
ರಕ್ತದಾನ ದಿಂದ ದೈಹಿಕ ಆರೋಗ್ಯ- ಡಿ ಎಂ ಸುನಿಲ್ ಹೈದ್ರಿ
ಕರುನಾಡ ಬೆಳಗು ಸುದ್ದಿ
ಕುಕನೂರ17- ರಕ್ತದಾನ ಮಾಡುವುದರಿಂದ ನಿಮ್ಮ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಕುಕನೂರ ಡಿಪೋ ಮ್ಯಾನೇಜರ್ ಸುನಿಲ್ ಹೈದ್ರಿ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲಾ ಎಡ್ಸ್ ತಡಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗ ಕುಕನೂರು ಘಟಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಹಾಗೂ ತಾಲೂಕು ಘಟಕ ಯಲಬುರ್ಗಾ ಸಂಸ್ಥೆಯ ಸಂಘ ಸಂಸ್ಥೆಗಳ ಸಂಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕುಕನೂರು ಪಟ್ಟಣ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಕುಕನೂರು ಘಟಕದ ಡಿಪೋ ಮ್ಯಾನೇಜರ್ ಸುನಿಲ್ ಹೈದ್ರಿ ಮಾತನಾಡಿ, ರಕ್ತದಾನ ಮಾಡುವುದರಿಂದ ನಿಮ್ಮ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.
ಮಾನಸಿಕ ಆರೋಗ್ಯ ಪ್ರತಿಷ್ಠಾನದ ವರದಿ ಪ್ರಕರ, ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ರಕ್ತ ಒತ್ತಡ ಕಡಿಮೆ ಆಗುತ್ತದೆ, ಭಾವನಾತ್ಮಕ ಆರೋಗ್ಯ ಸುಧಾರಣೆಯಾಗುತ್ತದೆ ನಕರಾತ್ಮಕ ಭಾವನೆಗಳನ್ನು ತೊಡೆದು ಹಾಕಲು ಸಹಾಯಮಾಡುತ್ತದೆ. ಪ್ರತ್ಯೇಕತೆಯನ್ನು ಕಡಿಮೆ ಮಾಡುತ್ತದೆ ಇಷ್ಟು ಮಾತ್ರವಲ್ಲ ರಕ್ತದಾನದಿಂದ ನಿರ್ದಿಷ್ಟವಾಗಿ ಸಿಗುವ ಅನೇಕ ಆರೋಗ್ಯ ಪ್ರಯೋಜನಗಳು ಇವೆ ರಕ್ತದಾನ ಮಾಡಿ ಮೂರು ಜೀವ ಉಳಿಸಿ ಎಂದು ಅವರು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಇಲಾಖೆಯ ದೇವೇಂದ್ರಪ್ಪ ಮಾತನಾಡಿ, 18 ಜನ ರಕ್ತದಾನವನ್ನು ಮಾಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಕನೂರು ಘಟಕದ ಸಿಬ್ಬಂದಿಗಳು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕೊಪ್ಪಳ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು