WhatsApp Image 2024-04-16 at 3.51.50 PM

ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಪಕ್ಷ ಕಾಂಗ್ರೆಸ್ : ಶಾಸಕ ರಾಯರೆಡ್ಡಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,16- ರಾಜ್ಯದ ಜನತೆಗೆ ಚುನಾವಣೆಯ ಪೂರ್ವದಲ್ಲಿ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಯಗಳನ್ನು ಜಾರಿಗೊಳಿಸಿ ನುಡಿದಂತೆ ನಡಕೊಂಡ ನಮ್ಮ ಕಾಂಗ್ರೆಸ್ ಪಕ್ಷ ಮತ್ತು ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ
ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕೂಪ್ಪಳ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಯುವಕರಿದ್ದಾರೆ ಅವರು ಆಯ್ಕೆ ಯಾದರೆ ಕೂಪ್ಪಳ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕೆಲಸವಾಗುತ್ತವೆ ಎಲ್ಲಾ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು.ಮುಖಂಡರು ಒಗ್ಗಟಾಗಿ ಪ್ರತಿ ಮನಿ ಮನಿಗೆ ಹೋಗಿ ಕಾಂಗ್ರೆಸ್ ಪಕ್ಷದ ಯೋಜನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮನ ಮುಟ್ಟುವಂತೆ ತಿಳಿಸಿ ಮತ ಹಾಕಿಸಬೇಕು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಮುಂದಿನ 4 ವರ್ಷ ಎರಡು ತಿಂಗಳ ಅವಧಿಯಲ್ಲಿ 5 ಗ್ಯಾರಂಟಿ ಯೋಜನೆಗಳು ಶಾಶ್ವತವಾಗಿರುತ್ತವೆ ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ ಬಿಜೆಪಿಯವರು ಲೋಕಸಭಾ ಚುನಾವಣೆಯ ನಂತರ ಈ 5 ಗ್ಯಾರಂಟಿ ಯೋಜನೆಗಳು ಬಂದ ಆಗುತ್ತವೆ ಎಂದು ರಾಜ್ಯದ ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ ಮತ್ತು ಕಾಂಗ್ರೆಸ್ ಸರಕಾರ ಬೀಳುತ್ತದೆ ಎಂದು ಸುಳ್ಳು ಹೇಳುವ ಬಿಜೆಪಿ ಯವರ ಮಾತನ್ನು ಮತದಾರರು ನಂಬಬಾರದು 5 ವರ್ಷ ಸಂಪೂರ್ಣ ಅಧಿಕಾರ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ ನಮ್ಮ ಸರಕಾರ ಸುಭದ್ರವಾಗಿದೆ ಯಾವುದೇ ಕಾರಣಕ್ಕೂ ಪತನವಾಗುವದಿಲ್ಲ ರಾಜ್ಯದ ಜನತೆ ನಮ್ಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ ಎಂದರು.

ಈ 5 ಗ್ಯಾರಂಟಿ ಯೋಜನೆಗಾಗಿ ಒಂದು ವರ್ಷಕ್ಕೆ 55 ಸಾವಿರ ಕೋಟಿ ಹಣವನ್ನು ನಮ್ಮ ಸರಕಾರ ಖರ್ಚು ಮಾಡುತ್ತದೆ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಿಗೆ ಮತ ಹಾಕುವ ಮೂಲಕ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಿಗಬೇಕು ಅದು ನಿಮ್ಮ ಕೈಯಲ್ಲಿದೆ ಜನರು ಈ ಬಾರಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.

ಕೇಂದ್ರದಲ್ಲಿ ಬಿಜೆಪಿಯವರ ಕೊಡುಗೆ ಶೂನ್ಯ.10 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಆಡಳಿತ ಮಾಡಿದ ಇವರ ಸಾಧನೆ ಬರಿ ಸುಳ್ಳು ಹೇಳುವದು ಜನರ ದಾರಿ ತಪ್ಪಿಸುವದು ಇವರ ಕೆಲಸ.ಎಂದರು.

ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಗಳ ಏಳಿಗಾಗಿ ಶ್ರಮಿಸಿದೆ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಮಗ್ರ ಅಭಿವೃದ್ಧಿಗೋಳಿಸುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದರು. ಕೂಟ್ಟ ಮಾತಿನಂತೆ ಬಿಜೆಪಿ ಯವರು ಸುಳ್ಳು ಹೇಳುವದೇ ಸಾಧನೆಯಾಗಿದೆ ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯವರಿಗೆ ತಕ್ಕಪಾಠ ಕಲಿಸಲಿದ್ದಾರೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡಿದ್ದಾರೆ ಎಂದು ಹೇಳಿದರು.

ಮತದಾರರು ಅಭಿವೃದ್ಧಿ ಮಾಡುವವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕುವದರ ಮೂಲಕ ಕೂಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕು.ಎಂದರು.

ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಮಗ್ರ ಅಭಿವೃದ್ಧಿ ಗೋಸ್ಕರ ನಮ್ಮ ಕಾಂಗ್ರೆಸ್ ಪಕ್ಷದ ಗುರುತಿಗೆ ಮತ ಹಾಕುವ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಸಂಸದರಾಗಿ ಆಯ್ಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರ, ಯಂಕಣ್ಣ ಯರಾಶಿ, ವೀರನಗೌಡ್ರ ಪೋಲಿಸ್ ಪಾಟೀಲ, ಅಡಿವಪ್ಪ ಬಾವಿಮನಿ, ಪ.ಪಂ ಸದಸ್ಯರಾದ ರೇವಣಪ್ಪ ಹಿರೇಕುರಬರ, ರಿಯಾಜ್ ಖಾಜಿ, ಹನುಮಂತ ಬಜಂತ್ರಿ, ಅತ್ತರಸಾಬ ಖಾಜಿ, ರಸೂಲಸಾಬ ದಮ್ಮೂರ, ಕೆರಿಬಸಪ್ಪನಿಡಗುಂದಿ, ಅಶೋಕ ತೋಟದ, ಪಕ್ಷದ ವಕ್ತಾರ ಡಾಕ್ಟರ್ ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುಧೀರ ಕೂಲ೯ಹಳ್ಳಿ, ಮಲ್ಲು ಜಕ್ಕಲ್ಲಿ ಮತ್ತು ಪಕ್ಷದ ಕಾಯ೯ಕತ೯ರು ಅಭಿಮಾನಿಗಳು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!