
ಕರ್ನಾಟಕ ಮುಸ್ಲಿಂ ಸಂಘ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ರಾಜಾ ಹುಸೇನ್ ನೇಮಕ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ )ಜ.10 : ರಾಜಾ ಹುಸೇನ್ ತಂದೆ ಗಿರ್ನಿವಾಲೇ ಹುಸೇನ್, ಎಂ.ಜಿ.ನಗರ, ನಿವಾಸಿ ಹೊಸಪೇಟೆ ಪಟ್ಟಣ ಮತ್ತು ತಾಲೂಕು, ವಿಜಯನಗರ ಜಿಲ್ಲೆ ಇವರನ್ನು ಕರ್ನಾಟಕ ಮುಸ್ಲಿಂ ಸಂಘ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಿ ರಾಜ್ಯ ಕರ್ನಾಟಕ ಮುಸ್ಲಿಂ ಸಂಘ ರಾಜ್ಯಾಧ್ಯಕ್ಷರಾದ ಬಶೀರ್ ಅಹಮದ್ ಆದೇಶ ಹೊರಡಿಸಿದ್ದಾರೆ.
ಅವರು ರಾಜ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲಾ / ತಾಲೂಕು ಅಧ್ಯಕ್ಷರು ಮತ್ತು ಪಧಾಧಿಕಾರಿಗಳನ್ನು ನೇಮಿಸಿಕೊಂಡು, ರಾಜ್ಯಾಧ್ಯಂತ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕರ್ನಾಟಕ ಮುಸ್ಲಿಂ ಸಂಘಟನೆಯನ್ನು ಸಂಘಟಿಸಲು ಮತ್ತು ಸದಸ್ಯತ್ವ ಆಂದೋಲನ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ. ಯಾವುದೇ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗದೇ ಮುಸ್ಲಿಂ ಸಮಾಜದ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಮತ್ತು ಮುಸ್ಲಿಂ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಕೊಂಡು, ನಾಡು, ನುಡಿ, ಜಲ, ಗಡಿ ಸಮಸ್ಯೆಗಳಲ್ಲಿ ಕಾರ್ಯೋನ್ಮುಖರಾಗುವಂತೆ ಅವರಿಗೆ ಆದೇಶ ನೀಡ ಲಾಗಿದೆ.