*ಹಂಪಿ ಉತ್ಸವ- 2025 ಗಣ್ಯರಿಂದ ವಿದ್ಯುಕ್ತ ಚಾಲನೆ *
ಹಂಪಿ ಉತ್ಸವ ಕನ್ನಡ ನಾಡಿನ ನಾಡಹಬ್ಬ : ಸಚಿವ ಜಮೀರ್
ಉತ್ಸವಕ್ಕೆ ಗೈರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ – ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ
ಲಕ್ಕಿಮರದ ಮಂಜುನಾಥ
ಕರುನಾಡ ಬೆಳಗು ಸುದ್ದಿ
ಹಂಪಿ (ವಿಜಯನಗರ )ಫೆ, 28: . ಅಂಬೇಡ್ಕರ್ ಅವರು ಸಂವಿಧಾನ ಕೊಡದೇ ಇದ್ದಿದ್ದರೆ ನಾವು ಈ ಉತ್ಸವ ಮಾಡಲು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ಅವರನ್ನು ನೆನೆಸಿಕೊಳ್ಳೋಣ ಎನ್ನುತ್ತಾ ಹಂಪಿ ಉತ್ಸವ ನಮಗೆ ನಾಡ ಹಬ್ಬ ಇದ್ದಹಾಗೆ ಇಂದು ಎಲ್ಲಾ ಮನೆಗಳಲ್ಲೂ ಹಂಪಿ ಉತ್ಸವ ಆಚರಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಅವರು ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವಿಜಯನಗರ ಇವರ ಸಂಯುಕ್ತಶ್ರಯದಲ್ಲಿ ಗಣ್ಯರಿಂದ ಹಂಪಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಚಿವರು ಮಾತು ಪ್ರಾರಂಭಿಸುತ್ತಿದಂತೆ ಜೈಭೀಮ್ ಜೈಭೀಮ್ ಜೈ ಜೈ ಭೀಮ್ ಎಂದು ಕೂಗಿ ಪ್ರೇಕ್ಷಕರನ್ನು ಕೂಗಿಸಿದರು. ಮಾಜಿ ಉಪ ಮುಖ್ಯಮಂತ್ರಿ ಎಂ ಪಿ ಪ್ರಕಾಶ್ ರವರು 1987ರಿಂದ ಉತ್ಸವ ಪ್ರಾರಂಭಿಸಿದರು ಇಂದಿಗೂ ಅದು ಮುಂದು ವರೆಯುತ್ತಿದೆ. ಕರೋನ ದಿಂದ ವಿಳಂಭಮಾಡಲಾಗಿತ್ತು. ಸಿದ್ದರಾಮಯ್ಯ ನವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು ಆದರೆ ಅವರ ಕಾಲು ನೋವಿನಿಂದ ಬರಲು ಸಾಧ್ಯ ವಾಗಲಿಲ್ಲ , ಆದರೂ ಮುಂಬರುವ ತಿಂಗಳು ಏಪ್ರಿಲ್ ನಲ್ಲಿ ಮಾಡಿ ಎಂದು ಕೇಳಿಕೊಂಡಿದ್ದರು.
ಇಗಾಗಲೇ ತುಂಬಾ ವಿಳಂಬವಾಗಿದೆ ಹಾಗಾಗಿ ಮಾಡಲೇ ಬೇಕಾಗಿದೆ ಇದೆ ತಿಂಗಳು ಮಾಡಲು ನಿರ್ಧಾರಿಸಲಾಗಿದೆ ಎಂದು ಹೇಳಿ ದಿನಾಂಕವನ್ನು ನಿಗದಿ ಮಾಡಿ ಅದರಂತೆ ಉತ್ಸವವನ್ನು ಮಾಡಲಾಗುತ್ತದೆ. ಮೂರು ರುದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಅದ್ದೂರಿಯಾಗಿ ಆಗಲಿ ಮುಂದಿನ ವರ್ಷ ಅವಕಾಶ ಸಿಕ್ಕರೆ ಅದ್ದೂರಿಯಾಗಿ ಮಾಡೋಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ 1972ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಯಿಂದ ಪ್ರಾರಂಭಿಸಲಾಗಿತ್ತು.ಎಂ.ಪಿ ಪ್ರಕಾಶ್ ಅವರಿಂದ ಈ ಹಂಪಿ ಉತ್ಸವ ಪ್ರಾರಂಭವಾಯಿತು, ನಂತರ ಆನೆಗುಂದಿ ಉತ್ಸವ ಪ್ರಾರಂಭವಾಯಿತು, ನಂತರ ಚಾಲುಕ್ಯ ಉತ್ಸವ ಪ್ರಾರಂಭವಾಯಿತು ನಂತರ ಕಾಕನಕ ಗಿರಿ ಉತ್ಸವ ನಾವು ಪ್ರಾರಂಭಿಸಿದೆವು, ಕನಕರಾಯ ಹಂಪಿಯ ಪ್ರಮುಖರಾಗಿದ್ದರು ಹಾಗಾಗಿ ಕನಕರಾಯರನ್ನು ನೆನಪಿಸಿಕೊಳ್ಳಬೇಕು ಎಂದು ಬಣಿಸಿದರು.
