WhatsApp Image 2024-01-22 at 1.53.28 PM

ಸ್ವಚ್ಛತೆ ಮತ್ತು ಸುರಕ್ಷತೆಯಿಂದ  ಅಡುಗೆದಾರರು ಕೆಲಸ ನಿರ್ವಹಿಸಬೇಕು : ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ. ಕಳ್ಳಿ

 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 22 -ಸ್ವಚ್ಛತೆ ಮತ್ತು ಸುರಕ್ಷಿತಯಿಂದ ಅಚ್ಚುಕಟ್ಟಾಗಿ ಅಡುಗೆಯನ್ನು ಶುಚಿ. ರುಚಿಯಾಗಿ ಮಾಡುವದರ ಜೊತೆಗೆ ಅಡುಗೆದಾರರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಅಕ್ಷರ ದಾಸೋಹ ಅಧಿಕಾರಿ ಎಫ್. ಎಂ. ಕಳ್ಳಿ. ಹೇಳಿದರು. ಹೋಬಳಿ ಮಟ್ಟದ ಅಕ್ಷರ ದಾಸೋಹ ಅಡುಗೆದಾರರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಯಲಬುರ್ಗಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಅವರು ಅಕ್ಷರ ದಾಸೋಹ ಕಾರ್ಯಕ್ರಮ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು ಎಲ್ಲಾ ಅಡುಗೆದಾರರು ಸ್ವಚ್ಛತೆ ಹಾಗೂ ಸುರಕ್ಷತೆಯಿಂದ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದರು. ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಬಿಸಿ ಹಾಲು ಮತ್ತು ವಾರದ ಎಲ್ಲಾ ಶಾಲಾ ದಿನಗಳಂದು ಬಿಸಿಯೂಟ ವಿತರಿಸಲಾಗುತ್ತದೆ. ಇದರೊಂದಿಗೆ 2023-24ನೇ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ 80 ದಿನಗಳಿಗೆ ಪೂರಕ ಪೌಷ್ಠಿಕ ಆಹಾರ ಮೊಟ್ಟೆ, ಮೊಟ್ಟೆ ತಿನ್ನದೇ ಇರುವ ಮಕ್ಕಳಿಗೆ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತದೆ.
ಶಾಲಾ ಹಂತದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ ಹಾಗೂ ಸುರಕ್ಷತೆಯಿಂದ ಕೆಲಸ ನಿರ್ವಹಿಸಬೇಕು. ಮಕ್ಕಳಿಗೆ ಸಾಲಾಗಿ ಕುಳ್ಳಿರಿಸಿ ಪಂಕ್ತಿ ಭೋಜನ ವ್ಯವಸ್ಥೆ ಮಾಡಬೇಕು ಎಂದರು. ಪ್ರತಿ ದಿನ ಅಡುಗೆ ಸಿದ್ಧಪಡಿಸಿದ ನಂತರ ಇಬ್ಬರು ಶಿಕ್ಷಕರು ಕಡ್ಡಾಯವಾಗಿ ರುಚಿ ನೋಡಿ ದೃಢೀಕರಣ ಮಾಡಬೇಕು ಮತ್ತು ಒಬ್ಬರು SDMCಯವರು ರುಚಿ ನೋಡಿ ದೃಢೀಕರಣ ಮಾಡಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರುಗಪ್ಪ ಹೆಚ್ ಮುಖ್ಯೋಪಾಧ್ಯಾಯರು ವಹಿಸಿದ್ದರು.
ವೀರಪ್ಪ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನದಲ್ಲಿ ಶಾಲಾ ಹಂತದಲ್ಲಿ ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು, ಎಸ್.ಡಿ.ಎಮ್.ಸಿ ಹಾಗೂ ಅಡುಗೆದಾರರು ಸಮನ್ವಯದಿಂದ ಕೆಲಸ ನಿರ್ವಹಿಸಿದಾಗ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾದ್ಯ ಎಂದರು.
ಕುಕನೂರು ಅಗ್ನಿ ಶಾಮಕ ಠಾಣೆಯ ಅಧಿಕಾರಿಗಳಾದ ಜಗದೀಶ್ ಹಾಗೂ ಬಸಲಿಂಗಪ್ಪ ಅಗ್ನಿನಂದಕವನ್ನು ಬಳಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಶ್ರೀ ಬಸವಲಿಂಗೇಶ್ವರ ಇಂಡೇನ್ ಗ್ಯಾಸ್ ನ ಶ್ರೀ ಸಂಗಮೇಶ ಗ್ಯಾಸ್ ಸ್ಟವ್ ಬಳಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಆರೋಗ್ಯ ಇಲಾಖೆಯ ಡಾಕ್ಟರ್ ಭರತೇಶ ಅಡುಗೆದಾರರ ವೈಯಕ್ತಿಕ ಸ್ವಚ್ಛತೆ, ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಯ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಶ್ರೀ ವೀರಪ್ಪ ಗಾಣಿಗೇರ ಸಿ.ಆರ್.ಪಿ ಶ್ರೀ ಮಂಜುನಾಥಯ್ಯ ಸಿ.ಆರ್.ಪಿ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಅಡುಗೆದಾರರಿಗೆ ಅಡುಗೆ ತಯಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಡುಗೆದಾರರಾದ ಶ್ರೀಮತಿ ಅನಸೂಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಮ್ಮರಗುದ್ದಿ ಪ್ರಥಮ ಸ್ಥಾನ ಪಡೆದರು. ಶ್ರೀಮತಿ ಶಾಂತಮ್ಮ ಸರ್ಕಾರಿ ಪದವಿಪೂರ್ವ ಕಾಲೇಜು ಯಲಬುರ್ಗಾ ದ್ವಿತೀಯ ಸ್ಥಾನ ಪಡೆದರು. ಶಾರದಾ ಮಡಿವಾಳರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಮುಡಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನಗಳನ್ನು ನೀಡುವ ಪ್ರಾಯೋಜಕತ್ವವನ್ನು ಶ್ರೀ ಹುಚ್ಚೀರಪ್ಪ ಬೆಟಗೇರಿ ಪ್ರಭಾರಿ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಮ್ಮರಗುದ್ದಿ ಇವರು ನೀಡಿದ್ದಾರೆ.ಶಶಿಕಲಾ ಪ್ರಾರ್ಥಿಸಿದರು. ಶಿವನಗೌಡ ಪಾಟೀಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಯಮ್ಮ, ರೇಣುಕಾ ಬಸವರಾಜ ಕರಕನಗೌಡ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!