
ಶಂಕರಾಚಾರ್ಯರ ಜಯಂತಿ ಜಿಲ್ಲಾಡಳಿತದಿಂದ ಪುಷ್ಪ ನಮನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಶ್ರೀ ಶಂಕರಾಚಾರ್ಯ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಶಂಕರಾಚಾರ್ಯರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗಳಾದ ಸಾವಿತ್ರಿ ಬಿ ಕಡಿ ಅವರು ಪುಷ್ಪ ನಮನ ಸಲ್ಲಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಮೇಶ ಪದಕಿ, ರವಿ ಪುರೋಹಿತ, ಸತ್ಯನಾರಾಯಣ ಕುಲಕರ್ಣಿ, ನಾಗರಾಜ ಎಲ್ ದೇಸಾಯಿ, ರಮೇಶ ದೀಕ್ಷಿತ್, ಶಿಕ್ಷಣ ಇಲಾಖೆಯ ಅಯ್ಯನಗೌಡ, ಅಬಕಾರಿ ಇಲಾಖೆಯ ಇಸ್ಮಾಯಿಲ್, ವಾರ್ತಾ ಇಲಾಖೆಯ ಎಂ.ಪಾಂಡುರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಂಕರ ಮತ್ತು ಮತ್ತಣ್ಣ ಹಾಗೂ ಮತ್ತಿತರರಿದ್ದರು.