ಪೆ,23ರಂದು ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಾರ್ಷಿಕೋತ್ಸವದ ಹಾಗೂ ಸಾಂಸ್ಕೃತಿಕ ಸಂಭ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21-ನಗರದ ಕವಲೂರ ಓಣಿಯ ಸಿದ್ಧೇಶ್ವರ ವೃತ್ತದಲ್ಲಿ ಇರುವ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಾರ್ಷಿಕೋತ್ಸವದ ಹಾಗೂ ಸಾಂಸ್ಕೃತಿಕ ಸಂಭ್ರಮ-2024 ಇದೇ 23 ರಂದು ಜರುಗಲಿದೆ.
ನಗರದ ಸಾಹಿತ್ಯ ಭವನದಲ್ಲಿ 23 ಶುಕ್ರವಾರ ಬೆಳಿಗ್ಗೆ : 9.30 ಗಂಟೆಗೆ ಕಾರ್ಯಕ್ರಮ ಜರುಗಲಿದ್ದು
ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಲತಾ ಚಿನ್ನೂರ ಉದ್ಘಾಟಿಸಲಿದ್ದು.ಅಧ್ಯಕ್ಷತೆಯನ್ನು ಬಿ.ಎಸ್.ಜಿ.ಎಸ್. ಟ್ರಸ್ಟ್ ಗೌರವಾಧ್ಯಕ್ಷ ಮುದಿಯಪ್ಪ ಕವಲೂರ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ, ನಗರಸಭೆ ಮಾಜಿ ಅಧ್ಯಕ್ಷರು ಚಂದ್ರಶೇಖರ ಕವಲೂರ, ನಗರಸಭೆ ಸದಸ್ಯ ಮಲ್ಲಪ್ಪ ಕವಲೂರು, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸಜ್ಜನ್, ಶ್ರೀ ಗ.ಅ.ಬ್ಯಾಂಕ್ ಅಧ್ಯಕ್ಷ ರಾಜಶೇಖರ ಅಡೂರ, ಮುಖಂಡರು ಮುಸ್ತಫಾ ಕುದರಿಮೋತಿ, ಕೊಪ್ಪಳ,ನಗರಸಭೆ ಮಾಜಿ ಸದಸ್ಯ ಮಹಾದೇವಪ್ಪ ಜವಳಿ,
ನಗರಸಭೆ ಸದಸ್ಯೆ ಶ್ರೀಮತಿ ಉಮಾ ಗವಿಸಿದ್ದಪ್ಪ ಪಾಟೀಲ, ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಬಸವರಾಜ ತಳಕಲ್ಲ , ಮುಖಂಡರಾದ ಭರಮಗೌಡ ಗೆಜ್ಜಿ ಇತರರು ಆಗಮಿಸಲಿದ್ದು ಸರ್ವರು ಆಗಮಿಸಿ ಯಶಸ್ವಿ ಗೊಳಿಸುವಂತೆ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಅಧ್ಯಕ್ಷ ಶಿವಕುಮಾರ ಕುಕನೂರ ಪ್ರಕಟಣೆಯಲ್ಲಿ ಕೊರಿದ್ದಾರೆ.
