ಕಲಾಪದಿಂದ ದೂರ ಉಳಿದ ಹೊಸಪೇಟೆ ವಕೀಲರು
ಪೊಲೀಸರ ಸುಳ್ಳು ಕೇಸ್ ವಿರೋಧಿಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ ,22- ವಕೀಲರ ವಿರುದ್ಧ ರಾಮನಗರ ಪೊಲೀಸರು ಸಲ್ಲಿಸಿದ ಸುಳ್ಳು ಕೇಸ್ ಹಿಂಪಡೆಯಲು ಮತ್ತು ಪಿ.ಎಸ್.ಐ. ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಇಲ್ಲಿಯ ವಕೀಲರ ಸಂಘದವರು ಗುರುವಾರ ಪ್ರತಿಭಟನೆ ಮಾಡಿ, ಕಲಾಪದಿಂದ ದೂರ ಉಳಿದರು.
ನ್ಯಾಯಾಲಯದ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪುನೀತ್ ರಾಜಕುಮಾರ ವೃತ್ತದಲ್ಲಿ ಸೇರಿ ರಾಮನಗರ ಪೊಲೀಸರ ವಿರುದ್ಧ ಘೋಷಣೆ ಕೂಗಲಾಯಿತು ಹಾಗೂ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೆ ತರಲು ಒತ್ತಾಯಿಸಲಾಯಿತು.
ತಹಸೀಲ್ದಾರ್ ಕಚೇರಿಗೆ ಆಗಮಿಸಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಪ್ರಹ್ಲಾದ್ ಮಾತನಾಡಿ, ರಾಮನಗರದ ಐಜೂರು ಪೋಲೀಸ್ ಠಾಣೆಯಲ್ಲಿ ವಕೀಲರು ಮೇಲೆ ಸಕಾರಣವಿಲ್ಲದೆ 50 ಜನ ರಾಮನಗರ ವಕೀಲರ ಮೇಲೆ ಸುಳ್ಳು ಕೇಸ್ ದಾಖಲಿಸಿದ ರಾಮನಗರ ಪಿ.ಎಸ್.ಐ. ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಕೀಲರ ವಿರುದ್ಧವೇ ಪೋಲೀಸರು ಈ ರೀತಿಯ ಸುಳ್ಳು ಕೇಸುಗಳನ್ನು ದಾಖಲಿಸುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು ಕಾನೂನು ರಕ್ಷಣೆ ಮಾಡುವ ಮತ್ತು ಪಾಲನೆ ಮಾಡುವ ವಕೀಲರ ಪರಿಸ್ಥಿತಿ ಹೀಗಾದರೆ ಸಾಮಾನ್ಯ ಜನರ ಪಾಡೇನು ಎನ್ನುವಂತಹ ವಾತಾವರಣ ಸೃಷ್ಟಿಸಿದ ರಾಮನಗರ ಪೊಲೀಸರ ವಿರುದ್ಧ ಕಠಿಣವಾದ ಕ್ರಮ ಜರುಗಿಸಬೇಕೆಂದು ಮತ್ತು ಈಗಾಗಲೇ ವಕೀಲರ ಮೇಲೆ ದಾಖಲಿಸಿದಂತಹ ಸುಳ್ಳು ಪ್ರಕರಣವನ್ನು ಕೈ ಬಿಡಬೇಕೆಂದು ಅಧ್ಯಕ್ಷರು ಆಗ್ರಹಿಸಿದರು.
ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶ್ರುತಿ ಎಂ.ಎಂ ಅವರಿಗೆ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಎಚ್.ಎಂ. ಮಂಜುನಾಥಸ್ವಾಮಿ, ಜಂಟಿ ಕಾರ್ಯದರ್ಶಿ ವಿ.ರವಿಕುಮಾರ, ಖಚಾಂಚಿ ಎ.ಮರಿಯಪ್ಪ, ಹಿರಿಯ ವಕೀಲರಾದ ಎಸ್.ವಿ.ಜವಳಿ, ಡಿ.ರವಿರಾಜ್, ಜಿ.ವೀರಭದ್ರಪ್ಪ, ಜೆ.ಪ್ರಹ್ಲಾದ್ ಶೆಟ್ಟಿ, ಎ.ಕರುಣಾನಿಧಿ, ಬಳ್ಳಾರಿಯ ಜಿ.ಬಸವರಾಜ್, ಐ.ಪರಶುರಾಮ, ಬಿ.ಸಿ.ಮಹಾಂತೇಶ, ನೋಟರಿಗಳಾದ ಚಂದ್ರಶೇಖರ, ವಿ.ಯಲಗೊಡು, ತಾರಿಹಳ್ಳಿ ಹನುಮಂತಪ್ಪ, ಸುರುಭಿದುರ್ಗಾ, ವಕೀಲರಾದ ಕೆ.ರಾಮಪ್ಪ, ಇ.ಪುಷ್ಪಲತಾ, ಕೆ.ಶರಣಪ್ಪ, ಗೋಪಿ, ಸುಮಂಗಲಾ, ಮೌಲಾ, ರಾಜೇಂದ್ರ ಪ್ರಸಾದ್, ಉಮೇಶ.ಎ, ದುರುಗಪ್ಪ, ವಿಜಯಕುಮಾರ, ಅಜರುದ್ದೀನ್, ಜಿ.ವಿಶ್ವನಾಥ್, ರಮೇಶ ಹೂಗಾರ್, ಪಾಂಡುರಂಗ, ಮಂಜುನಾಥ, ದುರ್ಗೇಶ್ಕುಮಾರ, ರಾಜೇಶ್, ಎನ್.ಎಂ.ಸೌದಾಗರ್ ಮತ್ತಿತರರು ಇದ್ದರು.
