ಪೊಲೀಸ್ ಇಲಾಖೆಯಲ್ಲಿ ತಾಂತ್ರಿಕ ಹುದ್ದೆಗಳ ನೇಮಕಾತಿಗೆ
ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಬೆಂಗಳೂರು, ಜನವರಿ 11 – ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿನ ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ – 08 ಹುದ್ದೆಗಳು ಹಾಗೂ ಡಿಜಿಟಲ್ ಫಾರೆನ್ಸಿಕ್ ಅನಾಲಿಸ್ಟ್ – 08 ಹುದ್ದೆಗಳು ಹೀಗೆ 16 ತಾಂತ್ರಿಕ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ (Contract Basis) ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಜನವರಿ 10 ರಿಂದ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 24 ಸಂಜೆ 6 ಗಂಟೆ. ಈ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಪೊಲೀಸ್ ಇಲಾಖೆಯ ಅಂತರ್ಜಾಲ https://ksp.karnataka.gov.in ಮತ್ತು ಪೊಲೀಸ್ ಆಯುಕ್ತರ ಅಂತರ್ಜಾಲ www.bcp.gov.in ರಲ್ಲಿ ಪ್ರಕಟಿಸಲಾಗಿರುತ್ತದೆ.
ಈ ವೆಬ್ಸೈಟ್ಗಳ ಮುಖಾಂತರ ವಿವರಗಳನ್ನು ಪಡೆದು ಅರ್ಜಿಗಳನ್ನು ಕಛೇರಿಯ ವಿಳಾಸ ನಂ.01, ಇನ್ಫೆಂಟ್ರಿ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು- 560001 ಅಥವಾ ಇಲಾಖೆಯ ಇ-ಮೇಲ್ಗೆ dcpadminbcp@ksp.gov.in ಸಲ್ಲಿಸುವುದು ಎಂದು ಬೆಂಗಳೂರು ನಗರ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಐಪಿಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.