WhatsApp Image 2024-06-13 at 4.20.04 PM

ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ಪ್ಯಾನಿಕ್ ಬಟನ್ ಆದೇಶ ಹಿಂಪಡೆಯಲು ಮನವಿ

ಕರುನಾಡ ಬೆಳಗು ಸುದ್ದಿ

ವಿಜಯನಗರ, 13- ಕರ್ನಾಟಕ ಸಾರಿಗೆ ಇಲಾಖೆಯಿಂದ ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಸಲು ಮಾಡಿರುವ ಆದೇಶವನ್ನು ಹಿಂಪಡೆಯ ಬೇಕೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸಾರಿಗೆ ಆಯುಕ್ತ ಯೋಗೇಶ್ ಅವರಿಗೆ ಹೊಸಪೇಟೆ ತಾಲ್ಲೂಕು ಸಾರಿಗೆ ಕಾರ್ಮಿಕರ ಸಂಘಗಳ ಒಕ್ಕೂಟದಿಂದ ಹೊಸಪೇಟೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ದ್ವಾರ ಕಚೇರಿಯಲ್ಲಿ ಸಾವಿರಾರು ವಾಹನ ಚಾಲಕರು ಮತ್ತು ಮಾಲಿಕರು ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 8 ಲಕ್ಷಕ್ಕೂ ಅಧಿಕ ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸ್ ಕ್ಯಾಪ್ ವಾಹನವಿದ್ದು ಈ ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಸಬೇಕೆಂಬ ಸರ್ಕಾರದ ಆದೇಶದಿಂದಾಗಿ ಪ್ಯಾನಿಕ್ ಬಟನ್ ಅಳವಡಿಸಲು ಸಂಬಂಧಪಟ್ಟ ವ್ಯಕ್ತಿಗಳು 12500 ಸಾವಿರ / 14500 ಸಾವಿರ ಇನ್ನು ಕೆಲವು ಕಡೆ 17500 ಸಾವಿರ ಹಣ ಪಡೆಯುತ್ತಿದ್ದಾರೆ. ಅಲ್ಲದೆ ಸಾರಿಗೆ ಇಲಾಖೆ ತಂತ್ರಾಂಶದಲ್ಲಿ ಪ್ಯಾನಿಕ್ ಬಟನ್ ಅಳವಡಿಸಿರುವ ಕುರಿತು ಸರ್ಟಿಫಿಕೇಟ್ ಬರುತ್ತಿಲ್ಲ ಮತ್ತು ಇದರ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ. ಶಾಲಾ ಪ್ರಾರಂಭದ ದಿನಗಳಲ್ಲಿ ಇಂತಹ ಆದೇಶವನ್ನು ಮಾಡಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಮೀಸಲಿಟ್ಟ ಹಣವನ್ನು ವಾಹನಗಳಿಗೆ ಬಳಸಬೇಕಾಗುತ್ತದೆ. ಇದರಿಂದಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಅಥವಾ ವಾಹನಗಳಿಗೆ ಪ್ಯಾನಿಕ್ ಬಟನ್, HSRP ನಂಬರ್ ಪ್ಲೇಟ್ ಅಳವಡಿಸುವುದೋ ತಿಳಿಯದೆ ಅತಂತ್ರ ಸ್ಥಿತಿಯಲ್ಲಿ ಚಾಲಕ / ಮಾಲೀಕರ ಜೀವನ ಸಾಗುತ್ತಿದೆ.

ದುರಂತ ಎಂದರೆ ರಾಜ್ಯ ಸರ್ಕಾರ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿ ಬಜೆಟ್ ನಲ್ಲಿ ಹಣ ಮೀಸಲಿಡದೆ ಇರುವುದು ಶೋಚನೀಯ ಸಂಗತಿ, ಕನಿಷ್ಠ ಕಲ್ಯಾಣ ಮಂಡಳಿ ಮುಖಾಂತರ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡುವಂತಹ ಯೋಜನೆಗಳನ್ನಾದರೂ ಜಾರಿ ಮಾಡಬೇಕಾಗಿತ್ತು. ಒಂದು ವೇಳೆ ಇಂತಹ ಯೋಜನೆಗಳನ್ನು ಜಾರಿ ಮಾಡಿದ್ದರೆ ನಾವು ಶಾಲಾ-ಕಾಲೇಜಿಗೆ ಕಟ್ಟಿರುವಂತಹ ಸಾವಿರಾರು ಹಣ ಉಳಿಸಿ ನಿಮ್ಮ ಆದೇಶದ ಪ್ರಕಾರ ನಮ್ಮ ವಾಹನಗಳಿಗೆ ಅವಶ್ಯಕಥೆ ಇರುವ ಫ್ಯಾನಿಕ್ ಬಟನ್, HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುತ್ತಿತ್ತು. ಆದಕಾರಣ ವಾಹನಗಳಿಗೆ ಅರ್ಹತ ಪ್ರಮಾಣ ಪತ್ರ ನವೀಕರಣ ಮತ್ತು ಹೊಸ ವಾಹನ ನೊಂದಣಿ ಸಂದರ್ಭದಲ್ಲಿ ತೊಂದರೆಯಾಗದಂತೆ, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ವೈ.ರಾಮಚಂದ್ರ ಬಾಬು ಕೆ.ಎಂ.ಸಂತೋಷ್ ಕುಮಾರ್. ಸಿ. ಕೃಷ್ಣ ನಾಗವಾರ ಪ್ರಸಾದ್ ಹೊನ್ನೂರು ಸ್ವಾಮಿ, K.M.ಕೊಟ್ರೇಶ, ಮಂಜು ನಾಯಕ, ಚನ್ನಬಸವನ ಗೌಡ, ಜಾವಿದ್ ಬಾಷ, ಚೇತನ್ ಕುಮಾರ್, ವೆಂಕಟೇಶ್ ಕುಲಕರ್ಣಿ, ಮಂಜು ನಾಯಕ, ಗಣೇಶ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!