25 ರಂದು ಮಂತ್ರಾಲಯದಲ್ಲಿ ಸುವರ್ಣ ಕರ್ನಾಟಕ
ಸಾಂಸ್ಕೃತಿಕ ಸಂಭ್ರಮ-ರುದ್ರಪ್ಪ ಭಂಡಾರಿ
ಕರುನಾಡ ಬೆಳಗು ಸುದ್ದಿ
ಕುಕನೂರು 21-ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಕುಕನೂರು ಕೊಪ್ಪಳ ಜಿಲ್ಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಸುವಣ೯ ಕನಾ೯ಟಕ ಸಂಭ್ರಮಾಚರಣೆ ನಿಮಿತ್ತ ಕನ್ನಡ ಹಬ್ಬ ಜರುಗಲಿದೆ ಎಂದು ಅಧ್ಯಕ್ಷರು ಹಾಗೂ ಪತ್ರಕರ್ತರಾದ ರುದ್ರಪ್ಪ ಭಂಡಾರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು ವಿಚಾರ ಸಂಕಿರಣ ಹಾಗೂ ಭಕ್ತಿ ಸಂಗೀತ , “ಕವಿಗಳು ಕಂಡಂತೆ ಶ್ರೀಗುರು ರಾಘವೇಂದ್ರ ರಾಯರು ಕವಿಗೋಷ್ಠಿ ” ಹಾಗೂ ಭಕ್ತಿ ಸಂಗೀತ, ಸುಗಮ ಸಂಗೀತ, ದಾಸರ ಪದಗಳು ಕಾರ್ಯಕ್ರಮ, ನೃತ್ಯ, ಜಾನಪದ ಗಾಯನ ಹೀಗೆ ಹಲವು ಕಾಯ೯ಕ್ರಮಗಳು ಹಾಗೂ ಸಾಧಕರಿಗೆ ಅಭಿನಂದನಾ ಹಾಗೂ ಸತ್ಕಾರ ಸಮಾರಂಭ ಡಿಸೆಂಬರ್ 25 ರ ಸೋಮವಾರ ಮಂತ್ರಾಲಯದ ಲ್ಲಿ ನಡೆಯಲಿದೆ.
ಭಾಗವಹಿಸುವ ಆಸಕ್ತರು ಕೂಡಲೇ ತಮ್ಮ ಹೆಸರನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಪತ್ರಕರ್ತರಾದ ರುದ್ರಪ್ಪ ಭಂಡಾರಿ ಮೊಬೈಲ್ ನಂಬರ್ 7815985505 ಗೆ ಹೆಸರು ನೊಂದಾಯಿಸ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
