FB_IMG_1710078812506

ಮಾದಿನೂರು ಶ್ರೀ ವಿಷ್ಣುತೀರ್ಥರ ಆರಾಧನೆ ಸಂಪನ್ನ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 10- ಜಿಲ್ಲೆಯ ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದಲ್ಲಿ ರುದ್ರಾಂಶ ಸಂಭೂತರು ಅವಧೂತ ಶಿಖಾಮಣಿಗಳಾದ ಶ್ರೀ ಶ್ರೀ ೧೦೦೮ ಶ್ರೀವಿಷ್ಣುತೀರ್ಥರ ಶ್ರೀಪಾದಂಗಳವರ ೨೧೮ ನೇ ಆರಾಧನಾ ಮಹೋತ್ಸವ ೨೦೨೪ ರ ಮಾರ್ಚ ೭.೮.೯ ಗುರುವಾರ. ಶುಕ್ರವಾರ. ಶನಿವಾರ ಈ ಮೂರು ದಿನಗಳಕಾಲ ವಿಜ್ರಂಭಣೆಯಿಂದ ನೆರವೇರಿತು.
ವಈ ಕಾರ್ಯಕ್ರಮಕ್ಕೆ ನಾಡಿನ ಹಾಗೂ ಹೊರನಾಡಿನಿಂದಲೂ ಭಕ್ತರು ಹಾಗೂ ಪಂಡಿತರುಗಳು ಆಗಮಿಸಿ ಧಾರ್ಮಿಕ ಪ್ರವಚನ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ. ಶ್ರೀ ವಿಷ್ಣುತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ . ವಿಷೇಶ ಪುಷ್ಪಗಳಿಂದ ಅಲಂಕಾರ ಪೂಜೆ ತೀರ್ಥ ಪ್ರಸಾದ ನೆರವೇರಿತು
ಕೊನೆಯದಿನವಾದ ನಿನ್ನೆ ಉತ್ತರಾರಾಧನೆಯ ಪ್ರಯುಕ್ತ ಮದ್ಯಾನ್ಹ ೧೨.೩೦ ಕ್ಕೆ ಪಾಲಕಿ ಸೇವೆ ರಥೋತ್ಸವ ಅಲಂಕಾರ ತೀರ್ಥ ಪ್ರಸಾದದೊಂದಿಗೆ ಕಾರ್ಯಕ್ರಮ ತೆರೆಕಂಡಿತು.

Leave a Reply

Your email address will not be published. Required fields are marked *

error: Content is protected !!