WhatsApp Image 2024-01-31 at 3.59.51 PM

ಅಕ್ಷರ ಬ್ರಹ್ಮ ದ.ರಾ.ಬೇಂದ್ರೆ 128ನೇ ಜಯಂತ್ಯೋತ್ಸವ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,31-  ನಾನು, ನೀನು, ಆನು,ತಾನು ಎಂಬ ನಾಲ್ಕೇ ನಾಲ್ಕು ಅದ್ವೈತ ಸಿದ್ದಾಂತದ ಆಧ್ಯಾತ್ಮಿಕ ಪದಗಳನ್ನೊಳಗೊಂಡಂತೆ ಸರಳ ಹಾಗೂ ಸರ್ವಕಾಲಕ್ಕೂ ಬಾಳುವಂತಹ ಕವನಗಳನ್ನು ಬರೆದು ಅಕ್ಷರ ಬ್ರಹ್ಮ ಎಂದು ಖ್ಯಾತಿ ಪಡೆದವರು ವರಕವಿ ದ.ರಾ.ಬೇಂದ್ರೆಯವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.

ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದ.ರಾ.ಬೇಂದ್ರೆ ಅವರ 128ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಅಂಬಿಕಾತನಯ ದತ್ತ ಎಂಬ ಕಾವ್ಯ ನಾಮದಿಂದ ಕವನಗಳನ್ನು ಬರೆದು ಜನಸಾಮಾನ್ಯರಿಗೂ ತಿಳಿಯುವಂತೆ ಮಾಡಿದರು.

ಗರಿ,ನಾದಲೀಲೆ, ನಾಕುತಂತಿ,ಅರಳು ಮರಳು,ಉಯ್ಯಾಲೆ, ಸಖೀಗೀತ ಮುಂತಾದ ಪ್ರಸಿದ್ಧ ಕವನ ಸಂಕಲಗಳನ್ನು ಬರೆದಿದ್ದಾರೆ.ಅವರ ನರಬಲಿ ಕವನ ಬ್ರಿಟಿಷ್ ಆಡಳಿತವನ್ನು ಪ್ರಶ್ನಿಸುವಂತೆ ಇದ್ದುದರಿಂದ ಅವರನ್ನು ಸೆರೆಮನೆಗೆ ಹಾಕಲಾಯಿತು.

ಬೇಂದ್ರೆಯವರು ಹೇಳಿದ ರಸವೇ ಜನನ,ವಿರಸವೇ ಮರಣ,ಸಮರಸವೇ ಜೀವನ ಎಂಬ ಮಾತು ಕವಿ ಹಾಗೂ ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಯಿತು. ಅವರ ನಾಕುತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.ಆದ್ದರಿಂದ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಕವನಗಳನ್ನು ಓದುವ ಹಾಗೂ ಬರೆಯುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಕೆ.ತಿಪ್ಪೇಶ್ವರಿ,ವಂಶಿ, ಕುರುಬರ ಸಾಗರ ಗೆ ಬಹುಮಾನ ವಿತರಿಸಲಾಯಿತು.
ನಲಿಕಲಿ ಶಿಕ್ಷಕಿ ಕೆ.ಸುಮತಿ,ಕನ್ನಡ ಶಿಕ್ಷಕಿ ಶ್ವೇತಾ, ಇಂಗ್ಲಿಷ್ ಶಿಕ್ಷಕಿ ಸಿ.ಉಮ್ಮೆಹಾನಿ, ಸಮಾಜ ಶಿಕ್ಷಕಿ ಶಶಮ್ಮ, ಶಿಕ್ಷಕರಾದ ಎಸ್. ರಾಮಾಂಜಿನೇಯ, ವಿದ್ಯಾರ್ಥಿಗಳಾದ ಹುಲಿಗೆಮ್ಮ,ನಿತ್ಯ ಹಾಗೂ ಅನುಷ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!