ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸೋಣ
ಗಾಲಿ ಅರುಣಾ ಲಕ್ಷ್ಮಿ
ಜನಾರ್ದನ್ ರೆಡ್ಡಿ ಕರೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,14- ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ ಶ್ರೀರಾಮುಲು ಅವರ ಗೆಲುವಿಗಾಗಿ ಐಕ್ಯತೆಯಿಂದ ಶ್ರಮಿಸೋಣ ಎಂದು ಶ್ರೀಮತಿ ಗಾಲಿ ಲಕ್ಷ್ಮ ಅರುಣಾ ಜನಾರ್ದನ್ ರೆಡ್ಡಿ ಅವರು ಕರೆ ನೀಡಿದರು. ಶನಿವಾರ ಸಂಜೆ ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಅನಿಲ್ ಕುಮಾರ್ ಮೋಕ ಅವರ ಅಧ್ಯಕ್ಷತೆಯಲ್ಲಿ ನಡೆದ ರೈತ ಮೋರ್ಚ ವಿಶೇಷ ಸಭೆಯಲ್ಲಿ ಶ್ರೀಮತಿ ಗಾಲಿ ಅರುಣಲಕ್ಷ್ಮಿ _ಜನಾರ್ದನರೆಡ್ಡಿ ಅವರು ಮಾತನಾಡುತ್ತಾ, ದೇಶದಲ್ಲಿ ಬಿಜೆಪಿ ಅಲೆ ಇದೆ ಎಂದು, ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ ಶ್ರೀರಾಮುಲು ಗೆಲುವಿಗಾಗಿ ಪ್ರತಿ ಒಬ್ಬರು ಶ್ರಮಿಸಬೇಕು ಎಂದು ಕರೆನೀಡಿದರು. ಇದೇ ಸಂದರ್ಭದಲ್ಲಿ ಚುನಾವಣೆ ಎದುರಿಸುವ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಮುಖ್ಯ ಅಧ್ಯಕ್ಷರಾದ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಮೋರ್ಚಾದ ಸಂಘಟನೆ ಹಾಗೂ ಚುನಾವಣಾ ಕಾರ್ಯತಂತ್ರದ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಮುಖ್ಯ ರಾಜ್ಯ ಉಪಾಧ್ಯಕ್ಷರಾದ ಗುರುಲಿಂಗನಗೌಡ, ಜಿಲ್ಲಾ ಅಧ್ಯಕ್ಷರಾದ ಐನಾಥ ರೆಡ್ಡಿ, ಮಾಜಿ ಅಧ್ಯಕ್ಷರಾದ ಮುರಹರಿ ಗೌಡ ವಿರುಪಾಕ್ಷಿ ಗೌಡ, ಪಕ್ಷದ ಮುಖಂಡರಾದ ದಮ್ಮುರು ಶೇಖರ್, ಮಲ್ಲಿಕಾರ್ಜುನ್ ಆಚಾರ್, ಶ್ರೀಮತಿ ಹಂಪಿ ರಮಣ, ಸುಮಾರೆಡ್ಡಿ ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
