ಕೊಪ್ಪಳ ಗವಿಮಠ ಜಾತ್ರೆಯಲ್ಲಿ
ಗವಿಶ್ರೀ ಕ್ರೀಡಾ ಉತ್ಸವ ಕೊಪ್ಪಳ-2025
ರಾಜ್ಯಮಟ್ಟದ ಕ್ರೀಡಾಪಟುಗಳು ಭಾಗಿ
ಸಂಸದ ಕೆ, ರಾಜಶೇಖರ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 24- ಜಿಲ್ಲೆಯಲ್ಲಿ ಐತಿಹಾಸಿಕವಾಗಿ ಧಾರ್ಮಿಕವಾಗಿ ಹಾಗೂ ಭಕ್ತಿ ಭರವಸೆಯಿಂದ ಜಿಲ್ಲೆ, ರಾಜ್ಯ, ವಿದೇಶಗಳಿಂದಲೂ ಕೂಡ ಭಕ್ತರು ಆಗಮಿಸಿ ನೇರವೆರಿಸುವ ಅಂದಾಜ 25 ಲಕ್ಷ ಅಧಿಕ ಭಕ್ತಾದಿಗಳು, ಜನರು ಸೇರುವಂತಹ ಗವಿಶ್ರೀ ಜಾತ್ರ ಮಹೋತ್ಸವ ಅಂಗವಾಗಿ ರಾಜ್ಯದ ಮಹಾಜನರು, ಯುವಜನರು, ಮಹಿಳೆಯರು, ರೈತರು, ಮಕ್ಕಳು, ಎಲ್ಲಾ ವರ್ಗದವರು ಕೂಡ ಸೇರಿಕೊಂಡು ಜಾನಪದ ಶೈಲಿಯ ಹಾಗೂ ಪ್ರಸ್ತುತ ಪ್ರಚಲಿತವಿರುವ ಆಟಗಳನ್ನು ಸೇರಿಸಿ ಜಾತ್ರಾ ನಿಮಿತ್ಯ ಗವಿಶ್ರೀ ಕ್ರೀಡಾ ಉತ್ಸವ- 2025 ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೆ ರಾಜಶೇಖರ ಹಿಟ್ನಾಳ ಹೇಳಿದರು.
ಅವರು ಮಂಗಳವಾರದಂದು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಸದರಿ ಕ್ರೀಡಾಕೂಟವನ್ನು ಕೊಪ್ಪಳ ಜಿಲ್ಲೆಯ ಗವಿಮಠ ಕೊಪ್ಪಳ, ಕೊಪ್ಪಳ ಜಿಲ್ಲೆಯ ಎಲ್ಲಾ ಗೌರವಾನಿತ ಜನಪ್ರತಿನಿಧಿಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯೋದ್ಯಮಿಗಳು ಕೊಪ್ಪಳ ಇವರ ಸಹಕಾರದಿಂದ ಹಾಗೂ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಶನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಕುಸ್ತಿ ಸಂಘ, ಬ್ಯಾಡ್ಮಿಂಟನ್ ಅಸೋಶಿಯೇಶನ್, ಕಬಡ್ಡಿ ಹಾಗೂ ವಾಲಿಬಾಲ್ ಅಸೋಶಿಯೇಶನ್ ಹಾಗೂ ಇತ್ಯಾದಿ ಹಲವಾರು ಸಂಘ ಸಂಸ್ಥೆಗಳನ್ನ ಒಳಗೊಂಡು ಎಲ್ಲಾ ವರ್ಗದವರು ಮುಕ್ತವಾಗಿ ಭಾಗವಹಿಸುವದು ಗವಿಶ್ರೀ ಕ್ರೀಡಾಕೂಟ-2025ನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ 17 ವಿವಿಧ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.
