ತಾಲೂಕಾಡಳಿತದಿಂದ ಶಂಕರಚಾರ್ಯ ಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 12- ತಾಲೂಕ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ ತಾಲೂಕು ಆಡಳಿತ ದಿಂದ ಶ್ರೀ ಗುರು ಶಂಕರಚಾರ್ಯರ ಜಯಂತಿ ಉತ್ಸವ ಶಂಕರಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಚನೆ ಗೌರವಿಸಿ ನಮನ ಸ್ಮರಿಸಿ ಮಾತನಾಡಿದ ತಾಲೂಕ ತಹಸಿಲ್ದಾರರ ಅಧಿಕಾರಿ ಸುವರ್ಣ ಅವರು ಮಾತನಾಡಿ ಶಂಕರಚಾರ್ಯರ ವಿಚಾರಧಾರೆ ಎಷ್ಟು ಸಮಂಜಸ ಎಂಬುದು ಅವರ ಭಾಷ್ಯ ಪಂಕ್ತಿ ಗಳನ್ನು ಸಮಾಧಾನ ಚಿತ್ತದಿಂದ ಪೂರ್ವ ಗ್ರಹವಿಲ್ಲದೆ ಅರ್ಥ ಮಾಡಿಕೊಂಡರೆ ಸಾಧ್ಯ ಎಂದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯರು ಅಬ್ದುಲ್ ನಬಿ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಈ ದಿನವನ್ನು ತತ್ವ ಜ್ಞಾನಿದಿನ ಎಂದು ಘೋಷಿಸಿರುವುದು ಸೂಕ್ತವಾಗಿದೆ ನಾವೆಲ್ಲರೂ ಶ್ರೀ ಶಂಕರಾಚಾರ್ಯ ಹೃದಯವನ್ನು ಅರಿಯಲು ಅವರು ಏನು ಏಕೆ ಹೇಳಿದ್ದಾರೆ ಯಾವ ದೃಷ್ಟಿಯಿಂದ ಅರ್ಥೈಸಬೇಕು ಎಂಬುದನ್ನು ಸದ್ಗುರುಗಳಿಂದ ತಿಳಿಯೋಣ ವಿವೇಕ ಬೋಧಿಸಿದ ಯತಿ ಶ್ರೇಷ್ಠ ಶಂಕರಾಚಾರ್ಯ ಅವರ ಗ್ರಂಥಗಳು ಲೇಖನಗಳು ಸ್ತೋತ್ರಗಳು ಅಷ್ಟಕಗಳು ತ್ರಿಶತಿಗಳು ಮುಂತಾದ ತಿಳಿಯಬೇಕಿದೆ ಎಂದರು.
ತಾಲೂಕ ತಹಸಿಲ್ದಾರ್ ಕಚೇರಿಯ ಅಧಿಕಾರಿ ಮಹಾಂತೇಶ್ ಗುಡದೇಶ ಗಾದಿಲಿಂಗಪ್ಪ ತುಷಾರ್ ದ್ಯಾವಣ್ಣ ಗಿರಿಯಪ್ಪ ರವಿಕುಮಾರ್ ಹನುಮೇಶ್ ಸಮಾಜ ಸೇವಕ ಮೊಹಮ್ಮದ್ ನೌಶಾದ್ ಅಲಿ ತಾಲೂಕ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತಿತರ ಗಣ್ಯರು ಇದ್ದರು.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಂಕೇತಿಕ ಸರಳವಾಗಿ ಶಂಕರಚಾರ್ಯ ಜಯಂತಿ ಆಚರಿಸಲಾಯಿತು .
