ಕಾಂಗ್ರೆಸ್ ಸತ್ಯ ಹಾಗೂ ಶಾಂತಿಗಾಗಿ ಮತ ಕೇಳುತ್ತೆದೆ.
ಬಿಜೆಪಿ ಬಾಂಡ್ ಜನತಾ ಪಕ್ಷ – ತಂಗಡಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ದೇಶದ ಮೋದಿಅವರ ಬಿಜೆಪಿ ಸರ್ಕಾರ ಬ್ರಷ್ಟಾಚಾರಿಗಳಿಗೆ ಬಾಂಡ ರಶೀದಿ ನೀಡಿದ್ದಾರೆ ಎಂದು ಕನ್ನಡ ಮತ್ತುಸಂಸ್ಕೃತಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ಅವರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಿಜೆಪಿ ನಾಯಕರು ಈಗ ಬಾಂಡ್ ಖರೀದಿ ಮಾಡುತ್ತಿದ್ದಿರಿ, ಬಾಂಡ್ ಮೂಲಕ ಜನಪ್ರತಿನಿಧಿಗಳನ್ನು ಖರೀದಿ ಮಾಡುತ್ತಿದ್ದಿರಿ. ಇದೊಂದು ಸಲ ಬಿಜೆಪಿಗೆ 400 ಸೀಟು ಕೊಡಿ ಎಂದು ಕೇಳುತ್ತಿದ್ದಾರೆ
ಕಾಂಗ್ರೆಸ್ ಬಡವರ ಪರ ಜಿಜೆಪಿ ಕೇಂದ್ರದಲ್ಲಿ 10ಆಡಳಿತ ನಡೆಸಿದ್ದು ಒಂದು ಬಡವರ ಪರ ಯೋಜನೆ ರೂಪಿಸಿಲ್ಲಾ, ಮೋದಿ ಸುಳ್ಳಿನ ಗ್ಯಾರಂಟಿ ಯನ್ನು ತಿರಸ್ಕರಿಸಿ ಕಾಂಗ್ರೆಸ್ ಗ್ಯಾರಂಟಿಗೆ ಬೆಂಬಲಿಸಿ ಎಂದರು.
ದೇಶದಲ್ಲಿ ಹತ್ತು ವರ್ಷ ಆಡಳಿತ ನಡೆಸಿ, ರಾಷ್ಟ್ರವನ್ನು ಅಧೋಗತಿಗೆ ಬಿಜೆಪಿ ತಂದಿದೆ. ಬಿಜೆಪಿ ಬಂದ ಮೇಲೆ ಒಂದೊಂದು ಸಂಸ್ಥೆಯನ್ನು ಮಾರಾಟ ಮಾಡುತ್ತಿದೆ. ಅದು ಭಾರತೀಯ ಜನತಾ ಪಕ್ಷ ಅಲ್ಲ, ಬಾಂಡ್ ಜನತಾ ಪಕ್ಷ. ಭ್ರಷ್ಟಾಚಾರ ಕಲಿಯಬೇಕೆಂದರೆ ಬಿಜೆಪಿ ನೋಡಬೇಕು .
ನೂರಕ್ಕೆ ನೂರು ಮಹಿಳೆಯರು ಸರ್ಕಾರದ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಚಿಂತನೆ ಹಾಗೂ ಬದ್ದತೆ ಬಡವರ – ದಲಿತರ ಪರವಾಗಿದೆ, ಬಡವರ ನೆಮ್ಮದಿಯ ಬದುಕು ಕಟ್ಟುವುದು ಕಾಂಗ್ರೆಸ್.
ಬಿಜೆಪಿ ಕಳ್ಳರ – ಸುಳ್ಳರ ಸಂತೆ , ಸ್ಮಾರ್ಟ್ ಸಿಟಿ, ಯುವಕರು ಎರಡು ಕೋಟಿ ಉದ್ಯೋಗ ಸೇರಿದಂತೆ ಸಾವಿರಾರು ಸುಳ್ಳು ಹೇಳಿದ್ದಾರೆ, ನೂಡಿದಂತೆ ನಡೆದಿದ್ದು ಕಾಂಗ್ರೆಸ್.
ಚುನಾವಣೆ ಬಂತೆಂದರೆ ಬಿಜೆಪಿಯದ್ದು ಬರೀ ನಾಟಕ. ಈ ಸಲ ಪಿಎಂ ನವಿಲುಗರಿ ಕೈಯಲ್ಲಿ ಹಿಡಿದು ನೀರೋಳಗೆ ಮುಳುಗಿ ದೇವರನ್ನು ಹುಡುಕುತ್ತಿದ್ದಾರೆ. ಇವರಿಗೆ ರಾಷ್ಟ್ರದ ಜನರ ಸಮಸ್ಯೆಗಳನ್ನು ಪರಿಹರಿಸುವ ಹುಡುಕಾಟ ಇಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ನಾಯಕರು ಈಗ ಬಾಂಡ್ ಖರೀದಿ ಮಾಡುತ್ತಿದ್ದಿರಿ, ಬಾಂಡ್ ಮೂಲಕ ಜನಪ್ರತಿನಿಧಿಗಳನ್ನು ಖರೀದಿ ಮಾಡುತ್ತಿದ್ದಿರಿ. ಇದೊಂದು ಸಲ ಬಿಜೆಪಿಗೆ 400 ಸೀಟು ಕೊಡಿ ಎಂದು ಕೇಳುತ್ತಿದ್ದಾರೆ
ಕೆಲಸ ಆದ ಬಳಿಕ ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತದೆ ಬಿಜೆಪಿ. ಇದಕ್ಕೆ ಈಗ ಸ್ಪಷ್ಟ ಉದಾಹರಣೆ ಕೊಪ್ಪಳದ ಸಂಸದ ಕರಡಿ ಸಂಗಣ್ಣ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿ ದೇಶದ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಜನರು ಎಚ್ಚರದಿಂದ ಇರಬೇಕು, ಮುಸ್ಲಿಂರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಅವರ ಬಗ್ಗೆ ಬಿಜೆಪಿ ಹಗುರವಾಗಿ ಮಾತನಾಡುತ್ತಿದೆ ಬೆಂಕಿ ಕೆಲಸ ಮಾಡುತ್ತದೆ.
