
ಇರಕಲ್ಲಗಡ: ಸಂಭ್ರಮದಿಂದ ಜರುಗಿದ ಶ್ರೀ ರುದ್ರಮುನೇಶ್ವರ ಜಾತ್ರಾಮಹೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಇರಕಲ್ಲಗಡ ಗ್ರಾಮದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ 6ನೇ ವರ್ಷದ ಶ್ರೀ ರುದ್ರಮುನೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಅರಳೆಲೆ ಹಿರೇಮಠ ಶ್ರೀ ಷ.ಬ್ರ. 108 ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಜರುಗಿತು. ವೇದಮೂರ್ತಿ ಕುಮಾರ ಇವರಿಂದ ಪ್ರವಚನ ಹಾಗೂ ಹಂಚಿನಾಳ ಬಸವ ಶರಣರು ಬೆಳಗಾಂವ ಹಾಗೂ ಸಂಗೀತ ಬಳಗ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿದವು.
ರುದ್ರಮುನೇಶ್ವರ ಚರಿತ್ರೆ ಕಿರ್ತನೆ , ಶುಕ್ರವಾರ ದಂದು ರಾತ್ರಿ ಜಾಗರಣೆ, ಭಜನೆ , (ಅಯ್ಯಾಚಾರ) ದಿಕ್ಷಾ , ಸೋಮವಾರ ಶ್ರೀ ರುದ್ರಮುನೇಶ್ವರನ ಉತ್ಸವ , ಅಗ್ನಿಕುಂಡ ಹಾಗೂ ಜಾತ್ರಾ ಮಹೋತ್ಸವ ಪ್ರಸಾದ ಜರುಗಿತು. ಕಾರ್ಯಕ್ರಮದಲ್ಲಿ ಇರಕಲ್ಲಗಡಾ ಗ್ರಾಮ ಹಾಗೂ ಸುತ್ತಮುತ್ತಲಿನ ಭಕ್ತರು ಹಿರಿಯರು ಇದ್ದರು.