ಮಹಾಯೋಗಿ ವೇಮನ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಗ್ರಾ.ಪಂ.ಸದಸ್ಯ ಬಸಪ್ಪ ಅಕ್ಕಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 19- ನಮ್ಮ ದೇಶಕ್ಕೆ ಶರಣರು ಸಂತರು ದಾಶಿ೯ಕನಿಕರು ಸಮಾಜದ ಸುಧಾರಣೆಗಾಗಿ ಸಾಕಷ್ಟು ಶ್ರಮೀಸಿದ್ದಾರೆ ಸಮಾಜದಲ್ಲಿ ಸಮಾನತೆ ತರುವಲ್ಲಿ ಕಾರಣಿಕತ೯ರಾದವರು ದೇಶ ಗೋಸ್ಕರ ಸಾಧನೆ ಮಾಡಿದ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೇ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡುವ ನಿಟ್ಟಿನಲ್ಲಿ ನಾವು ಉತ್ತಮ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಹಿರಿಯ ಗ್ರಾಮ ಪಂಚಾಯತ್ ಸದಸ್ಯರು ಬಸಪ್ಪ ಅಕ್ಕಿ ಅವರು ಹೇಳಿದರು.
ತಾಲೂಕಿನ ಮುಧೋಳ ಗ್ರಾಮ ಪಂಚಾಯತಿಯಲ್ಲಿ ವೇಮನ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ ಶುಕ್ರವಾರ ನಡೆದ 612ನೇ ಜಯಂತಿ ಮಹಾಯೋಗಿ ವೇಮನ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಮತಾಜ್ ಬಿ ಹಿರೇಮನಿ, ಮುಖಂಡರಾದ, ತಿರಣೆಪ್ಪ ತಳವಾರ, ಗ್ರಾಪಂ ಕಾರ್ಯದರ್ಶಿ ಕರಶಿದ್ದಪ್ಪ ತಮಿನಾಳ, ವಿ ಆರ್ ಡಬ್ಲ್ಯೂ ವೀರಭದ್ರಪ್ಪ ನಿಡಗುಂದಿ, ಪತ್ರಕರ್ತ ಹುಸೇನ್ ಮೊತೇಖಾನ್, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಸಿಬ್ಬಂದಿಗಳು ಕಂಪ್ಯೂಟರ್ ಆಪರೇಟರ್ ವಿನೋದ್, ವಿನಾಯಕ, ಬಸವರಾಜ್, ವಾಟರ್ ಮ್ಯಾನ್ ಹುಸೇನಸಾಬ್, ದ್ಯಾಮಣ್ಣ ಸಲೀಮ್, ಮತ್ತು ಗ್ರಾಮಸ್ಥರು ಇತರರು ಭಾಗವಹಿಸಿದ್ದರು