ಪುರುಷ/ಮಹಿಳೆಯರಿಗೆ ಮುಕ್ತ ; ವಾಲಿಬಾಲ್, ಕಬಡ್ಡಿ, ಮ್ಯಾರಾಥಾನ, ಶೆಟಲ್ ಬ್ಯಾಡ್ಮಿಂಟನ್, ಛದ್ಮವೇಷ, ದೇಹದಾರ್ಡ್ಯ, ಪಂದ್ಯಾವಳಿ , ಪುರುಷರ ಆವ್ಹಾನಿತ ಕ್ರೀಡೆ : ಕ್ರಿಕೆಟ್, ಗಾಳಿಪಟ, ಮಲ್ಲಕಂಬ, ಕುಸ್ತಿ ಪಂದ್ಯಾವಳಿ.
ಪುರುಷರ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ : ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ, ಯುವಕರಿಂದ ಎತ್ತಿನ ಬಂಡಿ ಜಗ್ಗುವದು, ಸಂಗ್ರಾಣಿ ಕಲ್ಲು ಎತ್ತುವದು. ವಿಕಲಚೇತನರ ವಾಲಿಬಾಲ್ ಪಂದ್ಯಾವಳಿ.
ಪುರುಷರ/ ಮಹಿಳೆಯರ ಜಿಲ್ಲಾ ಮಟ್ಟದಲ್ಲಿ : ಹಗ್ಗ ಜಗ್ಗಾಟ ಸ್ಪರ್ಧೆ, ಮಹಿಳೆಯರಿಗೆ ಜಿಲ್ಲಾ ಮಟ್ಟ : ರಂಗೋಲಿ, ಪ್ರೋಬಾಲ್ ಸ್ಪರ್ಧೆ.
ಗಾಳಿಪಟ ಉತ್ಸವ ; ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಹರಿಯಾಣದಿಂದಲೂ ಅನುಭವಿ ನುರಿತ ತಂಡಗಳು ಗವಿಶ್ರೀ ಮೈದಾನದಲ್ಲಿ ಸುಮಾರು 100ಕ್ಕೂ ಅಧಿಕ ಗಾಳಿಪಟವನ್ನು ಪ್ರದರ್ಶನವನ್ನು ಜ, 16 ರಂದು ಮಾಡಲಿದೆ. ಮಕ್ಕಳು ಯುವಕರಿಗೆ ಸ್ಫೂರ್ತಿ ತುಂಬುವಂತೆ ಮಕರ ಸಂಕ್ರಾತಿಯ ವಿಶೇಷವಾಗಿಯೆ ಬೃಹತ್ ಪ್ರಮಾಣದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ.
ಜ , 14. ರಂದು ಸಂಜೆ 3.30 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಗವಿಮಠ ಆವರಣದಲ್ಲಿ ಆಯೋಜಿಸಲಾಗಿದೆ.
ಗವಿಶ್ರೀ ಕ್ರೀಡಾಕೂಟದಲ್ಲಿ ರೈತರನ್ನು ಗಮನದಲ್ಲಿ ಇಟ್ಟುಕೊಂಡು ರೈತರನ್ನು ಖುಷಿಪಡಿಸುವ ಸಲುವಾಗಿ ರೈತರ ಜೀವನ ಅವಿಭಾಜ್ಯ ಅಂಗವಾದ ಎತ್ತು, ಚಕ್ಕಡಿ, ಇವುಗಳನ್ನು ಶೃಂಗಾರ ಪಡಿಸಿ ಸ್ಪರ್ಧೆಯನ್ನು ಜ, 17 ರಂದು ತಾಲ್ಲೂಕ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿ ಗವಿಮಠಕ್ಕೆ ಮುಕ್ತಾಯಗೊಳಿಸಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ರೈತ ಮಕ್ಕಳ ಯುವಜನರಿಗಾಗಿ ಶಕ್ತಿ ಪ್ರದರ್ಶನವಾಗಿ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕ್ರೀಡಾಪಟುಗಳು ಸಿದ್ದರಾಗಿ ಜ, ೫ ರ ನಂತರ ಮಾಹಿತಿ ನೀಡಲಾಗುವುದು ಆಸಕ್ತರು ತಂಡದ ಹೆಸರು ನೊಂದಾಯಿಸಭಹುದು ಎಂದರು .
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ , ಜೆಡಿಎಸ್ ಮುಖಂಡ ವಿರೇಶ ಮಹಾಂತಯ್ಯನಮಠ ಇದ್ದರು.
