ನಿಡಶೇಸಿ : ಮೊರಾರ್ಜಿ ದೇಸಾಯಿ ಶಾಲಾ ಸಂಸತ್ತು ರಚನೆ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 4- ತಾಲೂಕಿನ ನಿಡಶೇಸಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚುನಾವಣೆಯ ಮಾದರಿಯಲ್ಲಿಯೆ ಮೊಬೈಲ್ ಇವಿಎಮ್ ಮೂಲಕ ಶಾಲಾ ಸಂಸತ್ ರಚನೆ ಮಾಡಲಾಯಿತು.
ರಾಷ್ಟ್ರಪತಿಯಾಗಿ ಅಭಿಷೇಕ ಆಯ್ಕೆಯಾದರು, ಪ್ರಧಾನಮಂತ್ರಿಯಾಗಿ ಅರುಣ ಕುಮಾರ, ಮಹಿಳಾ ಪ್ರಧಾನಿಯಾಗಿ ಸ್ವಪ್ನಾ, ಆರೋಗ್ಯ ಮಂತ್ರಿಗಳಾಗಿ ಸುಚಿತ್ರಾ, ಉಮೇಶ, ಪ್ರವಾಸೋಧ್ಯಮ ಮಂತ್ರಿಗಳಾಗಿ ಶೃತಿ ಹಾಗೂ ಬಸವರಾಜ, ಕ್ರೀಡಾ ಮಂತ್ರಿಗಳಾಗಿ ರಕ್ಷಿತಾ ಹಾಗೂ ಪ್ರವೀಣ ರೆಡ್ಡಿ, ವಸತಿ ಮತ್ತು ಆಹಾರ ಮಂತ್ರಿಗಳಾಗಿ ಚೇತನಾ ಹಾಗೂ ನರಸಿಂಹ, ಶಿಕ್ಷಣ ಮಂತ್ರಿಯಾಗಿ ಸುವರ್ಣಾ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ಸ್ನೇಹಾ, ಹಾಗೂ ಬಸವರಾಜ, ಸಾಂಸ್ಕೃತೀಕ ಮಂತ್ರಿಗಳಾಗಿ ಲಕ್ಷ್ಮೀ ಎಲ್, ಯಲ್ಲಪ್ಪ, ಶಿವಲೀಲಾ, ಶಿಸ್ತು ಸ್ವಚ್ಚತೆ ಮತ್ತು ಪರಿಸರ ಮಂತ್ರಗಳಾಗಿ ಲಕ್ಷ್ಮೀ ಎಚ್, ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಇತರರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಚಾರ್ಯ ಕೆ ಬಿ ಮುಕರ್ತಿನಾಳ, ನಿಲಯಪಾಲಕ ತೊಂಡೆಪ್ಪಗೌಡ,ಸಿಬ್ಬಂದಿಗಳಾದ ಪಾಲಾಕ್ಷಯ್ಯ, ವಿದ್ಯಾಶ್ರೀ, ವಿಜಯಕುಮಾರ, ಸೇರಿದಂತೆ ಅನೇಕರು ಇದ್ದರು. ಆಯ್ಕೆಯಾದ ನಂತರ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
