
ಈಶಾನ್ಯ ಪದವೀಧರ ಕ್ಷೇತ್ರದಿಂದ ಅಮರನಾಥ್ ಪಾಟೀಲ್ ನಾಮಪತ್ರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 16- ಕರ್ನಾಟಕ ವಿಧಾನ ಪರಿಷತ್ ಚುನಾವಣೆಗಾಗಿ ಈಶಾನ್ಯ ಪದವೀಧರ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಅಮರನಾಥ್ ಪಾಟೀಲ್ ರವರು ಇಂದು ಕಲ್ಬುರ್ಗಿಯಲ್ಲಿ ವಿಭಾಗಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಂತರ ಕಲ್ಬುರ್ಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜನ ಗೊಂಡ ಬಿಜೆಪಿಯ ಮುಖಂಡರು ಹಾಗೂ ಸಕ್ರೀಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯಾಗಿರುವ ತಮಗೆ ಮತ ನೀಡುವಂತೆ ಎಲ್ಲಾ ಪದವಿಧರಲ್ಲಿ ಕೋರುವಂತೆ ವಿನಂತಿಸಿದರು.
ಬಿಜೆಪಿಯ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿ ಕುಮಾರ್, ವಿಧಾನ ಪರಿಷತ್ತಿನ ಉಪನಾಯಕ ಸುನಿಲ್ ವಲ್ಯಪುರೆ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಮಾಜಿ ಶಾಸಕ ಅವಿನಾಶ್ ಜಾದವ್ ಸಭೆಯಲ್ಲಿ ಮಾತನಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಲ್ಲಿ ಕೋರಿದರು.