WhatsApp Image 2024-07-02 at 5.03.13 PM

ತಾ.ಪಂ. 1ನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 2- ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಜರುಗಿದ ತಾಲೂಕ ಮಟ್ಟದ ಒಂದನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಸಿರುಗುಪ್ಪ ತಾಲೂಕಿನ ಗ್ರಾಮೀಣ ಭಾಗದಲ್ಲಿ 115 ಆರ್ ಓ ಪ್ಲಾಂಟ್ ಗಳಿದ್ದು ಅದರಲ್ಲಿ ಇನ್ನೂ ಕೆಲ ಪ್ಲಾಂಟ್ ಗಳು ಸರ್ಕಾರದ ಆಧೀನಕ್ಕೆ ಬಂದಿರದೆ ಇರುವುದು ಅಂತಹ ಆರ್‌ಓ ಪ್ಲಾಂಟ್ ಗಳ ಬಗ್ಗೆ ಗಮನ ಹರಿಸಬೇಕು ಸಿರುಗುಪ್ಪ ನಗರದಲ್ಲಿ 6 ಆರ್ ಓ ಪ್ಲಾಂಟ್ ಗಳಿದ್ದು ಅದರಲ್ಲಿ ಆರು ಚಲಾವಣೆಯಲ್ಲಿ ಇಲ್ಲದೆ ಇರುವದು ಕಂಡು ಬಂದಿದೆ ಸರ್ಕಾರದ ಆರ್ ಓ ಪ್ಲಾಂಟ್ ಗಳಲ್ಲಿ ಎರಡು ರೂಪಾಯಿಗೆ ನೀರು ಒದಗಿಸಬೇಕು ಆದರೆ ಗ್ರಾಮೀಣ ಭಾಗದ 6 ಪ್ಲಾಂಟ್ ಗಳಲ್ಲಿ ಐದು ರೂಪಾಯಿಗೆ ನೀರು ಒದಗಿಸುವದು ಸರಿಯಲ್ಲ ಎಂದು ನೀರಾವರಿ ಇಲಾಖೆಯ ಎ ಇ ಇ ರವೀಂದ್ರನಾಥ ಅವರಿಗೆ ತರಾಟೆಗೆ ತೆಗೆದುಕೊಂಡರು.

ಹಳೆಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ದೇವಲಾಪುರ ಗ್ರಾಮದ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಕೊರತೆ ಇದೆ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದು ಪಿಡಿಓ ರಾಜೇಶ್ವರಿ ಸಭೆಯಲ್ಲಿ ಶಾಸಕರಿಗೆ ಮನವಿ ಮಾಡಿಕೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎ ಗಾದಿಲಿಂಗಪ್ಪ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಜಿ ಪ್ರದೀಪ್ ಅಬಕಾರಿ ಇಲಾಖೆಯ ಸಿಪಿಐ ಕಿರ್ತನಾ ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಭಾಷಾ ನಗರ ಸಭಾ ಪೌರಯುಕ್ತ ಗುರುಪ್ರಸಾದ್ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ನಗರ ಸಭಾ ಸದಸ್ಯರಾದ ಬಿ ಎಂ ಅಪ್ಪಾಜಿ ನಾಯಕ ಹೆಚ್ ಗಣೇಶ್ ತಾಲೂಕ ತಹಶೀಲ್ದಾರ್ ಎಚ್ ವಿಶ್ವನಾಥ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಸಹಾಯಕ ನಿರ್ದೇಶಕ ಬಸವರಾಜ್ ತಾಲೂಕ‌ ಮಟ್ಟದ ಎಲ್ಲಾ ಅಧಿಕಾರಿಗಳು ಗ್ರಾಮ ಪಂಚಾಯತ್ ಪಿಡಿಒಗಳು ಮತ್ತಿತರರು ಇದ್ದರು.

ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿಯ ವರದಿಗಳನ್ನು ಸಭೆಗೆ ವಿವರಿಸಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!