a9f122c4-c6a5-4b29-973e-2f738190eacf

                                                             ಕಾರ್ಖಾನೆಯ ಕರಿ ದೂಳು
                ಜೀವ ರಾಶಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ :ಜಿಲ್ಲಾಡಳಿತ ಕಡೆ ಜನರ ದೃಷ್ಟಿ

ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ ನ.15:  ಕಾರ್ಖಾನೆಯ  ಚಿಮಿನಿ ಮೂಲಕ ಶೋದಿಸಿ ಬಿಡಬೇಕಾದ ಧೂಳು, ಬಿಎಂಎಂ ಕಾರ್ಖಾನೆಯಿಂದ ಹಾಗೆ ಬಿಡುತ್ತಿರುವುದರಿಂದ ಕಾರ್ಖಾನೆಯ ಒಳಾ ಆವರಣದಿಂದ ಗಾಳಿಯ ಮೂಲಕ ದಟ್ಟವಾದ ದೂಳು ಜನವಸತಿಕಡೆ ಬಿಡುತ್ತಿದ್ದುದ್ದರಿಂದ. ಇಡೀ ರಸ್ತೆಯಲ್ಲಿ ಜನರು ಮುಖಕ್ಕೆ ಬಟ್ಟೆ ಸುತ್ತಿ ಕೊಂಡು ಚಲಿಸುತ್ತಿದ್ದಿದ್ದು ಮಂಗಳವಾರ ಮಧ್ಯಾಹ್ನ ಮರಿಯಮ್ಮನ ಹಳ್ಳಿ ರಸ್ತೆ ಯಲ್ಲಿ ಕಂಡು ಬಂದಿತು.

ಈ ಭಾಗ ದಲ್ಲಿ ಬಿಎಂಎಂ ಕಾರ್ಖಾನೆ ಪ್ರಾರಂಭವಾಗಿ ಸುಮಾರು 20ವರ್ಷ ಕಳೆದಿವೆ. ಕಾರ್ಖಾನೆಯ ದೂಳಿನಿಂದಾಗಿ, ಈ ಭಾಗದ ಗ್ರಾಮೀಣ ವಾತಾವರಣ ಕಲುಷಿತವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಧಿಕಾರಿಗಳ ಬಗ್ಗೆ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ.

ಕಾರ್ಖಾನೆಗಳ ಧೂಳಿನಿಂದಾಗಿ ಸ್ಥಳೀಯವಾಗಿ ವಾಸಿಸುವ ಜನರಲ್ಲಿ ಈಗಾಗಲೇ ಚರ್ಮ ವ್ಯಾಧಿಗಳು ಕ್ಯಾನ್ಸರ್, ಟಿಬಿ ಯಂಥಹ ಮಾರಕ ಕಾಯಿಲೆಗಳಿಂದ ಜನರು ಬಳಲುತ್ತಿದ್ದಾರೆ. ಸ್ಥಳೀಯ ಆಡಳಿತ ಮತ್ತು
ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕಿದೆ.

Leave a Reply

Your email address will not be published. Required fields are marked *

error: Content is protected !!