IMG-20231221-WA0021

ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಳವಂಡಿ ಘಟಕ ಉದ್ಘಾಟನೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21-    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಹಾಗೂ ಅಪ್ಪು ಪ್ರಕಾಶನ ಭೈರಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಳವಂಡಿ ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಧ್ಯಾಮರಾಜ್ ವಾಯ್ ಸಿಂದೋಗಿ ಅವರ ಕವನ ಸಂಕಲನಗಳ ಬಿಡುಗಡೆ ಸಮಾರಂಭವನ್ನು ದಿ. 24/12/2023 ರಂದು ಕೊಪ್ಪಳ ತಾಲೂಕಾ ಭೈರಾಪುರ ಗ್ರಾಮದ ಶ್ರೀ ರಾಮ ಮಂದಿರದಲ್ಲಿ ನಡೆಯಲಿದೆ‌.               ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ. 108 ಶ್ರೀ ಮರುಳರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಿದ್ದೇಶ್ವರ ಸಂಸ್ಥಾನ ಮಠ ಅಳವಂಡಿ ಅವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಕನ್ನಡ ಪ್ರಭ ಕೊಪ್ಪಳ ಜಿಲ್ಲಾ ವರದಿಗಾರರಾದ ಸೋಮರಡ್ಡಿ ಅಳವಂಡಿ ನೆರವೇರಿಸುವರು.

       ದೇವರ ಜನ್ಮದಾತ ಕವನ ಸಂಕಲನವನ್ನು ಇಲಕಲ್ ಸಾಹಿತಿ ಹೆಚ್. ಎಸ್. ಗೌಡರ್ ಹಾಗೂ ಬೆಳ್ಳಿ ನನ್ನ ಹಳ್ಳಿ ಕವನ ಸಂಕಲನವನ್ನು ಹೂವಿನ ಹಡಗಲಿಯ ಉಪನ್ಯಾಸಕರಾದ ಶಂಕರ್ ಜಿ. ಮಾಳೆಕೊಪ್ಪ ಅವರು ಬಿಡುಗಡೆ ಮಾಡಿ ಅನುಸಂಧಾನ ಮಾಡುವರು. ಅಳವಂಡಿ ಕಸಾಪ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಈ ಸಮಾರಂಭದಲ್ಲಿ ಕರುನಾಡು ಬೆಳಗು ಪತ್ರಿಕೆ ಸಂಪಾದಕರಾದ ಸಂತೋಷ ದೇಶಪಾಂಡೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ರಾಮಚಂದ್ರಗೌಡ ಬಿ ಗೊಂಡಬಾಳ, ಶಾಂತಿ ನಿಕೇತನ ಕಿರಿಯ ಪ್ರಾಥಮಿಕ ಶಾಲೆ ಸಂಸ್ಥಾಪಕರಾದ ಬಸವರಾಜ ತಳಕಲ್, ಉಪನ್ಯಾಸಕರಾದ ಹನುಮಂತಪ್ಪ ಚವಟಗಿ, ಗ್ರಾ. ಪಂ. ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಅನ್ವರ್ ಗಡಾದ್, ಸಾಹಿತಿ ಕಲ್ಲಪ್ಪ ಕವಳಕೇರಿ, ಶಿಕ್ಷಕರಾದ ಖಾದರ್ ಬಾಷಾ, ಹನುಮಂತಪ್ಪ ಸಿಂದೋಗಿ, ಮಾರುತಿ ಸಿಂದೋಗಿ, ಕೊಟ್ರಯ್ಯ ವ್ಹಿ. ನರೇಗಲ್, ಎಸ್ ಎಸ್ ಮುದ್ಲಾಪುರ, ಅರ್ಚಕರಾದ ಮಲ್ಲಾರ ಭಟ್ ಜೋಷಿ ಉಪಸ್ಥಿತರಿರುವರು.


ಈ ಸಂದರ್ಭದಲ್ಲಿ ಸಾಧಕರಾದ ಗುರುರಾಜ ಪಾಟೀಲ್, ಸುರೇಶ ಸಂಗರಡ್ಡಿ, ಕೋಟೆಪ್ಪ ಮೇಟಿ, ಡಾ. ರವಿ ಹೆಚ್. ಜಡಿ, ವೈದ್ಯಭೂಷಣ ಡಾ. ಹಾಲೇಶ ಕಬ್ಬೇರ್ ಅವರಿಗೆ ಸನ್ಮಾನ ಮಾಡಲಿದ್ದಾರೆ ಎಂದು ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ರಾಮಚಂದ್ರಗೌಡ ಬಿ ಗೊಂಡಬಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!