ಕಾಂಗ್ರೆಸ್ ಸತ್ಯ ಹಾಗೂ ಅಭಿವೃದ್ಧಿಗಾಗಿಮತ ಕೇಳುತ್ತೆವೆ, ಪ್ರತಿಯೊಬ್ಬರ ರಾಜಶೇಖರ ಹಿಟ್ನಾಳ ಆಗಿ ಮತ ಕೇಳಿ ಕಾಂಗ್ರೆಸ್ ಅಭ್ಯರ್ಥಿ ಗೆಲಿಸಿ ಎಂದು ಕರೆ ನೀಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಇದೊಂದು ಧರ್ಮ-ಅಧರ್ಮದ ನಡುವೆ ನಡೆಯಲಿರುವ ಚುನಾವಣೆ. ಕೊಟ್ಟ ಗ್ಯಾರಂಟಿಗಳನ್ನು 8 ತಿಂಗಳಲ್ಲಿ ಜಾರಿಗೊಳಿಸಿದ ಧರ್ಮ ನಮ್ಮದಾದರೆ, ಹತ್ತು ವರ್ಷಗಳಿಂದ ಕೊಟ್ಟ ಮಾತಿನಂತೆ ನಡೆಯದ ಅಧರ್ಮ ಬಿಜೆಪಿಯದ್ದು. ದೆಹಲಿಯ ಸಿಎಂ ಬಂಧಿಸುವ ಮೂಲಕ ಅರಾಜಕತೆಯನ್ನು ಕೇಂದ್ರ ಅನುಸರಿಸಿ, ಬೆದರಿಕೆ ಒಡ್ಡುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಜನಾರ್ದನ ಹುಲಗಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ದೇಶಕ್ಕೆ ಸ್ವಾತಂತ್ರ್ಯ ಸಿಗದಿದ್ದರೆ ಇನ್ನೂ ನಾವು ಪರಕೀಯರ ಅಧೀನದಲ್ಲೇ ಇರುತ್ತಿದ್ದೇವು. ಉಳುವವನೇ ಒಡೆಯ ಕಾನೂನು ಜಾರಿಗೊಳಿಸುವ ಮೂಲಕ ಬಡವರು, ರೈತರು ಜಮೀನು ಹೊಂದುವಂತಾಗಲು ಇಂದಿರಾ ಗಾಂಧಿ ಕಾರಣ. ಇಂಥ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕು ಎಂದರು.
ಸಂವಿಧಾನ ಸುಡ್ತಿವಿ ಅಂದ ಬಿಜೆಪಿಗೆ ಮತ ಹಾಕ್ತಿರಾ? ಎಂದು ಪ್ರಶ್ನಿಸುವ ಮೂಲಕ ಮಾತನಾಡಿದ ಮುಖಂಡ ಗೂಳಪ್ಪ ಹಲಗೇರಿ, ಮೋದಿ ಹತ್ತು ವರ್ಷ ಮೋಡಿ ಮಾಡಿದ್ದಾಯ್ತು.. ಇನ್ನೇನಿದ್ದರೂ ಕಾಂಗ್ರೆಸ್ಸೇ ಗ್ಯಾರಂಟಿ. ಸಣ್ಣಪುಟ್ಟ ಗೊಂದಲಗಳಿದ್ದರೆ ಸರಿಪಡಿಸಿಕೊಂಡು, ಚುನಾವಣೆಗೆ ಸನ್ನದ್ಧರಾಗಬೇಕಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ 25 ಸ್ಥಾನ ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.
ಈ ವೇಳೆ ಪಕ್ಷದ ಮುಖಂಡರಾದ ಶಾಂತಣ್ಣ ಮುದಗಲ್, ಗೂಳಪ್ಪ ಹಲಗೇರಿ, ಜನಾರ್ದನ ಹುಲಗಿ, ಕೃಷ್ಣ ಗಲಭಿ, ಅಮ್ಜದ್ ಪಟೇಲ್, ಬಾಲಕೃಷ್ಣ, ಕಾಟನ್ ಪಾಷಾ, ಮಲ್ಲು ಪೂಜಾರ, ಯಮನಪ್ಪ ಕಬ್ಬೇರ, ಲಲಿತಾ ಗವಿಸಿದ್ದಪ್ಪ, ಗಾಳೆಪ್ಪ ಪೂಜಾರ, ಕೆ.ಎಂ.ಸಯ್ಯದ್, ಜ್ಯೋತಿ ಗೊಂಡಬಾಳ, ಮತ್ತಿತರರು ಇದ್ದರು.
