ಎಸ್. ಎಫ್. ಎಸ್ ಐಸಿಎಸ್ಇ ಶಾಲೆಯಲ್ಲಿ ಗ್ರ್ಯಾಜುಯೇಷನ್ ಡೇ ‘ ನೆನಪು’ ಕಾರ್ಯಕ್ರಮ
ಶಾಲೆಯಲ್ಲಿ ಗಳಿಸುವ ಜ್ಞಾನ ಬದುಕನ್ನು ನಿರ್ಧರಿಸುತ್ತದೆ – ಶೇಖರಗೌಡ ರಾಮತ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 08- ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಎರಡು ಅಂಕಗಳನ್ನು ಕಡಿಮೆ ತೆಗೆದುಕೊಂಡರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು , ಶಾಲೆಯಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳು ಅಂತಿಮವಲ್ಲ. ಅಂಕಗಳು ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ, ಶಾಲೆಯಲ್ಲಿ ಗಳಿಸುವ ಜ್ಞಾನ ಬದುಕನ್ನು ನಿರ್ಧರಿಸುತ್ತದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ಅವರು ಎಸ್. ಎಫ್. ಎಸ್ ಐಸಿಎಸ್ಇ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಗ್ರ್ಯಾಜುಯೇಷನ್ ಡೇ ‘ನೆನಪು’ (ಬಿಳ್ಕೊಡುವ ಸಮಾರಂಭ) ಉದ್ಘಾಟಿಸಿ ಮಾತನಾಡುತ್ತಿದ್ದರು.
ತಮ್ಮ ಮಕ್ಕಳ ಮುಂದಿನ ಗುರಿಯನ್ನು ಪಾಲಕರು ನಿರ್ಧರಿಸಬಾರದು, ಮಕ್ಕಳೇ ತಮ್ಮ ಭವಿಷ್ಯದ ಗುರಿಯನ್ನು ಇಟ್ಟುಕೊಳ್ಳಬೇಕು. ಮುಂದೆ ಗುರಿ ಹಿಂದೆ ಗುರು ಇರಬೇಕು. ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು. ಮಗು ಆಸಕ್ತಿಯಿಂದ ಕಲಿತು ಹಂತ ಹಂತವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತ ಅದು ಭವಿಷ್ಯದಲ್ಲಿ ದೇಶಕ್ಕೆ ದೊಡ್ಡ ಕೊಡುಗೆಯಾಗಬೇಕುಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಫಾದರ್. ಜಬಮಲೈ ರವರು ಮಾತನಾಡಿ ಮಕ್ಕಳು ಜೀವನದ ಮೌಲ್ಯಗಳೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ನಾನು ಬದಲಾಗಬೇಕು ಆಗ ನಮ್ಮ ಊರು, ದೇಶ ಬದಲಾಗುತ್ತದೆ. ಮಕ್ಕಳು ದೊಡ್ಡವರಾಗಿ ಮುಂದೆ ತಮ್ಮ ತಂದೆ ತಾಯಿಗಳಿಗೆ ನೀಡುವ ಪ್ರೀತಿ ಕಾಳಜಿನೇ ಅವರ ಕುಟುಂಬಕ್ಕೆ ಕೊಡುವ ದೊಡ್ಡ ಕೊಡುಗೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ದೀಪದಾನ ಮೂಲಕ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಮಕ್ಕಳಿಗೆ ಶುಭಾಶಿರ್ವಾದ ಕೊರಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಕೈಗೊಂಡರು ನಂತರ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಮಕ್ಕಳು ತಮ್ಮ ಹತ್ತು ವರ್ಷದ ಶಾಲಾ ಅನುಭವಗಳನ್ನು ಹಂಚಿಕೊಂಡರು. ಪಾಲಕರು ಸಿಬ್ಬಂದಿ ವರ್ಗದವರಿಗೆ ಗೌರವ ಕೃತಜ್ಞತಾ ಭಾವ ತೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜರ್ ಮ್ಯಾಥ್ಯೂ , ಫಾದರ್ ಜೋಜೋ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಪಾಲ್ಗೊಂಡಿದ್ದರು.ಕಾರ್ಯಕ್ರಮ ಹೃದಯ ಸ್ಪರ್ಶಿಯಾಗಿ ಮೂಡಿ ಬಂದಿತು.
