ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ
‘ಸಂಪತ್ತಿಗೆ ಸವಾಲ್ ‘ ನಾಟಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 13- ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ಯ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ದಿ. ಪಿ.ಬಿ.ಧುತ್ತರಗಿ ವಿರಚಿತ ‘ಸಂಪತ್ತಿಗೆ ಸವಾಲ್ ‘ ನಾಟಕ ಪ್ರದರ್ಶಿಸಲಿದ್ದಾರೆ.
ನ.16 ರಂದು ಸಂಜೆ 5 ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಾಟಕ ಪ್ರದರ್ಶನ ಇದ್ದು ಉಚಿತ ಪ್ರವೇಶ ಇದೆ.
ಸಂಪತ್ತಿಗೆ ಸವಾಲ್ ನಾಟಕದ ರಚನೆಕಾರರು ದಿ. ಪಿ.ಬಿ.ಧುತ್ತರಗಿಯವರು ಮೂಲತಃ ಬಾಗಲಕೋಟೆ ಜಿಲ್ಲೆ ಸೂಳಿಬಾವಿಯವರು. ನಂತರ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದಲ್ಲಿ ನೆಲೆ ನಿಂತವರು.
ಸಂಪತ್ತಿಗೆ ಸವಾಲ್ ನಾಟಕ ರಚನೆಯಾದ ವರ್ಷ ನಮಗೆ ಖಚಿತವಾಗಿ ತಿಳಿದಿಲ್ಲ. ಆದರೆ ಈ ನಾಟಕಕ್ಕೆ ಈಗ 50 ವರ್ಷ. 1973 ರಲ್ಲಿ ಕನಕಪುರದಲ್ಲಿ ಸಂಪತ್ತಿಗೆ ಸವಾಲ್ ನಾಟಕ ಭರ್ಜರಿ ಪ್ರದರ್ಶನ ಕಾಣುತ್ತಿದ್ದಾಗ ಅದರ ಜನಪ್ರಿಯತೆ ತಿಳಿದು ಡಾ. ರಾಜಕುಮಾರ ಅವರು ಈ ನಾಟಕ ನೋಡಿ ಸಿನಿಮಾ ಮಾಡಲು ನಿರ್ಧರಿಸಿದರು.
ಡಾ. ರಾಜಕುಮಾರ ಅವರ ಸಿನಿ ಬದುಕಿನಲ್ಲಿ ಮಹತ್ತರವಾದ ಗೆಲುವು ಕಂಡ ಸಂಪತ್ತಿಗೆ ಸವಾಲ್ ಸಿನಿಮಾ ಬಿಡುಗಡೆ ಆಗಿ ಮುಂದಿನ ವರ್ಷಕ್ಕೆ 50 ವರ್ಷಕ್ಕೆ ಆಗಲಿದೆ.
ಸಂಪತ್ತಿಗೆ ಸವಾಲ್ ಮೂಲ ನಾಟಕ ಪ್ರದರ್ಶಿಸುವ ಕೊಪ್ಪಳ ಮೀಡಿಯಾ ಕ್ಲಬ್ ನ ಶರಣಪ್ಪ ಬಾಚಲಾಪುರ ಸಾಹುಕಾರ ಮತಿಯಪ್ಪ ಪಾತ್ರದಲ್ಲಿ ಜಗದೀಶ ಚಟ್ಟಿ ಭದ್ರಿ ಪಾತ್ರದಲ್ಲಿ ಕುಲಕರ್ಣಿಯಾಗಿ ಬಸವರಾಜ ಬಿನ್ನಾಳ, ಭದ್ರಿ ಅಣ್ಣ ಸಿದ್ದಪ್ಪನಾಗಿ ಪರಮೇಶ ರಡ್ಡಿ ಹ್ಯಾಟಿ, ಕೆಂಚಪ್ಪನಾಗಿ ಮಹೇಶಗೌಡ ಭಾನಾಪುರ, ಗುಂಡನಾಗಿ ಮೌನೇಶ ಬಡಿಗೇರ್, ಭೈರನಾಗಿ ಅನಿಲ್ ಬಾಚನಹಳ್ಳಿ, ಪಿಎಸ್ಐ ಆಗಿ ದತ್ತು ಕಮ್ಮಾರ, ಪೊಲೀಸರಾಗಿ ನಾಭಿರಾಜ ದಸ್ತೇನವರ, ಮಲ್ಲು ಪರೂತಿ ಅಭಿನಯಿಸಲಿದ್ದಾರೆ.
ಮಹಿಳಾ ಪಾತ್ರಗಳಲ್ಲಿ ವೃತ್ತಿರಂಗಭೂಮಿಯ ರೇಷ್ಮಾ ಇಳಕಲ್ ( ಚೆನ್ನಿ ) , ಹೇಮಾ ( ಪಾರ್ವತಿ) , ನಂದಾ ಹೊಸಮನಿ ( ಸಂಗವ್ವ ) , ಉಮಾರಾಣಿ ಇಳಕಲ್ ( ಲಕ್ಷ್ಮೀ) ಇವರು ಅಭಿನಯಿಸಲಿದ್ದಾರೆ. ನ.16 ರಂದು ದಯವಿಟ್ಟು ಬಂದು ನೋಡಿ ಆನಂದಿಸಿ.
