2c136fae-be38-4577-97e1-318669006cc9

ನಾಳೆ ಈಶಾನ್ಯ ಪದವಿಧರ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದ ಪೂರ್ವ ಭಾವಿ ಸಭೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 16- ಜೂನ್ 3,2024 ರಂದು ನಡೆಯಲಿರುವ ಈಶಾನ್ಯ ಪದವಿಧರ ವಿಧಾನ ಪರಿಷತ್ ಚುನಾವಣೆ ಸಂಬಂಧ ಪಟ್ಟಂತೆ ನಾಳೆ ದಿನಾಂಕ :17 ರಂದು ಶುಕ್ರವಾರ ಬೆಳಿಗ್ಗೆ 11:00 ಘಂಟೆಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ದಲ್ಲಿ ಚುನಾವಣೆ ಪೂರ್ವ ಭಾವಿ ಸಭೆ ಜರುಗಲಿದೆ.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರೇಗೌಡ ಬಯ್ಯಪುರ ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ, ಸಚಿವ ಶಿವರಾಜ್ ತಂಗಡಗಿ ಮಾನ್ಯ , ಶಾಸಕರಾದ ಬಸವರಾಜ್ ರಾಯರೆಡ್ಡಿ , ರಾಘವೇಂದ್ರ ಹಿಟ್ನಾಳ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮುಖಂಡರಾದ ಹಸನ್ ಸಾಬ್ ದೋತಿಹಾಳ್ ಹಾಗೂ‌ ರಾಜಶೇಖರ್ ಹಿಟ್ನಾಳ್ ಇತರರು ಆಗಮಿಸಲಿದ್ದಾರೆ.

ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಳು, ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಕಾಂಗ್ರೆಸ್ ಮಂಚೂಣಿ ಘಟಕಗಳ ಜಿಲ್ಲಾ ಅಧ್ಯಕ್ಷರು ಗಳು, ಕೊಪ್ಪಳ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಕೆ ಪಿ ಸಿ ಸಿ ಸದಸ್ಯರು, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಗಳು, ಮಂಚೂಣಿ ಘಟಕಗಳ ಕೆಪಿಸಿ ಸಿ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪ ಅಧ್ಯಕ್ಷರು ಉಪಾಧ್ಯಕ್ಷರು ಸಭೆಗೆ ಆಗಮಿಸಿ ಸಭೆ ಯಶಸ್ವೀಗೊಳಿಸಲು ತೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!