d1a68c5b-cb49-429b-bafc-1584f34bdd44

                          ಕನ್ನಡವನ್ನು ಕನ್ನಡಿಗರಾಗಿ ಪ್ರೀತಿಸೋಣ  :ಡಾ. ಶ್ರೀನಿವಾಸ ಹ್ಯಾಟಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೭- ಕನ್ನಡ ನಮ್ಮ ತಾಯಿ ಭಾಷೆ, ಅದನ್ನು ಪ್ರೀತಿಸೋಣ ಆರಾಧಿಸೋಣ ಎಂದು ಡಾ. ಶ್ರೀನಿವಾಸ ಹ್ಯಾಟಿ ಅವರು ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಸೇಂಟ್ ಪಾಲ್ಸ್ ಮಹಾ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕಾ ಘಟಕ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಬಿ ಸಿ ಪಾಟೀಲ್ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕನ್ನಡವನ್ನು ಕನ್ನಡಿಗರಾಗಿ ಪ್ರೀತಿಸೋಣ ಎಂದರು.

ಬಿ ಸಿ ಪಾಟೀಲ್ ಅವರು ಇತಿಹಾಸ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಬಿ ಸಿ ಪಾಟೀಲ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸಕರಾಗಿ ಡಾ ಸಿದ್ಲಿಂಗಪ್ಪ ಕೊಟ್ನೇಕಲ್ ಮಾತನಾಡುತ್ತಾ ಕೊಪ್ಪಳ ಜಿಲ್ಲಾ ಸಂಶೋಧನಾ ಕ್ಷೇತ್ರದಲ್ಲಿ ಪಾಟೀಲ್ ಅವರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಲವೇ ಕೆಲವು ಶಾಸ್ತ್ರೀಯ ಭಾಷೆಯಲ್ಲಿ ನಮ್ಮ ಕನ್ನಡ ಭಾಷೆಯೂ ಒಂದು. ಸಾವಿರಾರು ವರ್ಷಗಳ ಇತಿಹಾಸವಿದೆ. ಹಲವಾರು ಕ್ಷೇತ್ರಗಳಲ್ಲಿ ಕನ್ನಡ ಸಾಧನೆಗೆ ಮೊದಲಾಗಿದೆ ಎಂದು ಅಜಿತ್ ಕುಮಾರ್ ಪೂಜಾರ ಹೇಳಿದರು. ಅವರು ಕರ್ನಾಟಕ ಸುವರ್ಣ ಸಂಭ್ರಮ ೫೦ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು ಕನ್ನಡಕ್ಕೆ ತನ್ನದೇ ಆದ ಗತ್ತು ತಾಕತ್ತು ಇದೆ ಎಂದು ಹೆಮ್ಮೆಯಿಂದ ಹೇಳಿದರು
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಶರಣೇಗೌಡ ಪಾಟೀಲ್ ಮಾತನಾಡಿ ಕಸಾಪ ಇತಿಹಾಸ ಕನ್ನಡ ನಾಡಿಗೆ ಅಮೂಲ್ಯ ಸೇವೆ ಮಾಡುತ್ತಾ ಬಂದಿದೆ. ಕನ್ನಡಾಭಿಮಾನಿಗಳ ಸಹಕಾರದಿಂದ ಈ ಕೆಲಸ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಅರಿಯೋಣ ಕನ್ನಡ ಬೆಳೆಸೋಣ ವಿಷಯ ಕುರಿತು ಏರ್ಪಡಿಸಿದ್ದ ಪರೀಕ್ಷಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಸನ್ಮಾನಿಸಲಾಯಿತು.ಅಕ್ಬರ್ ಸಿ ಕಾಲಿಮಿರ್ಚಿ, ಮಂಜುನಾಥ ಅಂಗಡಿ, ಶೇಖರಗೌಡ, ಬಸವರಾಜ ಸಂಕನಗೌಡರ್ ಆರ್ ಬಿ ಪಾಟೀಲ್ ರಮೇಶ್ ತುಪ್ಪದ ಶರಣು ಡೊಳ್ಳಿನ ಡಾ.ಮಹಾಂತೇಶ ಮಲ್ಲನಗೌಡರ, ಅವಿನಾಶ್ ಪಾಟೀಲ್, ಶಾಂತೇಗೌಡ ಪಾಟೀಲ್, ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಬಸವರಾಜ ಶಿರಗುಂಪ್ಪಿ ಶೆಟ್ಟರ್, ಕಾರ್ಯಕ್ರಮ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ ಹ್ಯಾಟಿ ಮಾತನಾಡಿದರೆ ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಅವರು ಸ್ವಾಗತಿಸಿದರು

Leave a Reply

Your email address will not be published. Required fields are marked *

error: Content is protected !!