಬರ ಪರಿಸ್ಥಿತಿ ಕುರಿತು ಕೋಪ್ಪಳ ಜಿಲ್ಲಾ ಜೆಡಿಎಸ್ ಜಿಲ್ಲೆ ಹಾಗೂ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿತು. ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ನೇತೃತ್ವದ ತಂಡ ಬುಧವಾರ ಕುಕನೂರು ತಾಲೂಕಿನ ನೆಲಜೇರಿ ಗ್ರಾಮದ ಹೊಲಕ್ಕೆ ಭೇಟಿ ನೀಡಿ, ಮಳೇ ಇಲ್ಲದೆ ನಷ್ಟ ಹೊಂದಿದ ಮೆಕ್ಕೆಜೋಳ ಪರಿಶೀಲಿಸಿ ರೈತರಿಗೆ ಸಾಂತ್ವನ ನೀಡಿದರು.
ರಾಜ್ಯದಲ್ಲಿ ಭೀಕರ ಬರ ಇದ್ದರೂ ರಾಜ್ಯ ಸರಕಾರ ರೈತರಿಗೆ ಸ್ಪಂದನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿ, ಸರಕಾರದ ವೈಫಲ್ಯ ಖಂಡಿಸಿ ಮಾಜಿ ಸಿ.ಎಂ.ಕುಮಾರಣ್ಣ ನೇತೃತ್ವದಲ್ಲಿ ಸಾಂತ್ವನ ಯಾತ್ರೆ ನಡೆಸಿ ಡಿಸೆಂಬರ್ ನಲ್ಲಿ ಆರಂಭವಾಗುವ ವಿಧಾನಸಭಾ ಚಳಿಗಾಲ ಅಧಿವೇ ಶನದಲ್ಲಿ ರೈತರ ಪರ ಧ್ವನಿ ಎತ್ತಲು ನಿಧ ೯ರಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಮಹಾಂತಯ್ಯನ್ಮಠ, ಜಿಲ್ಲಾ ಕಾಯ೯ದಶಿ೯ ಮಂಜುನಾಥ್ ಸೊರಟೂರ್, ಯಲಬುಗಾ೯ ತಾಲೂಕು ಅಧ್ಯಕ್ಷ ಮಲ್ಲನಗೌಡ. ಕೊನನ ಗೌಡರ, ಶರಣಪ್ಪ ರಾಂಪುರ, ಚನ್ನಪ್ಪ ಮುತ್ತಾಳ, ಶರಣಪ್ಪ ಪಾಟೀಲ್, ಬಸವರಾಜ್ ,ಶರಣಪ್ಪ ತಳವಾರ್, ಪಂಪನಗೌಡ ಮಾಲಿಪಾಟೀಲ್, ದ್ಯಾಮಣ್ಣ ದೊಳ್ಳಿನ್, ಬಸವರಾಜ್ ಗುಳಗುಳಿ ಮೊದಲಾದವರು ಇದ್ದರು