ಮುನಿರಾಬಾದ ಖಾಡಾ ಅಧ್ಯಕ್ಷರಾಗಿ ಹಸನ್ ಸಾಬ್ ದೋಟಿಹಾಳ ನೇಮಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,15- ಜಿಲ್ಲೆಯ ಮುನಿರಾಬಾದ ಖಾಡಾ ಅಧ್ಯಕ್ಷರಾಗಿ ಕುಷ್ಟಗಿ ಮಾಜಿ ಶಾಸಕ ಹಾಗೂ ಅಲ್ಪಸಂಖ್ಯಾತರ ಮುಖಂಡ ಹಸನ್ ಸಾಬ್ ದೋಟಿಹಾಳ ಇವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಆದೇಶ ಮಾಡಿರುವ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಡಿ, ಧನಂಜಯ ಮುಂದುನ ಎರಡು ವರ್ಷದ ಅವದಿಗೆ ಮುನಿರಾಬಾದ ತುಂಗಭದ್ರಾ ಯೋಜನೆಯ ಪ್ರಾಧಿಕಾರಕ್ಕೆ ಸದಸ್ಯ ಅಧ್ಯಕ್ಷರಾಗಿ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.
