
ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯ ರೈತ ಫಲಾನುಭವಿಗಳಿಗೆ
ಕಿರುಚಿಲ ವಿತರಣೆ : ಶಾಸಕ ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ರೈತರು ಕೃಷಿ ಇಲಾಖೆಯ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಷದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಬಿ ಎಂ ನಾಗರಾಜ ಅವರು ಹೇಳಿದರು.
ಸಿರುಗುಪ್ಪ ನಗರದ ಕೃಷಿ ಇಲಾಖ ಕಚೇರಿ ಮೈದಾನದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕು ಪಂಚಾಯತ್ ಸಿರುಗುಪ್ಪ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಹ ಭಾಗಿತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ(ವಿಮಾ) ಯೋಜನೆ ಮುಂಗಾರು 2024 ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆ ಅಡಿಯಲ್ಲಿ ರೈತರಿಗೆ ಫಲಾನುಭವಿಗಳಿಗೆ ಕಿರುಚಿಲ ವಿತರಣೆ ಕಾರ್ಯಕ್ರಮದಲ್ಲಿ ಹಾಗೂ ಕೃಷಿ ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡುತ್ತಿದ್ದರು.
ತಹಸಿಲ್ದಾರ್ ಎಚ್ ವಿಶ್ವನಾಥ್ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ತೋಟಗಾರಿಕೆ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕ ಖಾದರ್ ಬಾಷಾ ಕೃಷಿ ಇಲಾಖೆಯ ಗರ್ಜಪ್ಪ ಬಾಲಾಜಿ ನಾಯಕ್ ಅವರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಕುರಿತು ಮಾತನಾಡಿ ವಿಮೆಗೆ ರೈತರು ನೋಂದಾಯಿಸಬಹುದಾಗಿದೆ.
ಅವಶ್ಯ ದಾಖಲಾತಿಗಳು ರೈತರು ಕಂದಾಯ ರಶೀದಿ ಖಾತೆ ಪುಸ್ತಕ ಬ್ಯಾಂಕ್ ಖಾತೆ ಪುಸ್ತಕ ಆಧಾರ್ ಕಾರ್ಡ್ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಬ್ಯಾಂಕ್ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ನೋಂದಾಯಿಸ ಕೊಳ್ಳಬಹುದಾಗಿದೆ ಎಂದು ರೈತರಿಗೆ ಮಾಹಿತಿ ನೀಡಿ ವಿವರಿಸಿ ಮಾತನಾಡುತ್ತಿದ್ದರು.
ನಗರ ಸಭಾ ಸದಸ್ಯರಾದ ಬಿ ಎಂ ಅಪ್ಪಾಜಿ ನಾಯಕ ಹೆಚ್ ಬಿ ಎಂ ಅಪ್ಪಾಜಿ ನಾಯಕ ಹೆಚ್ ಗಣೇಶ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ವಿವಿಧ ಅಧಿಕಾರಿಗಳು ರೈತರು ಸಾರ್ವಜನಿಕರು ಇದ್ದರು