
ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು
ಕರುನಾಡ ಬೆಳಗು ಸುದ್ದಿ
ಹೊಸಪೇಟೆ,19- ಕರ್ನಾಟಕ ಪ್ರಾಂತ ರೈತ ಸಂಘ (KPRS)ದಿಂದ
ಬರಗಾಲ, ಭೂಸ್ವಾಧೀನ , ತಾಲೂಕು ಕಛೇರಿಯಲ್ಲಿ ಬಾಕಿ ಉಳಿದ ಸಮರ್ಪಕ ವರದಿ ಕಡತಪರಿಹಾರಕ್ಕೆ ಆಗ್ರಹಿಸಿ ಮತ್ತು ಕೆಲವು ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಹೊಸಪೇಟೆಯ ತಾಲೂಕು ಕಚೇರಿಯ ಮುಂಭಾಗ ಅಹೋರಾತ್ರಿ ಧರಣಿ ನಡೆಸಿ ತಹಸಿಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಜಿಲ್ಲಾ ಸಂಚಾಲಕರಾದ ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿ ರಾಜ್ಯದ ಎಲ್ಲಾ ಕಡೆ ಬರಗಾಲ ಆವರಿಸಿದೆ ಜೂನ್ ನಲ್ಲಿ ಬಹಳ ವಿಳಂಬವಾಗಿ ಪ್ರಾರಂಭ ವಾದ ಮುಂಗಾರು ಜುಲೈ ಮಧ್ಯ ಬಾಗದಿಂದ ಇಲ್ಲಿಯವರೆಗೆ ಸತತ ಎರಡು ತಿಂಗಳಗಳ ಕಾಲ ಮಳೆ ಬಾರದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾನೆ ಹಾಗೂ ಗ್ರಾಮೀಣ ಜನತೆ ಕೂಡ ವಿಪರೀತ ಕಷ್ಟ ಅನುಭವಿಸುತ್ತಿದ್ದಾರೆ.
ಏಕಕಾಲದಲ್ಲಿ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶ ಹೀಗೆ ಎಲ್ಲಾ ಕಡೆ ಬರಗಾಲ ಆವರಿಸಿದೆ. ರಾಜ್ಯದ ಅಣೆಕಟ್ಟು ಗಳಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇದ್ದು ನದಿ ನೀರಿನ ಬಳಕೆ ಸಂಬಂಧ ಆತಂಕಗಳು ಉಂಟಾಗಿವೆ.
ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು , ಇಡೀ ರಾಜ್ಯವನ್ನು ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಿ ಸಮರೋಪಾದಿಯಲ್ಲಿ ಬರಗಾಲ ಪರಿಹಾರ ಹಮ್ಮಿಕೊಳ್ಳಲು ಮೀನಾಮೇಷ ಎಣಿಸುತ್ತಿವೆ.
2 ವರ್ಷದ ಹಿಂದೆ ಹೊಸಪೇಟೆ ತಾಲೂಕಿನ ಪಾಪಿನಾಯಕನ ಹಳ್ಳಿ ಏತನೀರಾವರಿ ಯೋಜನೆಗೆ ಗಾದಿಗನೂರು, ಕೊಟಗಿನಾಳ ಗ್ರಾಮದ ಬಡರೈತರ ಜಮೀನುಗಳನ್ನು ಸ್ವಾಧೀನ ಆಕ್ಟ್ 1894 ಕಲಂ28ಎ 2013 ರ ನಡುವಳಿಯಂತೆ ಆದೇಶ ಹೊರಡಿಸದೆ ನೀರಾವರಿ ಇಲಾಖೆ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ದಿನಾಂಕ 03-01-2024 ರಂದು ಸಹಾಯಕ ಆಯುಕ್ತರಗೆ ಮನವಿ ಕೊಡಲಾಗಿತ್ತು ರೈತರ ಸಭೆ ನಡೆಸಿ ಮಾಹಿತಿ ಪಡೆದು ಯಾವುದೇ ಪ್ರಕ್ರಿಯೆ ನಡೆಯದೇ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ. ಆದ್ದರಿಂದ ಕೂಡಲೇ ಹೈ ಕೋರ್ಟ್ ತೀರ್ಪಿನ ಪ್ರಕಾರ ನ್ಯಾಯಬದ್ದ ಪರಿಹಾರ ಸಿಗುವಂತೆ ಕ್ರಮವಹಿಸಬೇಕು.ಮತ್ತು ವಿವಿಧ ಕಾಯ್ದೆಗಳ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ದಿನಾಂಕ 1-7-2023 ರಂದು ಉಸ್ತುವಾರಿ ಸಚಿವರಿಗೆ ನೀಡಲಾದ ಮನವಿ ಪತ್ರದ ಮೇಲೆ ಜಿಲ್ಲಾ ಕಛೇರಿಯಿಂದ ವರದಿ ಸಿದ್ಧಪಡಿಸಲು ದಿನಾಂಕ 28-12-2023 ರಂದು ತಹಶೀಲ್ದಾರರ ಕಛೇರಿಗೆ ಇ ಆಫೀಸ್ ಮೂಲಕ ಪ್ರತಿಗಳು ಬಂದಿದ್ದರು ಅಂಶಗಳ ಬಗ್ಗೆ ಸಮರ್ಪಕ ವರದಿ ವಿಳಂಬ ಆಗುತ್ತಿದೆ ಆದ್ದರಿಂದ ಅನೇಕ ವರ್ಷಗಳಿಂದ ಉಳುಮೆ ಮಾಡಿ ದವಸ ಧಾನ್ಯಗಳನ್ನು ಬೆಳೆಯುವ ಬಡರೈತರಿಗೆ ಪಟ್ಟಾ ನೀಡಬೇಕೆಂದು ಕೆ.ಪಿ.ಆರ್ .ಎಸ್ ಸಂಘಟನೆ ಒತ್ತಾಯ ಮಾಡುತ್ತದೆ ಎಂದರು.
ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಬೇಕು. ಬರಗಾಲ ಘೋಷಣೆಗೆ ಸಂಬಂಧಿಸಿ, ಕೇಂದ್ರ ಸರ್ಕಾರವು ತನ್ನ ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸಬೇಕು ಎಂದರು.
ತಾಲೂಕು ಸಂಚಾಲಕರಾದ ಎನ್ ಯಲ್ಲಾಲಿಂಗ ಮಾತನಾಡಿ ರಾಜ್ಯದಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು.
ತಕ್ಷಣವೇ ಬಿಪಿಎಲ್ – ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲಪರಿಹಾರ ರೇಷನ್ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ಒದಗಿಸಬೇಕು. ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೆ ಕಡಿವಾಣ ವಿಧಿಸಬೇಕು.
ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಮೇವು ಕುಂದು ಕೊರತೆ ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.
ಕೂಡಲೇ ಕೇಂದ್ರ ಸರ್ಕಾರವು, ಎಲ್ಲಾ ರೈತರ,ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಬೇಕು. ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು.
ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕು. ಬರಗಾಲದ ಕೂಲಿಯಾಗಿ 600 ರೂ ಪಾವತಿಸಬೇಕು.
ರೈತರ ,ಕೃಷಿ ಕೂಲಿಕಾರರ, ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮ ಸಭೆ ನಡೆಸಬೇಕು . ಗ್ರಾಮದಿಂದ ನಡೆಯುವ ಸಂಕಷ್ಟ ವಲಸೆ ತಡೆಯಲು ಮುಂದಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಗಳ ಕಚೇರಿ ಮುಂದೆ ತೀವ್ರತರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದರು.