

‰
ದೇವದಾಸಿ ಮಹಿಳೆಯರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ಉಚಿತ ಆರೋಗ್ಯ ಶಿಬಿರ ಯಶಸ್ವಿ
ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಕೊಪ್ಪಳ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕುಷ್ಟಗಿ ವಕೀಲರ ಸಂಘ ಕುಷ್ಟಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ ಕಂದಾಯ ಇಲಾಖೆ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳು (ಯೋಜನೆ 2010) ಮಾಜಿ ದೇವದಾಸಿ ಮಹಿಳೆಯರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ಉಚಿತ ಆರೋಗ್ಯ ಶಿಬಿರ ದಿನಾಂಕ ಗುರುವಾರ ರಂದು ಕುಷ್ಟಗಿ ನಗರದ ವೀರಮಹೇಶ್ವರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಎಂ ಎಲ್ ಪೂಜೇರಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಕುಷ್ಟಗಿ ಇವರು ಉದ್ಘಾಟಿಸಿ ಮಾತನಾಡಿ ಕಾನೂನು ಸೇವೆಗಳ ಪ್ರಾಧಿಕಾರದ ದ್ಯೆಯೂದ್ದೇಶಗಳ ಬಗ್ಗೆ ತಿಳಿಸಿದರು ಹಾಗೂ ಮಹಾಂತೇಶ ಚೌಳಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಉಪಸ್ಥಿತರಿದ್ದರು.
ಪೂರ್ಣಿಮಾ ಯೋಳಬಾವಿ ಯೋಜನಾಧಿಕಾರಿಗಳು ದೇವದಾಸಿ ಪುನರ್ ವಸತಿ ಯೋಜನೆ, ಮಾಜಿ ದೇವದಾಸಿ ತಾಯಂದಿರಿಗೆ ಸರಕಾರದಿಂದ ಮಾಸಿಕ 1500 ಕೊಡುತ್ತದೆ ಹಾಗೂ ವಸತಿ ಸೌಲಭ್ಯ ಸಾಲ ಸೌಲಭ್ಯ ತಗೊಂಡು ಎಲ್ಲಾ ಮಹಿಳೆಯರಂತೆ ಮುಖ್ಯ ವಾಹಿನಿಗೆ ಬರಲು ಸಲಹೆ ನೀಡಿ ದೇವದಾಸಿ ಅನಿಷ್ಟ ಪದ್ಧತಿ ಎಲ್ಲಾದರು ಕಂಡು ಬಂದಲ್ಲಿ ತಕ್ಷಣವೇ ನಮ್ಮ ಇಲಾಖೆಯ ಸಿಬ್ಬಂದಿಗಳಿಗಾಗಲಿ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಲು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ತಾಯಂದಿರಿಗೂ ತಿಳಿಸಿದರು.
ಡಾ.ಕೆ ಎಸ್ ರೆಡ್ಡಿ ವೈದ್ಯಾಧಿಕಾರಿಗಳು ಕುಷ್ಟಗಿ ಮಾತನಾಡಿ ಆರೋಗ್ಯ ತಪಾಸಣೆ ಕುರಿತು ಯಾವುದೇ ಕಾಯಿಲೆಗಳಿರಲಿ ನಾಚಿಕೆ ಪಡದೆ ಸಂಕೋಚ ಪಡದೆ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ರೋಗಗಳನ್ನು ಗುಣಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ದೇವದಾಸಿ ತಾಯಂದಿರು ಕಾರ್ಯ ನಿರ್ವಹಿಸ್ತಿದ್ದು ಅವರನ್ನು ನಾವು ತುಂಬಾ ಗೌರವದಿಂದ ನೋಡುತ್ತಿದ್ದೇವೆ ಅವರು ನಮ್ಮ ಆಸ್ಪತ್ರೆಯಲ್ಲಿ ಮಾಡುವ ಕೆಲಸ ತುಂಬಾ ಶ್ಲಾಘನೀಯ. ಇಂದು ಸುಮಾರು 250 ಜನ ಮಾಜಿ ದೇವದಾಸಿ ತಾಯಂದಿರಿಗೆ ಆರೋಗ್ಯ ತಪಾಸಣಾ ಮಾಡಿಸಲಾಯಿತು. ಐಸಿಟಿಸಿ, ಬಿಪಿ ಸುಗರ್ ಜನರಲ್ ಚೆಕಪ್ ಇಂತಹ ಕಾರ್ಯಕ್ರಮ ಎಲ್ಲಾ ತಾಲೂಕು ಮಟ್ಟ ಜಿಲ್ಲಾ ಮಟ್ಟದಲ್ಲಿ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.
