ಈಶ್ವರಪ್ಪ ಅವರನ್ನು ಕಡೆಗಣಿಸಿದರೆ ಬಿಜೆಪಿಗೆ ನಷ್ಟ : ಕುರುಬ ಸಂಘ ಪದಾಧಿಕಾರಿಗಳು ಸ್ಪಷ್ಟನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,19- ಬಿಜೆಪಿಯಲ್ಲಿ ಹಿಂದುಳಿದ ವರ್ಗ ನಾಯಕರಾದ ಕೆಎಸ್ ಈಶ್ವರಪ್ಪ ಅವರನ್ನು ಕಡಿಗಣಿಸಲಾಗುತ್ತದೆ ಎಂದು, ಇದರಿಂದ ಬಿಜೆಪಿ ನಷ್ಟ ಎದುರಿಸಬೇಕಾಗುತ್ತದೆ ಎಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘ ಪ್ರಧಾನ ಕಾರ್ಯದರ್ಶಿ ಅಲ್ಲಿ ಪುರ ಮೋಹನ್ ಸ್ಪಷ್ಟನೆ ಮಾಡಿದರು.
ಇಂದು ದೇವಿ ನಗರ್ ಸಮೀಪದಲ್ಲಿರುವ ಕುರುಬರ ಸಂಘ ಕಾರ್ಯದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಕೂಡ ಇವರ ಮೇಲೆ ಪಿತೂರಿ ಕುತಂತ್ರ ನಡೆಸಲಾಯಿತು ಎಂದು ಹಾಗಾಗಿ ವಿಧಾನಸಭಾ ಟಿಕೆಟ್ ಕೈತಪ್ಪಿದೆ ಎಂದರು. ಈಗ ಲೋಕಸಭಾ ಚುನಾವಣೆಯಲ್ಲಿ ಕೂಡ ಅವರ ಮಗ ನನ್ನು ತಿಳಿಯಲಾಗುತ್ತದೆ ಎಂದರು. ಈ ರೀತಿ ಮಾಡುವುದರಿಂದ ಬಿಜೆಪಿ ಪಕ್ಷ ಇವರ ನಷ್ಟ ಎದುರಿಸಬೇಕಾಗುತ್ತದೆ ಎಂದರು.
ಯಡಿಯೂರಪ್ಪನವರ ಶಾಸಕರು ಸಂಸದರು ರಾಜ್ಯಾಧ್ಯಕ್ಷರು ಆಗಬಹುದು, ಪಕ್ಷಕ್ಕಾಗಿ ಹಲವಾರು ವರ್ಷ ಶ್ರಮಿಸಿದ ಕೆ ಎಸ್ ಈಶ್ವರಪ್ಪಗೆ ಹೈಕಮಾಂಡ್ ಈ ರೀತಿ ವರ್ತಿಸುವುದು ಸರಿಯಲ್ಲ ಎಂದರು. ಇದರ ಅನುಗುಣವಾಗಿ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಖಂಡಿಸಲಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನ ಮಗ ವಿಜಯೇಂದ್ರ ನಾನು ಸೋಲಿಸಬೇಕೆಂದು ಕರೆ ನೀಡುವುದರ ಜೊತೆಗೆ ರಾಜ್ಯದ ಎಲ್ಲಾ ಕುರುಬರು ಶಿವಮೊಗ್ಗಕ್ಕೆ ಹೋಗಿ ಚುನಾವಣೆಯಲ್ಲಿ ಯಡಿಯೂರಪ್ಪಗೆ ವ್ಯತಿರೇಕವಾಗಿ ಕೆಲಸ ಮಾಡುತ್ತೀವಿ ಎಂದರು. ನಾವು ಪಕ್ಷಭೇದ ಮರೆತು ಈಶ್ವರಪ್ಪ ಪರವಾಗಿ ನಿಂತಿದ್ದೀವಿ ಅಂತ ಸ್ಪಷ್ಟನೆ ನೀಡಿದರು. ಪಕ್ಷದ ಅಧ್ಯಕ್ಷ ಜೆಪಿ ನಡ್ದ, ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಪತ್ರ ಬರೆಯುತ್ತೇವೆ, ಈಶ್ವರಪ್ಪಗೆ ಕೂಡ ಯಡಿಯೂರಪ್ಪಗೆ ಸಮಾನವಾಗಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.
ಹಿಂದೆ ಸಿದ್ದರಾಮಯ್ಯ ಕುರುಬ ಸಮಾಜ ಇದೆ ಎಂದು ಈಶ್ವರಪ್ಪ ಕರಿಗಣಿಸಿದ್ರೆ ಒಪ್ಪೋದಿಲ್ಲ ಎಂದ ಎಂದಿದ್ದ ಮಾತನ್ನು ಈ ಸಂದರ್ಭವಾಗಿ ಹೇಳಿದರು. ಅದೇ ಬಿಜೆಪಿಯಲ್ಲಿ ಸದಾನಂದ ಗೌಡ ಕರಡಿ ಸಂಗಣ್ಣ, ಇದೇ ರೀತಿಯಾಗಿ ಹಲವಾರು ಮಂದಿ ನಾಯಕರನ್ನು ಕಡೆಗಣಿಸಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುರುಬರ ಸಂಘದ ಪ್ರಮುಖರು ಹಲವಾರು ಮಂದಿ ಪಾಲ್ಗೊಂಡಿದ್ದರು.
