IMG-20240115-WA0040

ಸಡಗರದಿಂದ ಸಂಕ್ರಾಂತಿ ಹಬ್ಬ ಆಚರಣೆ : ಧಾನ್ಯದ ರಾಶಿಗಳಿಗೆ ವಿಶೇಷ ಪೂಜೆ

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ,15- ಸಂಕ್ರಾಂತಿ ಹಬ್ಬ ಅಂದರೆ, ಗ್ರಾಮೀಣ ಭಾಗಗಳಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ವರ್ಷದ ಹೊಲಗಳಲ್ಲಿ ಬೆವರು ಸೋರಿಸಿ ಕಷ್ಟಪಟ್ಟು ಬೆಳೆಸಿದ ಧಾನ್ಯಗಳು ಮನೆಗೆ ಸೇರುವ ಮಾಸ ಮಾರ್ಗಸಿರ ಪುಷ್ಯ ಬಳ್ಳಾರಿ ಗ್ರಾಮೀಣ ಭಾಗದ ಹಲವಾರು ಗ್ರಾಮಗಳಲ್ಲಿ ರೈತ ಬಾಂಧವರು, ತಮ್ಮ ಹೊಲ ಗದ್ದೆಗಳಿಗೆ, ತಮಗೆ ಸಹಕಾರಿಯಾಗುವ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೊಲಗದ್ದೆಗಳಲ್ಲಿ ರಾಶಿಗಟ್ಟಲೆ ಹಾಕಿರುವ ಮೆಕ್ಕೆಜೋಳ, ನೆಲ್ಲು, ಮೆಣಸಿನಕಾಯಿ ಧಾನ್ಯದ ರಾಶಿಗಳಿಗೆ ಪೂಜೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು, ಸಂಗನಕಲ್ಲು ಕೃಷ್ಣಪ್ಪ ಅವರು, ಇಂದು ತಮ್ಮ ಗ್ರಾಮವಾದ ಸಂಗನಕಲ್ಲು ನಲ್ಲಿ ರೈತ ಬಾಂಧವರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಧಾನ್ಯದ ರಾಶಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಆಗಿ ಅವರು ಮಾತನಾಡುತ್ತಾ. ರೈತರು ಈ ಭಾಗದಲ್ಲಿ ಈ ವರ್ಷ ಬೆಳೆಸಿದ ಬೆಳೆಗಳು ಉತ್ತಮ ರೀತಿಯಲ್ಲಿ ಫಲ ಸಿಕ್ಕಿದೆ ಎಂದು ಹೇಳಿದರು. ರೈತರು ಕಷ್ಟಪಟ್ಟು ಧಾನ್ಯಗಳನ್ನು ಬೆಳೆಸಿದರೆ ಎಲ್ಲರಿಗೂ ಅನ್ನ ಸಿಗುತ್ತದೆ, ರೈತರು ನೆಮ್ಮದಿಯಿಂದ ದೇಶದಲ್ಲಿ ಎಲ್ಲರೂ ಸುಖವಾಗಿರುತ್ತಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!