WhatsApp Image 2024-04-07 at 4.35.13 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೆಲುವಿಗಾಗಿ ಮನೆ ಮನೆ ಪ್ರಚಾರ

ಕರುನಾಡ ಬೆಳಗು ಸುದ್ದಿ

ಸಂಡೂರು, 7- ಲೋಕಸಭಾ ಚುನಾವಣೆ ಪ್ರಯುಕ್ತ ಸಂಡೂರಿನ ಆರಾಧ್ಯದೈವ ಕುಮಾರಸ್ವಾಮಿ ದೇವರ ಅರ್ಶಿವಾದ ಪಡೆದು ಈ ದಿನ ಗುರುಲಿಂಗನ ಗೌಡ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಸಂಡೂರು ಮಂಡಲದ ದೇವಗಿರಿ ಶಕ್ತಿಕೇಂದ್ರ ಸುಬ್ಬರಾಯನಹಳ್ಳಿ, ಕಮ್ಮತ್ತೂರು ಗ್ರಾಮಗಳಲ್ಲಿ ಲೋಕಸಭಾ ಅಭ್ಯರ್ಥಿ ಶ್ರೀರಾಮುಲು ಅವರ ಪರವಾಗಿ ಹಾಗೂ ದೇಶದಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರುಗಳ ಗೆಲುವಿಗಾಗಿ ಮನೆ ಮನೆ ಪ್ರಚಾರ ಮತ್ತು ಕರಪತ್ರ ಹಂಚಲಾಯಿತು.

ಈ ಸಂದರ್ಭದಲ್ಲಿ ಪಿ ವಿ ಶ್ರೀನಿವಾಸ ಮಾಜಿ ಜಿಲ್ಲಾ ಉಪಾಧ್ಯಕ್ಷರು, ನಾನ ನಿಕ್ಕಂ ಸಾಹೇಬ್ ಸಂಡೂರು ಮಂಡಲ ಅಧ್ಯಕ್ಷರು, ಹೆಚ್ ಓಬಳೇಶ್ ಜಿಲ್ಲಾ ಸಹ ವಕ್ತಾರರು ಹಾಗೂ ನಿಕಟಪೂರ್ವ ಜಿಲ್ಲಾ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ರಘುನಾಥ, ಚಂದ್ರಪ್ಪ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಶ್ರೀ ಚಂದ್ರು ಸಂಡೂರು ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷರು, ಶ್ರೀ ಹರೀಶ್ ಯುವ ಮೋರ್ಚಾ ಅಧ್ಯಕ್ಷರು, ನರಸಿಂಹ ಸಂಡೂರು ಮಂಡಲ ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!