ವೀ.ವಿ.ಸಂಘದ ಚುನಾವಣೆಗೆ
ಬ್ಯಾಲಚಿಂತೆ ಎನ್. ಶಿವಶಂಕರ್ ಗೌಡರಿಂದ ನಾಮಪತ್ರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯತ್ವದ ಚುನಾವಣೆಗೆ ದಿ. ಅಲ್ಲಂಕರಿಬಸಪ್ಪ ಹಾಗೂ ಎನ್. ತಿಪ್ಪಣ್ಣನವರ ಹಿರಿಯರ ತಂಡದಿಂದ, ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಬ್ಯಾಲಚಿಂತೆ ಎನ್. ಶಿವಶಂಕರ್ ಗೌಡ (ಬಿ.ಇ. ಸಿವಿಲ್)ಅವರು ಚುನಾವಣಾಧಿಕಾರಿ ಲಿಂಗನಗೌಡ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಆಕಾಂಕ್ಷಿ ಬ್ಯಾಲಚಿಂತೆ ಎನ್. ಶಿವಶಂಕರ್ ಗೌಡ (ಬಿ.ಇ. ಸಿವಿಲ್) ಇವರು ವೀರಶೈವ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾಜಿ ಆಡಳಿತ ಮಂಡಳಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು.