ಇದೇ ವೇಳೆ ಎಸ್ಎಸ್ಎಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಕುಮಾರಿ ರಾಜೇಶ್ವರಿ ಗುಡ್ದೂರು, ಕುಮಾರಿ ಶರಣಮ್ಮ ಕಾಟಾಪುರ ಮತ್ತು ಶಿವಕುಮಾರ್ ಗುಡ್ದೂರು ಮಾಜಿ ದೇವದಾಸಿ ತಾಯಿಂದರ ಮಕ್ಕಳಿಗೆ ನ್ಯಾಯಾಧೀಶರ ಮುಖಾಂತರ ಹಾಗೂ ವೇದಿಕೆ ಮೇಲಿರುವ ಎಲ್ಲಾ ಗಣ್ಯಮಾನ್ಯರು ಸೇರಿ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ಎಲ್ಲಮ್ಮ ಹಂಡಿ ಯೋಜನಾಧಿಕಾರಿಗಳು ವಹಿಸಿದ್ದರು. ಕೊಪ್ಪಳ ರೇಣುಕಾ ಎಂ ಮಠದ್ ಯಜಮಾನಾಧಿಕಾರಿಗಳು ಯಲಬುರ್ಗಾ, ಸಕ್ಕುಬಾಯಿ ಯೋಜನಾ ಅನುಷ್ಠಾನಾಧಿಕಾರಿಗಳು ಕನಕಗಿರಿ, ಮುಖ್ಯ ಅತಿಥಿಗಳಾಗಿ ವಿಜಯ ಮಹಾಂತೇಶ ಕೆ ಕುಷ್ಟಗಿ ವಕೀಲ ಸಂಘದ ಅಧ್ಯಕ್ಷರು, ಬಾಲಚಂದ್ರ ಸಂಗನಾಳ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಸತೀಶ್ ಸಿರಸ್ತದಾರರು, ಪರಸಪ್ಪ ಎನ್ ಗುಜಮಾಗಡಿ, ಮಾನಪ್ಪ ಪಿಎಸ್ಐ ಕ್ರೈಂ ಬ್ರಾಂಚ್ ಶಿವಕುಮಾರ್ ದೊಡ್ಮನಿ ಬಸವರಾಜ್ ಲಿಂಗಸೂರು, ಮೈನುದ್ದೀನ್, ಚಂದಾಲಿಂಗ ಕಲಾಲಬಂಡಿ ವಿಮಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ ಅತಿಥಿ ಉಪನ್ಯಾಸಕರಾಗಿ ನಾಗರಾಜ್ ಕೆ ಮೈತ್ರಿ ಪ್ಯಾನಲ್ಲು ಬಸವರಾಜ್ ಸಾರಥಿ ವಕೀಲರು, ಮಾಜಿ ದೇವದಾಸಿ ತಾಯಂದಿರು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು
ಕಾರ್ಯಕ್ರಮ ನಿರೂಪಣೆ ವೆಂಕಟೇಶ್ ಹೊಸಮನಿ ಕಲಾವಿದರು ನೆರವೇರಿಸಿದರು. ದಾದೇಸಾಹೇಬ ಹಿರೇಮನಿ ಯೋಜನಾ ಅನುಷ್ಠಾನಾಧಿಕಾರಿಗಳು ಕಾರ್ಯಕ್ರಮ ಸ್ವಾಗತ ಮಾಡಿದರು, ಮರಿಯಪ್ಪ ಮುಳ್ಳೂರು ಯೋಜನಾ ಅನುಷ್ಠಾನಾಧಿಕಾರಿಗಳು ಕುಷ್ಟಗಿ ಕಾರ್ಯಕ್ರಮ ವಂದನಾರ್ಪಣೆ ಮಾಡಿದರು.