ಹೊಸಪೇಟೆಯ ಪ್ರೀಡಂ ಪಾರ್ಕ್ ನಲ್ಲಿ ಜೈ ಗದಾ ಕೇಸರಿ
ಸಿನಿಮಾ ಪ್ರಮೋಷನ್ ಪೋಸ್ಟರ್ ಬಿಡುಗಡೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 5- ಜುಲೈ ಒಂದು ಪತ್ರಿಕಾ ದಿನಾಚರಣೆ ಹಾಗೂ ವೈದ್ಯಾಧಿಕಾರಿಗಳ ದಿನಾಚರಣೆ ದಿನದಂದು ಸಮಾಜದಲ್ಲಿ ಅವಿರತ ಸೇವೆ ಸಲ್ಲಿಸಿದವರನ್ನು ಗುರುತಿಸಿ ವೇದಿಕೆಮೇಲೆ ಸನ್ಮಾನಿಸಿ ಮತ್ತು ಬಿ.ಬಿ ಮೂವಿ ಕ್ರಿಯೇಷನ್ಸ್ ನಿರ್ಮಾಣದ, ಯತೀಶ್ ಕುಮಾರ್, ವಿ – ಮಂಜು ಹೊಸಪೇಟೆ ಇವರಿಬ್ಬರ ಕಥೆ – ಚಿತ್ರಕಥೆ – ಸಂಭಾಷಣೆ – ನಿರ್ದೇಶನದಲ್ಲಿ ಅತಿ ನಿರೀಕ್ಷಿತ “ಜೈ ಗದಾ ಕೇಸರಿ” ಸಿನಿಮಾದ ಮೋಷನ್ ಪೋಸ್ಟರ್ ಜೊತೆ ಫಸ್ಟ್ ಲುಕ್ ನ್ನು ವಿನೂತನವಾಗಿ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ನಗರದ ಪ್ರೀಡಂಪಾರ್ಕ್ ನಲ್ಲಿ ಆಯೋಜಿಸಿದ್ದರು.
“ಜೈ ಗದಾ ಕೇಸರಿ” ಸಿನಿಮಾದ ಮೋಷನ್ ಪೋಸ್ಟರ್ ಜೊತೆ ಫಸ್ಟ್ ಲುಕ್ ನ್ನು ಪವಮಾನ ಹಾಡಿನ ಮೂಲಕ ಪ್ರಾರಂಭಿಸಿ. ವಿನ್ಯಾಸಗೊಳಿಸಿದ ವಸ್ತ್ರದೊಂದಿಗೆ ಪರದೆಯ ತೆರೆದುಕೊಂಡು ಕಲಾರಸಿಕರಿಗೆ, ಸಾರ್ವಜನಿಕರಿಗೆ ಪ್ರಮೋಷನ್ ಪೋಸ್ಟರ್ ಪ್ರದರ್ಶನಗೊಳಿಸಲಾಯಿತು. ಚಿತ್ರದ ನಿರ್ಮಾಪಕರು ಬಸವರಾಜ ಮತ್ತು ಸಹ-ನಿರ್ಮಾಪಕರು ಈಶ್ವರ್ ನಾಯಕ ಅದ್ದೂರಿಯಾಗಿ ದುಬಾರಿ ವೆಚ್ಚದಲ್ಲಿ ಚೂಚ್ಚಲ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಭರವಸೆಯ ನಾಯಕ ನಟ ಈಶ್ವರ ನಾಯಕ್ ರ ಇದೇ ಸಂದರ್ಭದಲ್ಲಿ ಅಭಿಮಾನಿಗಳು ಹುಟ್ಟು ಹಬ್ಬವನ್ನು ಆಚರಿಸಿದರು.
ಕುಬುಸ ಎಂಬ ಕಾದಂಬರಿ ಆಧಾರಿತ ಕಲಾತ್ಮಕ ಚಿತ್ರಕ್ಕೆ ವೇದಿಕೆಯನ್ನು ಕಲ್ಪಿಸಿ ಕೊಟ್ಟು ಪ್ರಚಾರ ಮಾಡಿ.ಕಲಾ ಪ್ರೇಮವನ್ನು ಪ್ರದರ್ಶಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾದರು. ಜೈ ಗದಾ ಕೇಸರಿ ಚಿತ್ರತಂಡದಲ್ಲಿ ಅನೇಕ ನುರಿತ ತಂತ್ರಜ್ಞರು ಕೆಲಸ ನಿರ್ವಹಿಸಿದ್ದಾರೆ.
ಕಾರ್ಯಕಾರಿ ನಿರ್ಮಾಪಕ ತಿಪ್ಪೇಸ್ವಾಮಿ (ಗೌಳಿ) ಛಾಯಾಗ್ರಹಣ ಶ್ಯಾಮ್ ಸಿಂಧನೂರು – ಎಸ್. ನಾಗರಾಜ್ .ಸಂಗೀತ ಜಾರ್ಜ್ ಥಾಮಸ್ ಸ್ಯಾಮ್-ಆರೋನ್ ಕಾರ್ತಿಕ್ ವೆಂಕಟೇಶ್-ಪ್ರಸನ್ನ ಬೋಜ ಶೆಟ್ಟರ್ ಸಂಕಲನ ಪೂಜಾ ಸಿ ನೃತ್ಯ ಕಂಬಿರಾಜ್-ಪೂಜಾ. ಸಿ ಸಾಹಸ ಸುಪ್ರೀಂಸುಬ್ಬು ಸೂರಿ-ರಾಮದೇವ್ ಜಾನಿ-ವೈಲೆಂಟ್ ವೇಲು-ಅಲ್ಟಿಮೇಟ್ ಶಿವು ಕಲೆ ಶಿವಕಾಂತ್ ಮೇಕಪ್ ಅಶೋಕ್-ವಿಜಿ ಕೇಶ ಅಲಂಕಾರ-ವಸ್ತ್ರಾಲಂಕಾರ ಪ್ರಭು ಪ್ರಚಾರ ಕಲೆ ಗುರು ಯಲ್ಲಾಪುರ ಸಹ ನಿರ್ದೇಶಕರು ಕುಮಾರ್ ಡಿ.ನಾಗಮೂರ್ತಿ, ಸೋಮು, ವರದ, ಮಾದೇಶ, ಯೋಗಿ ಪಿ.ಆರ್ ಓ ಡಾ. ಪ್ರಭು ಗಂಜಿಹಾಳ-ಡಾ. ವೀರೇಶ್ ಹಂಡಗಿ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.
