ವಾಹನ ಸವಾರರೇ ಇನ್ಮುಂದೆ ಹೆಲ್ಮೆಟ್ ಕಡ್ಡಾಯ
ಎಸ್ ಪಿ ಶ್ರೀ ಹರಿಬಾಬು ಬಿ ಎಲ್
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, ೧೧- ವಿಜಯನಗರ ಜಿಲ್ಲಾ ಪೊಲೀಸ್ ಹೊಸಪೇಟೆ ಉಪ ವಿಭಾಗ, ಸಂಚಾರ ಪೊಲೀಸ್ ಠಾಣೆ ಹೊಸಪೇಟೆ, ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಯಿತು.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಹರಿಬಾಬು ಬಿ ಎಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ. 2024ರ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹವನ್ನು ದಿ:11.01.2024 ರಿಂದ 17.01.2024 ರ ವರೆಗೆ ರಸ್ತೆ ಸುರಕ್ಷತೆ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದೇವೆ, ಇದರ ಜೊತೆಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
ನಾಳೆ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಹಾಗೂ ಕಾರು ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯದ ಕುರಿತಾಗಿ ಅವರಿಗೆ ಗುಲಾಬಿ ಹೂವು ನೀಡುವ ಮುಖಾಂತರ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ.
ಇನ್ನು ಕಾಲೇಜಿಗೆ ಹೋಗುವ ಅಪ್ರಾಪ್ತ ವಿದ್ಯಾರ್ಥಿಗಳು ಬೈಕ್ ಬಳಸುವ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮತ್ತೊಂದು ದಿವಸ ವಿಜಯನಗರ ಜಿಲ್ಲೆಯ ನಮ್ಮ ಇಲಾಖೆ ಸಿಬ್ಬಂದಿಗಳಿಂದ ಸೈಕಲ್ ಜಾಥದ ಮೂಲಕ ರಸ್ತೆ ಮತ್ತು ಟ್ರಾಫಿಕ್ ಅವರ್ನೆಸ್ ಬಗ್ಗೆ ತಿಳಿಸಿಕೊಡುತ್ತೇವೆ. ಆಟೋ ಹಾಗೂ ಲಾರಿ ಚಾಲಕರಿಗೆ ಮದ್ಯಪಾನಮಾಡಿ ವಾಹನಗಳನ್ನು ಚಾಲನೆ ಮಾಡುವುದರ ಬಗ್ಗೆ ಇವರಿಗೊಂದು ಸಭೆಕರೆದು ತಿಳಿಸುತ್ತೇವೆ.
ಈಗಾಗಲೇ ಇರುವಂತ ಸಿಗ್ನಲ್ ಗಳ ಪೈಕಿ ಕೆಲವು ರಿಪೇರಿಗಳಿವೆ ಅವಗಳನ್ನು ಸರಿ ಮಾಡಿಸಿ ಅವಶ್ಯಕತೆ ಇರುವ ಜಾಗದಲ್ಲಿ ಅಳವಡಿಸಲು ತೀರ್ಮಾನಿಸಿದ್ದೇವೆ ಎಂದರು ಈ ಆಂದೋಲನಕ್ಕೆ ವಾಹನ ಸವಾರರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
