
ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ದಿನ ದಲಿತರಿಗೆ ಆರ್ಥಿಕ ಶಕ್ತಿಯ ತುಂಬುವ ಕೆಲಸ
ಶಾಸಕ ಕೆ, ರಾಘವೇಂದ್ರ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೨- ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಬಡವರಿಗೆ ದಿನ ದಲಿತರಿಗೆ ಆರ್ಥಿಕ ಶಕ್ತಿಯ ತುಂಬುವ ಕೆಲಸ ಮಾಡುತ್ತಿದೆ ಎಂದು ಶಾಸಕ ಕೆ, ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಕಲಕೇರಾ ಗ್ರಾಮ ಪಂಚಾಯತನ ನೂತನ ಕಟ್ಟ್ಡ ( ಭಾರತ್ ನಿರ್ಮಾಣ ಸೇವಾ ಕೇಂದ್ರ ) ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಬಡವರಿಗೆ, ಉಚಿತ ವಿಧ್ಯತ್ ,ಮಹಿಳೆಯರಿಗೆ ಉಚಿತ ಬಸ್ ಸಂಚಾರ ಸೇರಿದಂತೆ ಐದು ಯೋಜನೆಗಳನ್ನ ಬಡವರಿಗಾಗಿ ಕೊಡುತ್ತಿದ್ದು ಕಾಂಗ್ರೆಸ್ ಪಕ್ಷ ಎಂತಹ ಸಮಸ್ಯೆ ಬಂದರು ಸಹ ಗ್ಯಾರಂಟಿ ಯೋಜನೆಗಳನ್ನ ಮುಂದುವರೆಸುತ್ತೆ ಎಂದು ಭರವಸೆ ನೀಡಿದರು.
ಮಾರ್ಚ ನಂತರ ರಸ್ತೆ ಸೇರಿದಂತೆ ಇತರ ಯೋಜನೆಗಳಿಗೆ ಸರ್ಕಾರ ಅನುದಾನ ನೀಡಲಿದ್ದು ಬಡವರಿಗಾಗಿ ಸಹಕರಿಸುವಂತೆ ಮನವಿ ಮಾಡಿದರು, ಕಲಕೇರಿ ಗ್ರಾಮ ಸೇರಿದಂತೆ ನಾಲ್ಕು ನೂತನ ಪಂಚಾಯತಿ ಕಟ್ಟಡ ನಿರ್ಮಾಣ ವಾಗಿದ್ದು ಕ್ಷೇತ್ರದ ಎಲ್ಲಾ ಹೊಸ ಪಂಚಾಯತಿಗಳಿಗೆ ಕಟ್ಟಡ ನೀರ್ಮಿಸಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ರಾಮಣ್ಣ ಜೌಡ್ಕಿ ಮಾತನಾಡಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆ ಯಾಗಿದೆ ಜನ ಪ್ರತಿನಿದಿಗಳು ಜನಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿ ಅಧಿಕಾರ ಶಾಶ್ವತವಲ್ಲವೇಂದು ಹೇಳಿದರು. ನಮ್ಮ ಭಾಗದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಜಿ,ಪಂ ಮಾಜಿ ಸದಸ್ಯ ಪ್ರಸನ್ನ ಗಡಾದ ಮಾತನಾಡಿ ಶಾಸಕ ಹಿಟ್ನಾಳ ಅವರು ಗ್ರಮಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡುತ್ತಾ ಮೂರುಭಾರಿ ಶಾಸಕರಾಗಿದ್ದು ಬರುವದಿನಗಳಲ್ಲಿ ಅಗತ್ಯ ಯೋಜನೆ ನೀಡುವರು ಎಂದು ಹೇಳಿದರು.
ಪೂಜೆ : ಈ ಸಂದರ್ಭದಲ್ಲಿ ಕಲಿಕೇರಿ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಸಿ,ಸಿ ರಸ್ತೆಗೆ ಭೂಮಿಪೂಜೆ ನೇರವೆರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ,ಪಂ ಅಧ್ಯಕೆ ಲಕ್ಷ್ಮವ್ವ ಈರಪ್ಪ ಲಮಾಣಿ ವಹಿಸಿದ್ದರು ಈ ಸಂದರ್ಭದಲ್ಲಿ ಶಿವಕುಮಾರ ಚರಾರಿ, ಗ್ರಾ,ಪಂ ಉಪಾಧ್ಯಕ್ಷೆ ಮರಿಯವ್ವ ಲಮಾಣಿ, ಸದಸ್ಯರಾದ ಯಂಕವ್ವ ತಿಪ್ಪಣ್ಣ ನವರ, ಭರಮಪ್ಪ ಮುದ್ದಾಬಳ್ಳಿ, ಜಗದೀಶ ಕುದರಿಮೋತಿ, ಯಲ್ಲವ್ವ ಗಂಟಿ ಇತರರು ಇದ್ದರು.