ಕೂಸಿನ ಮನೆಗಳು ಗ್ರಾಮೀಣ ಪ್ರದೇಶದ ಮಕ್ಕಳ
ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ-ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ
ಕರುನಾಡ ಬೆಳಗು ಸುದ್ದಿ
ಕುಕನೂರ 10- ಕೂಸಿನ ಮನೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಸರ್ವಂಗೀಣ ಅಭಿವೃದ್ಧಿಗೆ ಸಹಕಾರಿ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ ಹೇಳಿದರು.
ತಾಲೂಕಿನ ಮಂಡಲಗೇರಿ ಗ್ರಾಮದ ಗ್ರಾಮ ಪಂಚಾಯತಿಯ ಕೂಸಿನ ಮನೆಯ ಪ್ರಾರಂಭೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅಧಿತಿಗಳಾಗಿ ಆಗಮಿಸಿದ ಸಹಾಯಕ ನಿರ್ದೇಶಕರಾದ ಶರಣಪ್ಪ ಕೆಳಗಿನಮನಿ, ಮಾತನಾಡಿ, ಕರ್ನಾಟಕ ಸರ್ಕಾರ ಕೂಸಿನ ಮನೆ ಎಂಬ ಹೊಸ ಯೋಜನೆಯನ್ನು 2023 ವರ್ಷದ ಆಯವ್ಯಯದಲ್ಲಿ ಘೋಷಿಸಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೂಲಿಕಾರರು, ತಮ್ಮ ಕೆಲಸದ ಅವಧಿಯಲ್ಲಿ ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡುವುದು ಒಂದು ಸವಾಲಿನ ಪ್ರಶ್ನೇಯೇ ಆಗಿತ್ತು, ಆದರೆ ಮುಂದುವರೆದ ಪಟ್ಟಣಗಳಲ್ಲಿ ದುಡಿಯುವ ಕೆಲಸಗಾರರು ತಮ್ಮ ಮಕ್ಕಳನ್ನು ದುಡ್ಡು ಕೊಟ್ಟು ಕ್ರಶ್ ಗೆ ಕಳಿಸುತ್ತಿದ್ದಾರೆ.
ಆದರೆ ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶ 3 ವರ್ಷದೊಳಗಿನ ಮಕ್ಕಳ ಲಾಲನೆ, ಪಾಲನೆ, ಪೋಷಣೆ ಮತ್ತು ಆರೋಗ್ಯದ ಹಿತದೃಷ್ಠಿಯಿಂದ ಕೂಸಿನ ಮನೆಗಳನ್ನು ಪ್ರತಿಯೋಂದು ಗ್ರಾಮ ಪಂಚಾಯತಿಗೆ ಒಂದರಂತೆ ಪ್ರಾರಂಭಿಸಿದೆ ಅದರಂತೆ ಕುಕನೂರು ತಾಲೂಕಿನ 15 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆಗಳನ್ನು ಪ್ರಾರಂಭಿಸಿದೆ. ಅಲ್ಲದೇ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿಕಾರರ ಮಕ್ಕಳಿಗೂ ಈ ಕೂಸಿನ ಮನೆಗಳು ಸಹಕಾರಿಯಾಗಲಿದೆ.
ತಾಲೂಕಿನಾಧ್ಯಂತ ಕಾರ್ಯನಿರ್ವಹಿಸುವ ಆರೈಕೆದಾರರಿಗೆ 7 ದಿನಗಳ ತರಬೇತಿ ಆಯೋಜನೆ ಮಾಡಲಾಗಿದೆ. ಅದರ ಭಾಗವಾಗಿ ತಾಲೂಕಿನ ಮಂಡಲಗೇರಿ ಗ್ರಾಮ ಪಂಚಾಯತಿಯ ಕೂಸಿನ ಮನೆಯಲ್ಲಿ ಆರೈಕೆದಾರರ ಕ್ಷೇತ್ರ ಭೇಟಿ ಮತ್ತು ತರಬೇತಿಯನ್ನು ಎಲ್ಲಾ ಆರೈಕೆದಾರರು ಪರಿಣಾಮಕಾರಿಯಾಗಿ ತರಬೇತಿ ಪಡೆದು ತಮ್ಮ ಕೂಸಿನ ಮನೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ದೇವಕ್ಕ ಯಮನೂರಪ್ಪ ಈಳಗೇರ,ಉಪಾಧ್ಯಕ್ಷರಾದ ಮಹೇಂದ್ರಕುಮಾರ ಗದಗ, ಸರ್ವ ಸದಸ್ಯರು, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ್ ಕಾವಳೆ, ತಾಲೂಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕರಾದ ಶ್ರೀಮತಿ ಜಯಲಕ್ಷಿ ಮೇಣಸಿನಕಾಯಿ, ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಮೋಬೈಲ್ ಕ್ರಶ್ ಸಂಸ್ಥೆಯ ರಾಜ್ಯ ತರಬೇತಿದಾರರಾದ ಶಶಿಧರಮ್, ಗ್ರಾಮ ಪಂಚಾಯತಿ ಸಿಬ್ಬಂದಿಗಳು, 15 ಗ್ರಾಮ ಪಂಚಾಯತಿಯ ಕೂಸಿನ ಮನೆ ಆರೈಕೆದಾರರು ಇತರರಿದ್ದರು.
