
ಮೈಲಾಪುರ್ ಕ್ಯಾಂಪ್ ಕುಡಿಯುವ ನೀರಿನ ಕೆರೆಯ ಪಾಚಿ ತೆಗೆದು ಸ್ವಚ್ಛತಾ ಕಾರ್ಯ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 24- ತಾಲೂಕು ಬಲಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲಾಪುರ ಗ್ರಾಮದಲ್ಲಿರುವ ಕುಡಿಯುವ ನೀರಿನ ಕೆರೆಯ ಪಾಚಿಯನ್ನು ಕಾರ್ಮಿಕರು ಕುಡಿಯುವ ನೀರಿನ ಕೆರೆಯಲ್ಲಿ ಪಾಚಿ ತೆಗೆದು ಕಾರ್ಮಿಕರು ಸ್ವಚ್ಛತಾ ಕಾರ್ಯ ಗೊಳಿಸಿದರು ಮೈಲಾಪುರ್ ಗ್ರಾಮದಲ್ಲಿ ಸುಮಾರು 100 ಮನೆಗಳನ್ನು ಹೊಂದಿರುವ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೆರೆ ನಿರ್ಮಿಸಲಾಗಿದೆ.
ಕೆರೆಯಲ್ಲಿ ಸಂಗ್ರಹವಾಗುವ ನೀರು ಮೂರು ತಿಂಗಳವರೆಗೆ ಬಳಸಬಹುದು ಮಾರ್ಚ್ ನಲ್ಲಿ ಕಾಲುವೆಗೆ ನೀರು ಬಿಟ್ಟ ಸಂದರ್ಭದಲ್ಲಿ ಕೆರೆ ತುಂಬಿಸಲಾಗಿತ್ತು ಆದರೆ ಹಸಿರು ಪಾಚಿಗಟ್ಟಿದ್ದರಿಂದ ಗ್ರಾಮಸ್ಥರು ನೀರನ್ನು ಬಳಕೆ ಮಾಡದೆ ಬಲಕುಂದಿ ಗ್ರಾಮಕ್ಕೆ ತೆರಳಿ ಶುದ್ಧ ನೀರನ್ನು ತಂದುಕೊಳ್ಳುವಂತಾಗಿತ್ತು ಹೀಗಾಗಿ ಪಾಚಿ ತೆಗೆಯಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದರಿಂದ ಗ್ರಾಮ ಪಂಚಾಯತ್ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ ಮೈಲಾಪುರ್ ಕ್ಯಾಂಪ್ ನಲ್ಲಿರುವ ಕೆರೆಯ ನೀರು ಪಾಚಿಗಟ್ಟಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದರು ತಕ್ಷಣವೇ ಕೆರೆಯಲ್ಲಿ ಸಂಗ್ರಹವಾಗಿರುವ ಪಾಚಿ ತೆಗೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಪಿಡಿಒ ಈರಪ್ಪ ಅವರು ತಿಳಿಸಿದರು.