ಹಿರಿಯರಾದ ಎಂ ಪಿ ಪ್ರಕಾಶ ನೇರವ್ಯಕ್ತಿತ್ವ ದವರು ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದ್ದರು. ನಾನು ಇಂದು ಮಂತ್ರಿಯಾಗಿ ಮುಂದು ವರೆಯುತ್ತಿದ್ದೇನೆ ಎಂದರೆ ಅವರೇ ಪ್ರೇರಣೆ ಯಾಗಿದ್ದಾರೆ. ಕಲಾವಿದರ ಕಲೆಯನ್ನು ಪ್ರೋತ್ಸಾಹಿಸಲು ಈ ಉತ್ಸವವನ್ನು ಮಾಡುತ್ತಿದ್ದೇವೆ, ಕಲೆಗೆ ಪ್ರೋತ್ಸಾಹ ಕೊಡುವವರು ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ತಲುಪಲಿ ಎಂದು ಶುಭಕೋರಿದರು.
ಶಾಸಕ ಹೆಚ್ ಆರ್ ಗವಿಯಪ್ಪ ನವರು ಅಧ್ಯಕ್ಷತೆ ವಹಿಸಿ ಮಾತನಾಡಿ ಹಂಪಿ ಉತ್ಸವ ಎಂಪಿ ಪ್ರಕಾಶ್ ಅವರೆ ಪ್ರಾರಭಿಸಿದರು1992ರಿಂದ ನೋತ್ಡುತ್ತಾಬಂದಿದ್ದೇವೆ ಅಂದಿಗೂ ಇಂದಿಗೂ ವಿಭಿನ್ನವಾಗಿದೆ, ಇದಕ್ಕೆಲ್ಲಾ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕಾರಣ ರಾಗಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಈ ಅದ್ಭುತವಾದ ಕಾರ್ಯಕ್ರಮ ನಡೆಯುತ್ತಿದೆ ಎಲ್ಲರಿಗೂ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಪ್ರಾಸ್ಥಾವಿಕವಾಗಿ ಮಾತನಾಡಿ ಹಂಪಿಯಭಾಗದಲ್ಲಿ ಬುಡಕಟ್ಟು ಜನರು ಒಂದಾಗಿ ಯಾವುದೇ ಜಾತಿ, ಧರ್ಮಗಳನ್ನು ಪರಿಗಣಿಸದೆ ಒಂದಾಗಿ ಜೀವನ ಸಾಗಿಸುತ್ತಿದ್ದುದು ವಿಶೇಷತೆ ಇದೆ ಎಂದು ಹಂಪಿಯ ವಿಶೇಷತೆಕುರಿತು ಮಾತನಾಡಿದರು.
ವೇದಿಕೆಯಲ್ಲಿ ರಮೇಶ್ ಅರವಿಂದ್, ಪ್ರೇಮಾ, ಪೂಜಾಗಾಂಧಿ ಹಂಪಿಯ ವಿಶೇಷತೆ ಕುರಿತು ಮಾತನಾಡಿದರು. ಶ್ರೀ ದಯಾನದ ಪುರಿ ಮಹಾಸ್ವಾಮಿಗಳು, ಕೊಪ್ಪಳ ಸಂಸದ ರಾಶೇಖರ್ ಹಿಟ್ನಾಳ್ , ನೇಮಿರಾಜ್ ನಾಯ್ಕ್, ಶಾಸಕಿ ಎಂ ಪಿ ಲತಾ, ಕೃಷ್ಣಾನಾಯ್ಕ್, ಶಾಸಕ ಎನ್ ಟಿ ಶ್ರೀನಿವಾಸ,ಸಿ ಇ ಒ, ನಾಂಗ್ ಜೈ ಮೊಹಮ್ಮದ್ ಅಲಿ ಅಕ್ರಮ್ ಶಾ , ಹಂಪಿ ಗ್ರಾಮ ಪಂಚಾಯಿ ಅಧ್ಯಕ್ಷರು, ಐ ಜಿ ಲೋಕೇಶ್ ಕುಮಾರ್, ಎಸ್ಪಿ ಶ್ರೀಹರಿ ಬಾಬು, ಕುರಿ ಶಿವಮೂರ್ತಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರು, ಇಮಾಮ್ ನಿಯಾಜಿ ಹುಡಾ ಅಧ್ಯಕ್ಷರು ಹೊಸಪೇಟೆ ಇತರರಿದ್ದರು.

